ತಿರುವನಂತಪುರಂ(ಕೇರಳ): ದೇವರ ನಾಡು ಕೇರಳದಲ್ಲಿ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪದಗ್ರಹಣ ಮಾಡಿದ್ದಾರೆ. ಕ್ಯಾಬಿನೆಟ್ ಸದಸ್ಯರೊಂದಿಗೆ ವಿಜಯನ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಕೇರಳದ ರಾಜ್ಯಪಾಲರಾಗಿರುವ ಆರೀಪ್ ಮಹಮ್ಮದ್ ಖಾನ್ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಿದರು.
ಕಳೆದ ಕೆಲ ದಿನಗಳ ಹಿಂದೆ ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಇಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಪಕ್ಷ 91 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು.
-
Thiruvananthapuram: 20 ministers of the new Kerala cabinet, including NCP's AK Saseendran, Indian National League's (INL) Ahammad Devarkovil, R Bindu and PA Mohammed Riyas, take oath along with CM Pinarayi Vijayan. pic.twitter.com/Zp5FWSRBjF
— ANI (@ANI) May 20, 2021 " class="align-text-top noRightClick twitterSection" data="
">Thiruvananthapuram: 20 ministers of the new Kerala cabinet, including NCP's AK Saseendran, Indian National League's (INL) Ahammad Devarkovil, R Bindu and PA Mohammed Riyas, take oath along with CM Pinarayi Vijayan. pic.twitter.com/Zp5FWSRBjF
— ANI (@ANI) May 20, 2021Thiruvananthapuram: 20 ministers of the new Kerala cabinet, including NCP's AK Saseendran, Indian National League's (INL) Ahammad Devarkovil, R Bindu and PA Mohammed Riyas, take oath along with CM Pinarayi Vijayan. pic.twitter.com/Zp5FWSRBjF
— ANI (@ANI) May 20, 2021
ಕೇರಳದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಸರಳವಾಗಿ ಕಾರ್ಯಕ್ರಮ ನಡೆದಿದ್ದು, ವಿಜಯನ್ ಜೊತೆ 23 ಶಾಸಕರು ಸಚಿರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಅನಾಥವಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ; ಪ್ರಧಾನಿಗೆ ಸೋನಿಯಾ ಪತ್ರ
ಮೋದಿ ಅಭಿನಂದನೆ
ಕೇರಳದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಪಿಣರಾಯಿ ವಿಜಯನ್ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.