ETV Bharat / bharat

ದ್ರೌಪದಿ ಮುರ್ಮುಗೆ ಕೇರಳದಿಂದ ಒಂದೂ ಮತ ಸಿಗಲಿಕ್ಕಿಲ್ಲ: ಯಾಕೆ ಗೊತ್ತಾ? - ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ

ಕೇರಳದಲ್ಲಿ ಬಿಜೆಪಿ ಅಥವಾ ಅದರ ಮಿತ್ರ ಪಕ್ಷದ ಯಾವುದೇ ಶಾಸಕರು ಅಥವಾ ಸಂಸದರಿಲ್ಲ. ಹಾಗಾಗಿ, ಎಲ್​ಡಿಎಫ್ ಹಾಗೂ ಯುಡಿಎಫ್​ನ ಎಲ್ಲ ಮತಗಳು ಯಶವಂತ್ ಸಿನ್ಹಾ ಪರವಾಗಿ ಚಲಾವಣೆಯಾಗಲಿವೆ.

Kerala the only state to vote entirely for Yashwant Sinha
ದ್ರೌಪದಿ ಮುರ್ಮುಗೆ ಕೇರಳದಿಂದ ಒಂದೂ ಮತ ಸಿಗಲಿಕ್ಕಿಲ್ಲ
author img

By

Published : Jun 29, 2022, 3:52 PM IST

ತಿರುವನಂತಪುರಂ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಕೇರಳದ ಅಷ್ಟೂ ಮತಗಳು ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಚಲಾವಣೆಯಾಗಲಿವೆ. ರಾಜ್ಯವೊಂದರ ಎಲ್ಲ ಮತಗಳು ಪ್ರತಿಪಕ್ಷದ ಅಭ್ಯರ್ಥಿಗೆ ಚಲಾವಣೆಯಾಗಲಿರುವ ಏಕೈಕ ರಾಜ್ಯ ಕೇರಳವಾಗಲಿದೆ.

ಕೇರಳದಲ್ಲಿ ಬಿಜೆಪಿ ಅಥವಾ ಅದರ ಮಿತ್ರ ಪಕ್ಷದ ಯಾವುದೇ ಶಾಸಕರು ಅಥವಾ ಸಂಸದರಿಲ್ಲ. ಹಾಗಾಗಿ, ಎಲ್​ಡಿಎಫ್ ಹಾಗೂ ಯುಡಿಎಫ್​ನ ಎಲ್ಲ ಮತಗಳು ಯಶವಂತ್ ಸಿನ್ಹಾ ಪರವಾಗಿ ಚಲಾವಣೆಯಾಗಲಿದ್ದು, ದ್ರೌಪದಿ ಮುರ್ಮು ಅವರಿಗೆ ಒಂದೇ ಒಂದು ಮತ ಇಲ್ಲಿಂದ ಸಿಗುವ ಸಾಧ್ಯತೆಗಳಿಲ್ಲ.

ಸಿಪಿಎಂ ನೇತೃತ್ವದ ಎಲ್​ಡಿಎಫ್​ 99 ಶಾಸಕರು ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ 41 ಶಾಸಕರನ್ನು ಹೊಂದಿದೆ. ಲೋಕಸಭೆಯಲ್ಲಿ ಕಾಂಗ್ರೆಸ್​ನ 19 ಹಾಗೂ ಎಲ್​ಡಿಎಫ್​ನ ಓರ್ವ ಸಂಸದ ಇದ್ದಾರೆ. ರಾಜ್ಯಸಭೆಯಲ್ಲಿ ಎಲ್​ಡಿಎಫ್​ನ 7 ಹಾಗೂ ಕಾಂಗ್ರೆಸ್​ನ ಇಬ್ಬರು ಸಂಸದರಿದ್ದಾರೆ. ಹೀಗಾಗಿ ಈ ಎಲ್ಲ 29 ಸಂಸದರು ಯಶವಂತ್ ಸಿನ್ಹಾರಿಗೆ ವೋಟ್ ನೀಡಲಿದ್ದಾರೆ.

2017ರ ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಅಭ್ಯರ್ಥಿ ರಾಮನಾಥ್ ಕೋವಿಂದ್​ರಿಗೆ ಬಿಜೆಪಿಯ ಒಂದು ಮತ ಬಂದಿತ್ತು. ಆಗ ಓ.ರಾಜಗೋಪಾಲ್ ಬಿಜೆಪಿಯಿಂದ ಶಾಸಕರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.