ತಿರುವನಂತಪುರಂ(ಕೇರಳ): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನ.16ರಿಂದ ಓಪನ್ ಆಗಿದ್ದು, ದರ್ಶನಕ್ಕಾಗಿ ಆಗಮಿಸುತ್ತಿರುವ ಭಕ್ತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಮಿಕ್ರಾನ್ ಭೀತಿಯ ಮಧ್ಯೆಯೂ ಶುಕ್ರವಾರ ಮತ್ತು ಶನಿವಾರ ಸಾವಿರಾರು ಭಕ್ತರು ದರ್ಶನ ಪಡೆದರು.
ಶುಕ್ರವಾರ 27840 ಹಾಗೂ ಶನಿವಾರ 42354 ಭಕ್ತರು ಶಬರಿಮಲೆಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಒಮಿಕ್ರಾನ್ ಹಿನ್ನೆಲೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದ್ದು, ಭಕ್ತರಿಗೆ ಸ್ಯಾನಿಟೈಸ್ ಹಾಗೂ ಮಾಸ್ಕ್ ನೀಡಿ ದರ್ಶನಕ್ಕೆ ಅವಕಾಶ ಮಾಡುತ್ತಿದೆ.
ಆರ್ಟಿ-ಪಿಸಿಆರ್ ಹಾಗೂ ಕೋವಿಡ್ನ ಎರಡು ಡೋಸ್ ಲಸಿಕೆ ಪಡೆದಿರುವವರಿಗೆ ದರ್ಶನಕ್ಕೆ ಅವಕಾಶ ಮಾಡುವುದಾಗಿ ಈ ಮೊದಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದ್ರೆ ಮಕ್ಕಳಿಗೆ ವಿನಾಯಿತಿ ನೀಡಿತ್ತು.
(ಇದನ್ನೂ ಓದಿ: ಕರ್ನಾಟಕ, ಗುಜರಾತ್ ಆಯ್ತು, ಇದೀಗ ಮಹಾರಾಷ್ಟ್ರದಲ್ಲೂ ಒಮಿಕ್ರಾನ್ ಪತ್ತೆ)