ETV Bharat / bharat

ಮಹಿಳೆಯರು, ಮಕ್ಕಳಿಗೆ ಸ್ವಯಂ ರಕ್ಷಣಾ ತಂತ್ರಗಳನ್ನ ಕಲಿಸಲು ಮುಂದಾದ ಕೇರಳ ಪೊಲೀಸರು

author img

By

Published : Mar 10, 2023, 3:20 PM IST

ಕೇರಳ ಪೊಲೀಸಿಂಗ್​ ಪ್ರೊಜೆಕ್ಟ್​ ಅಡಿ 2015ರಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣಾ ತಂತ್ರಗಳನ್ನು ಕಲಿಸುವ ವಿಶೇಷ ಕಾರ್ಯಕ್ರಮವಾದ ಜ್ವಾಲಾದ ಪ್ರಾರಂಭ ಮಾಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ( ಕೇರಳ): ಮಹಿಳೆಯರು ಮತ್ತು ಮಕ್ಕಳು ಸ್ವಯಂ ರಕ್ಷಣಾ ತಂತ್ರವನ್ನು ಕಲಿತಿರುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇರಳ ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಅವರು ವಾಕ್​ ಇನ್​ ತರಬೇತಿಯನ್ನು ಆಯೋಜಿಸಿದೆ. ಜನ ಮೈತ್ರಿ ಸುರಕ್ಷಾ ಯೋಜನೆ ಅಡಿ ಈ ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜ್ವಾಲಾ ಎಂಬ ಹೆಸರಿನಲ್ಲಿ ಮಹಿಳೆಯರು ಮತ್ತು ಮಕ್ಕಳು ತಮ್ಮ ವಿರುದ್ಧ ಯಾವುದೇ ದೌರ್ಜನ್ಯ ಅಥವಾ ದೌರ್ಜನ್ಯವನ್ನು ಎದುರಿಸಲು ಸಿದ್ಧರಾಗಲು ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಮಹಿಳೆಯರು ಮತ್ತು ಮಕ್ಕಳಿಗೆ ನುರಿತ ತರಬೇತಿ ಪಡೆದ ಮಹಿಳಾ ಅಧಿಕಾರಿಗಳು ಸ್ವಯಂ ರಕ್ಷಣಾ ತಂತ್ರಗಳನ್ನು ಕಲಿಸಲಿದ್ದಾರೆ. ಈಗಾಗಲೇ ಅನೇಕ ಲಕ್ಷಾಂತರ ಮಹಿಳೆಯರು ಈ ಜ್ವಾಲಾ ಕಾರ್ಯಕ್ರಮದ ಮೂಲಕ ಸ್ವಯಂ ರಕ್ಷಣಾ ತಂತ್ರವನ್ನು ಕಲಿತಿದ್ದಾರೆ. ಕೇರಳ ಪೊಲೀಸಿಂಗ್​ ಪ್ರೊಜೆಕ್ಟ್​ ಅಡಿ 2015ರಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣಾ ತಂತ್ರಗಳನ್ನು ಕಲಿಸುವ ವಿಶೇಷ ಕಾರ್ಯಕ್ರಮವಾದ ಜ್ವಾಲಾದ ಪ್ರಾರಂಭ ಮಾಡಿದೆ.

ಈ ಯೋಜನೆ ಮುಖ್ಯ ಉದ್ದೇಶ ಸ್ವಯಂ ರಕ್ಷಣಾ ತರಬೇತಿ ನೀಡುವುದು ಮತ್ತು ಈ ಕುರಿತು ಮಹಿಳೆ ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವುದಾಗಿದೆ. ಕೇರಳದ ಮಹಿಳೆಯರಲ್ಲಿ ಈ ಆತ್ಮರಕ್ಷಣೆ ಮೂಡಿಸುವ ಈ ಯೋಜನೆ ಇಲ್ಲಿನ ಮಹಿಳೆಯರಿಂದ ಸಾಕಷ್ಟು ಜನಪ್ರಿಯವಾಗಿದೆ. ಅಲ್ಲದೇ ಮಹಿಳೆಯರಿಗೆ ಇಷ್ಟು ದೊಡ್ಡ ಮಟ್ಟದ ಪ್ರಮಾಣದಲ್ಲಿ ಯಾವುದೇ ಏಜೆನ್ಸಿಗಳು ಕೂಡ ಆತ್ಮರಕ್ಷಣೆ ಕೌಶಲ್ಯ ಒದಗಿಸಿಲ್ಲ.

