ETV Bharat / bharat

ಪರಿಹಾರ ನಿಧಿ ಹಣ ದುರ್ಬಳಕೆ ಆರೋಪ: ಕೇರಳ ಸಿಎಂ ವಿರುದ್ಧದ ಅರ್ಜಿ ವಜಾಗೊಳಿಸಿದ ಲೋಕಾಯುಕ್ತ - misuse of CMDRF by CM Vijayan govt

ಕೇರಳ ಸರ್ಕಾರದ ವಿರುದ್ಧ ಅಧಿಕಾರ, ಪರಿಹಾರ ನಿಧಿ ದುರ್ಬಳಕೆಯ ಅರ್ಜಿಯನ್ನು ಲೋಕಾಯುಕ್ತ ತಿರಸ್ಕರಿಸಿದೆ.

ಕೇರಳ ಸಿಎಂ ವಿರುದ್ಧದ ಅರ್ಜಿ ವಜಾ
ಕೇರಳ ಸಿಎಂ ವಿರುದ್ಧದ ಅರ್ಜಿ ವಜಾ
author img

By ETV Bharat Karnataka Team

Published : Nov 13, 2023, 6:00 PM IST

ತಿರುವನಂತಪುರಂ (ಕೇರಳ) : ಸಿಎಂ ಪಿಣರಾಯಿ ವಿಜಯನ್​ ಅವರ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಣದ ದುರ್ಬಳಕೆ ಮತ್ತು ಸ್ವಜನಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಲೋಕಾಯುಕ್ತ ಸೋಮವಾರ ವಜಾ ಮಾಡಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಾಬು ಮ್ಯಾಥ್ಯೂ ಜೋಸೆಫ್ ಮತ್ತು ಹರುನ್ ಉಲ್ ರಶೀದ್ ಅವರ ತ್ರಿಸದಸ್ಯ ಪೀಠವು ಈ ನಿರ್ಧಾರ ಕೈಗೊಂಡಿದೆ.

ಕೇರಳ ಸಿಎಂ ಮತ್ತವರ ಮಂತ್ರಿಮಂಡಲದ ವಿರುದ್ಧ ಆರ್.ಎಸ್ ಶಶಿಕುಮಾರ್ ಎಂಬುವವರು ನಿಧಿ ದುರ್ಬಳಕೆ ಆರೋಪ ಮಾಡಿ 2019 ರಲ್ಲಿ ಅರ್ಜಿ ಸಲ್ಲಿಸಿದ್ದರು. ಗುರುತರ ಸಮಸ್ಯೆಗಳು ಮತ್ತು ಸಂಕಷ್ಟಗಳಿಗೆ ಬಳಸಿಕೊಳ್ಳಬೇಕಾದ ಪರಿಹಾರ ನಿಧಿಯನ್ನು ಸಿಪಿಎಂ ಸರ್ಕಾರ ಪಕ್ಷದ ವ್ಯಕ್ತಿಗಳಿಗಾಗಿ ಬಳಸಿದೆ. ಇದು ದುರ್ಬಳಕೆಯಾಗಿದ್ದು, ಮುಖ್ಯಮಂತ್ರಿ ಮತ್ತು ಸಚಿವರನ್ನು ಅನರ್ಹಗೊಳಿಸಬೇಕು ಎಂದು ದೂರುದಾರರು ಮನವಿಯಲ್ಲಿ ಕೋರಿದ್ದರು.

ಸಾರ್ವಜನಿಕ ಸೇವೆಯಲ್ಲಿರುವ ಸಿಎಂ ವಿಜಯನ್​ ಮತ್ತು ಅವರ ಮಂತ್ರಿಮಂಡಲದ ಕೆಲ ಸಚಿವರು ತಮ್ಮ ಸ್ಥಾನ ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ವೈಯಕ್ತಿಕ ಹಿತಾಸಕ್ತಿ, ಪಕ್ಷಪಾತ ಮತ್ತು ಭ್ರಷ್ಟ ಉದ್ದೇಶಗಳಿಗೆ ಪರಿಹಾರ ನಿಧಿ ಬಳಕೆ ಮಾಡಲಾಗಿದೆ ಎಂದು ದೂರುದಾರ ಶಶಿಕುಮಾರ್ ಅವರು ಅರ್ಜಿಯಲ್ಲಿ ದೂರಿದ್ದರು.

ಲೋಕಾಯುಕ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾಯಮೂರ್ತಿ ಹರುನ್ ಉಲ್ ರಶೀದ್ ಅವರು ಸಂಪುಟದ ನಿರ್ಧಾರಗಳನ್ನು ತನಿಖೆಗೆ ಒಳಪಡಿಸಬಹುದೇ ಎಂಬ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು. ಬಳಿಕ ಇದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಇದೀಗ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಧೀಶರು, ಅರ್ಜಿಯ ಮಾನ್ಯತೆಯನ್ನೇ ರದ್ದು ಮಾಡಿ, ತಿರಸ್ಕರಿಸಿದರು.

ದೂರುದಾರ ನೀಡಿದ ಕಾಣವೇನು?: ದೂರುದಾರ ಶಿಶಿಕುಮಾರ್​ ಅವರು, ಸರ್ಕಾರದ ವಿರುದ್ಧ ಮಾಡಿದ ಆರೋಪಕ್ಕೆ ಕಾರಣ ನೀಡಿದ್ದಾರೆ. ಎನ್‌ಸಿಪಿ ನಾಯಕ ದಿವಂಗತ ಉಳವೂರು ವಿಜಯನ್, ಸಿಪಿಐ(ಎಂ) ಮಾಜಿ ಶಾಸಕ ದಿವಂಗತ ಕೆ ಕೆ ರಾಮಚಂದ್ರನ್ ನಾಯರ್ ಮತ್ತು ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಪ್ರವೀಣ್ ಅವರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ಮಂಜೂರು ಮಾಡಲಾಗಿದೆ. ಆಡಳಿತಾರೂಢ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಎಸ್ಕಾರ್ಟ್ ನೀಡಲಾಗಿದೆ. ಇದು ನಿಧಿಯ ದುರ್ಬಳಕೆ ಮತ್ತು ಸರ್ಕಾರ ಸ್ವಜನಪಕ್ಷಪಾತ ಮಾಡಿದೆ ಎಂದು ಅವರು ಅರ್ಜಿಯಲ್ಲಿ ದೂರಿದ್ದರು.

ಇದನ್ನೂ ಓದಿ: ದೇಶದ ಪಟಾಕಿ ಕೇಂದ್ರ 'ಶಿವಕಾಶಿ'ಗೆ 50 ಕೋಟಿ ರೂಪಾಯಿ ವ್ಯವಹಾರ ನಷ್ಟ: ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.