ETV Bharat / bharat

ಕಾಡು ಪ್ರಾಣಿಗಳ ಸಂತಾನ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್​ ಮೊರೆ ಹೋಗಲಿದೆ ಕೇರಳ ಸರ್ಕಾರ

author img

By

Published : Jan 13, 2023, 7:09 PM IST

ಮಾನವ ಪ್ರಾಣಿ ಸಂಘರ್ಷದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡಿನಲ್ಲಿ ಪ್ರಾಣಿಗಳ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ಸಂಘರ್ಷ ಉಂಟಾಗುತ್ತಿದೆ ಎಂದು ಹೇಳಿರುವ ಕೇರಳ ಸರ್ಕಾರ ಕಾಡುಪ್ರಾಣಿಗಳ ಜನಸಂಖ್ಯೆ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ.

ಕಾಡುಪ್ರಾಣಿಗಳ ಸಂತಾನ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್​ ಮೊರೆ ಹೋಗಲಿದೆ ಕೇರಳ ಸರ್ಕಾರ
Kerala government will approach the Supreme Court for control of wild animals

ತಿರುವನಂತಪುರಂ( ಕೇರಳ): ಕಾಡುಪ್ರಾಣಿಗಳಲ್ಲಿ ಸಂತಾನ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವಂತೆ ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದೆ. ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಕೇರಳ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ಆದರೆ, ಅವುಗಳಲ್ಲಿ ಯಾವುದೂ ನಿರೀಕ್ಷಿತ ಫಲಿತಾಂಶವನ್ನು ನೀಡಲಿಲ್ಲ ಎಂದು ಕೇರಳ ಅರಣ್ಯ ಸಚಿವ ಎ ಕೆ ಸಸೀಂದ್ರನ್ ಹೇಳಿದ್ದಾರೆ.

ಮನುಷ್ಯ ಮತ್ತು ಕೃಷಿಯ ಮೇಲೆ ಕಾಡು ಪ್ರಾಣಿಗಳ ದಾಳಿ ಹೆಚ್ಚುತ್ತಿದೆ. ಇಂಥ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಆದ್ದರಿಂದ ನಾವು ಕಾಡು ಪ್ರಾಣಿಗಳಲ್ಲಿ ಜನನ ಪ್ರಮಾಣವನ್ನು ನಿಯಂತ್ರಿಸಲು ಸುಪ್ರೀಂಕೋರ್ಟ್ ಅನ್ನು ಸಂಪರ್ಕಿಸಲಿದ್ದೇವೆ ಎಂದು ಸಸೀಂದ್ರನ್ ಹೇಳಿದರು. ಪ್ರಸ್ತುತ, ಕಾಡು ಪ್ರಾಣಿಗಳಲ್ಲಿ ಅಂಥ ಯಾವುದೇ ಜನನ ನಿಯಂತ್ರಣ ಚಟುವಟಿಕೆಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಇದೆ.

ಹುಲಿ ದಾಳಿಯಿಂದ ವಯನಾಡಿನಲ್ಲಿ ರೈತ ಮೃತಪಟ್ಟಿರುವುದನ್ನು ಸರ್ಕಾರ ಗಮನಿಸಿದ್ದು, ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಕಾಡು ಪ್ರಾಣಿಗಳ ಸಂಖ್ಯೆಯು ಕಾಡುಗಳ ಸಾಮರ್ಥ್ಯವನ್ನು ಮೀರಿದೆ ಮತ್ತು ಹೆಚ್ಚಿದ ಕಾಡು ಪ್ರಾಣಿಗಳ ಸಂಖ್ಯೆಯನ್ನು ಕಾಡುಗಳು ಇನ್ನು ಮುಂದೆ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ರಾಜ್ಯದಲ್ಲಿನ ಅರಣ್ಯಗಳ ವ್ಯಾಪ್ತಿಯನ್ನು ಮ್ಯಾಪ್ ಮಾಡಲು ನಾವು ಅಧ್ಯಯನ ನಡೆಸಲಿದ್ದೇವೆ ಮತ್ತು ಅಧ್ಯಯನದ ಪ್ರಕಾರ ಕಾಡು ಪ್ರಾಣಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.