ಕರ್ನಾಟಕ ಸರ್ಕಾರದಿಂದಲೂ ಕರಾಟೆ ಕೋರ್ಸ್​​: ಹೆಣ್ಣು ಮಕ್ಕಳ ಆತ್ಮ ರಕ್ಷಣೆ ದೃಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಈ ಸಂಬಂಧ ಅಲ್ಪಾವಧಿ ಕರಾಟೆ ಕೋರ್ಸ್​ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಕಳೆದ ಡಿಸೆಂಬರ್​ನಲ್ಲಿ ಘೋಷಿಸಿದ್ದರು. ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಇಂತಹದೊಂದು ಕೋರ್ಸ್​​ ಪ್ರಾರಂಭ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನೀಡಲಾಗುವುದು ಎಂದಿದ್ದಾರೆ.

ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆ: ಈಗಾಗಲೇ ಮೆಟ್ರಿಕ್​ ನಂತರದ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ನುರಿತ ತರಬೇತುದಾರರ ಮೂಲಕ ಕರಾಟೆ, ಜುಡೋ, ಟೈಕ್ವಾಂಡೋ ನಂತರ ಸ್ವಯಂ ರಕ್ಷಣಾ ತಂತ್ರಗಳ ತರಬೇತಿಗೆ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ವಸತಿ ಶಾಲೆಗಳಲ್ಲಿ ಉತ್ತನ ಶಿಕ್ಷಣ, ಸೌಲಭ್ಯದ ಜೊತೆಗೆ ಅವರಿಗೆ ಆತ್ಮ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ರೂಪಿಸಿದೆ. ಸಮಾಜ ಕಲ್ಯಾಣ ಇಲಾಖೆ ಅಡಿಯ ಪ್ರತಿ ವಸತಿ ನಿಲಯಗಳಲ್ಲಿ ವಾರಕ್ಕೆ ಎರಡು ಬಾರಿ ಮತ್ತು ತಿಂಗಳಿಗೆ ಎಂಟು ಬಾರಿ ಈ ತರಬೇತಿಯನ್ನು ನೀಡಲಾಗುತ್ತಿದೆ.

ಪ್ರತಿ ಸೆಷನ್ 60 ನಿಮಿಷಗಳ ಅವಧಿಯದ್ದಾಗಿರುತ್ತದೆ ಮತ್ತು ವಿದ್ಯಾರ್ಥಿನಿಯರಿಗೆ ವಿವಿಧ ಸ್ವರಕ್ಷಣೆ ತಂತ್ರಗಳನ್ನು ಕಲಿಸಬೇಕಾಗುತ್ತದೆ. ಕೋರ್ಸ್ ಪ್ರಾರಂಭವಾಗುವ ಮೊದಲು ಪ್ರತಿಯೊಬ್ಬ ವಿದ್ಯಾರ್ಥಿನಿಯು ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ 1000 ಕರಾಟೆ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಇದಕ್ಕಾಗಿ 18 ಕೋಟಿ ಹಣವನ್ನು ಮೀಸಲಿರಿಸಲಾಗಿದೆ.

ಇದನ್ನೂ ಓದಿ: ನಟಿ ಸನ್ನಿ ಲಿಯೋನ್​ಗೆ ಅನಗತ್ಯ ಕಿರುಕುಳ: ಕೇರಳ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.