ಪ್ರಾಣಿಗಳ ದಾಳಿ ನಿಯಂತ್ರಣಕ್ಕೆ ಕ್ರಮ: ಹುಲಿ ದಾಳಿಗೆ ಬಲಿಯಾದ ರೈತನ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಸಾಧ್ಯತೆಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸುತ್ತಿದೆ ಎಂದು ಸಸೀಂದ್ರನ್ ಹೇಳಿದರು. ರೈತನನ್ನು ಕೊಂದ ಹುಲಿಯನ್ನು ಹಿಡಿಯಲು ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಈ ಪ್ರದೇಶದಲ್ಲಿ ಅಳವಡಿಸಲಾಗುವುದು. ಮಾನವ ವಾಸಸ್ಥಳಗಳ ಮೇಲೆ ಕಾಡು ಪ್ರಾಣಿಗಳ ದಾಳಿಯನ್ನು ನಿಯಂತ್ರಿಸಲು ಯಾವುದೇ ಪ್ರಯತ್ನಗಳನ್ನು ನೆರೆಯ ರಾಜ್ಯಗಳ ಸಹಕಾರದೊಂದಿಗೆ ಮಾಡಬಹುದು ಎಂದು ಸಚಿವರು ಹೇಳಿದರು. ಕೇರಳದ ಪ್ರಯತ್ನಕ್ಕೆ ಕರ್ನಾಟಕ ಅರಣ್ಯ ಇಲಾಖೆ ಉತ್ತಮ ಸಹಕಾರ ನೀಡುತ್ತಿದೆ ಎಂದರು.

ಕಾಡಿನಿಂದ ನಾಡಿನತ್ತ ಒನ್ಯಜೀವಿಗಳು: ಎಲ್ಲೆಡೆ ಮಾನವ - ಪ್ರಾಣಿ ಸಂಘರ್ಷದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚಾಗಿ, ಈ ಘರ್ಷಣೆಗಳು ಆನೆಗಳು, ಹುಲಿಗಳು, ಕರಡಿಗಳು, ಕಾಡುಹಂದಿಗಳು ಇತ್ಯಾದಿಗಳ ದಾಳಿಗೆ ಸಂಬಂಧಿಸಿವೆ. ಕೆಲವು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮುಖಾಮುಖಿಯಿಂದ ಭಯಭೀತರಾದ ಜನರು ತಮ್ಮ ಮನೆ, ಹೊಲ ಮತ್ತು ಕೃಷಿ ಭೂಮಿಯನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕಾಡು ಪ್ರಾಣಿಗಳಿಂದ ಅವರ ಜೀವ ಮತ್ತು ಜೀವನಕ್ಕೆ ಬೆದರಿಕೆ ಎದುರಾಗುತ್ತಿದೆ. ಇಂತಹ ಘರ್ಷಣೆಗಳಿಂದಾಗುವ ಗಾಯಗಳು ಮತ್ತು ಸಾವುಗಳು, ಮೃತರಿಗೆ ಪರಿಹಾರ ನೀಡುವುದು, ಗಾಯಗೊಂಡವರಿಗೆ ಬೆಂಬಲ ಮತ್ತು ಜೀವನೋಪಾಯ ಮತ್ತು ಆಸ್ತಿ ನಷ್ಟಕ್ಕೆ ಪರಿಹಾರ ನೀಡುವುದು ಚರ್ಚೆಯ ಕೇಂದ್ರ ಬಿಂದುಗಳಾಗಿವೆ.

ಸಾವುಗಳ ಅಂಕಿ - ಸಂಖ್ಯೆ ನೋಡುವುದಾದರೆ: ಲೋಕಸಭೆಯಲ್ಲಿ ಮಂಡಿಸಲಾದ ವರದಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ 2019 ರಿಂದ 2022 ರವರೆಗೆ ಆನೆಗಳು 1,579 ಜನರನ್ನು ಕೊಂದಿವೆ. ಅದರಲ್ಲಿ ಒಡಿಶಾದಲ್ಲಿ ಅತಿಹೆಚ್ಚು 322, ಜಾರ್ಖಂಡ್ 291 ಮತ್ತು ಪಶ್ಚಿಮ ಬಂಗಾಳದಲ್ಲಿ 240 ಸಾವುಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 307 ಆನೆಗಳು ಮೃತಪಟ್ಟಿವೆ. ಹುಲಿಗಳು 2019 ಮತ್ತು 2021 ರ ನಡುವೆ ಮೀಸಲು ಅರಣ್ಯಗಳಲ್ಲಿ 125 ಮನುಷ್ಯರನ್ನು ಕೊಂದಿವೆ. ಇದರಲ್ಲಿ ಅರ್ಧದಷ್ಟು ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿವೆ.

ಇದನ್ನೂ ಓದಿ: Human-Wildlife conflict: ಮಾನವ-ಪ್ರಾಣಿ ಸಂಘರ್ಷ- ಚಿಕ್ಕಮಗಳೂರಲ್ಲಿ ಹೆಚ್ಚುತ್ತಿದೆ ಆನೆಗಳ ಸಾವಿನ ಸಂಖ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.