ETV Bharat / bharat

ಹಲವೆಡೆ ಲಾಕ್‌ಡೌನ್‌ ವಿಸ್ತರಣೆ, ಕೆಲವೆಡೆ ಅನ್‌ಲಾಕ್‌ ಪ್ರಕ್ರಿಯೆ ಶುರು: ಹೀಗಿದೆ ಸದ್ಯದ ದೇಶದ ಚಿತ್ರಣ.. - will there be another lockdown in India

ಕರ್ನಾಟಕ, ಕೇರಳ, ತಮಿಳುನಾಡು ಸೇರದಂತೆ ಕೆಲವು ರಾಜ್ಯಗಳು ಲಾಕ್‌ಡೌನ್ ಮುಂದುವರೆಸಿವೆ. ದೆಹಲಿ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ವಿನಾಯಿತಿ ನೀಡಲಾಗಿದೆ. ಈಶಾನ್ಯ ರಾಜ್ಯಗಳು ಸಹ ಕೊರೊನಾ ತಡೆಗಿರುವ ನಿರ್ಬಂಧಗಳನ್ನು ವಿಸ್ತರಿಸಿದೆ.

ಭಾರತದಲ್ಲಿ ಕೊರೊನಾ ಕರ್ಫ್ಯೂ , Lockdown news in India
ಕರ್ನಾಟಕ, ಕೇರಳ, ಗೋವಾದಲ್ಲಿ ಕೊರೊನಾ ಲಾಕ್​ಡೌನ್​ ಮುಂದುವರಿಕೆ
author img

By

Published : May 30, 2021, 11:42 AM IST

ನವದೆಹಲಿ: ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾದಂತಹ ಅನೇಕ ರಾಜ್ಯಗಳು ಸೋಮವಾರದಿಂದ ಒಂದು ವಾರದವರೆಗೆ ಲಾಕ್‌ಡೌನ್ ಅಥವಾ ಇತರ ನಿರ್ಬಂಧಗಳನ್ನು ವಿಸ್ತರಿಸಿವೆ. ದೆಹಲಿ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಜನರಿಗೆ ಕೆಲವು ವಿನಾಯಿತಿ ನೀಡಲಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೂನ್ 9 ರವರೆಗೆ ಲಾಕ್​ಡೌನ್​ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಪುದುಚೇರಿ ಸರ್ಕಾರವು ಜೂನ್ 7 ರವರೆಗೆ ಲಾಕ್​ಡೌನ್ ಮುಂದುವರಿಸಲು ನಿರ್ಧರಿಸಿದೆ. ತಮಿಳುನಾಡು, ಕರ್ನಾಟಕದಲ್ಲಿ ಈಗಾಗಲೇ ಲಾಕ್​ಡೌನ್ ಜೂನ್ 7 ರವರೆಗೆ ವಿಸ್ತರಿಸಲಾಗಿದೆ.

ಕೊರೊನಾ ಹರಡುವಿಕೆಯು ರಾಜ್ಯದಲ್ಲಿ ಗಮನಾರ್ಹವಾಗಿ ಕ್ಷೀಣಿಸುತ್ತಿದ್ದರೂ, ನಿರ್ಬಂಧಗಳನ್ನು ತೆಗೆದುಹಾಕುವ ಹಂತವನ್ನು ನಾವು ಇನ್ನೂ ತಲುಪಿಲ್ಲ. ಮೇ 31 ರಿಂದ ಜೂನ್ 9 ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಏರಿದ ಹಿನ್ನೆಲೆಯಲ್ಲಿ ಕೇರಳವು ಮೇ 8 ರಿಂದ ಲಾಕ್ ಡೌನ್ ಆಗಿದೆ.

ಕೇರಳದಲ್ಲಿ ಹೀಗಿದೆ ನಿರ್ಬಂಧ

- ಹೊಸ ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ, ಅಗತ್ಯ ಚಟುವಟಿಕೆಗಳನ್ನು ನಿರ್ವಹಿಸಲು ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಎಲ್ಲಾ ಕೈಗಾರಿಕಾ ಸಂಸ್ಥೆಗಳು ಕನಿಷ್ಠ ಉದ್ಯೋಗಿಗಳೊಂದಿಗೆ ಒಟ್ಟು ಶಕ್ತಿಯ ಶೇ 50 ಮೀರದಂತೆ ಕಾರ್ಯನಿರ್ವಹಿಸಬಹುದು.

- ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 5 ರವರೆಗೆ ವಿಸ್ತೃತ ಸಮಯದೊಂದಿಗೆ ಬ್ಯಾಂಕ್​ಗಳು ತೆರೆದಿರುತ್ತವೆ. ಪುಸ್ತಕ, ಮದುವೆಗಳಿಗೆ ಜವಳಿ, ಆಭರಣ ಮತ್ತು ಪಾದರಕ್ಷೆಗಳನ್ನು ಮಾರಾಟ ಮಾಡುವ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ.

ಕರ್ನಾಟಕದಲ್ಲಿ ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಸಿಎಂ ಹೇಳಿದ್ದು..

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಮಾತನಾಡಿ, ಸಾರ್ವಜನಿಕರು ಸಹಕರಿಸಿದರೆ ಲಾಕ್​ಡೌನ್ ವಿಸ್ತರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಮತ್ತು ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ ಎಂದಿದ್ದಾರೆ.

ಮಹಾರಾಷ್ಟ್ರ ಇನ್ನೂ 15 ದಿನ ಲಾಕ್‌

ಏಪ್ರಿಲ್ 14 ರಿಂದ ಜಾರಿಗೆ ಬಂದ ಲಾಕ್‌ಡೌನ್ ರೀತಿಯ ನಿರ್ಬಂಧಗಳನ್ನು ಮಹಾರಾಷ್ಟ್ರ ಸರ್ಕಾರ ಇನ್ನೂ 15 ದಿನಗಳವರೆಗೆ ವಿಸ್ತರಿಸಿದೆ. ಅವು ಜೂನ್ 1 ರಂದು ಕೊನೆಗೊಳ್ಳಬೇಕಿತ್ತು.

ಗೋವಾದಲ್ಲೂ ಒಂದು ವಾರ ವಿಸ್ತರಣೆ

ಪ್ರಸ್ತುತ ಕೊರೊನಾ ಕರ್ಫ್ಯೂ ಅನ್ನು ಜೂನ್ 7 ರವರೆಗೆ ಇನ್ನೊಂದು ವಾರ ವಿಸ್ತರಿಸಲು ಗೋವಾ ಸರ್ಕಾರ ಶನಿವಾರ ನಿರ್ಧರಿಸಿದೆ.

ದೆಹಲಿ ಅನ್‌ಲಾಕ್‌ ಪ್ರಕ್ರಿಯೆ ಶುರು

ದೆಹಲಿ ಸೋಮವಾರದಿಂದ ಭಾಗಶಃ ಪುನಃ ತೆರೆಯುತ್ತದೆ. ಇತರ ಲಾಕ್‌ಡೌನ್ ನಿರ್ಬಂಧಗಳು ಜೂನ್ 7 ರವರೆಗೆ ಮುಂದುವರಿಯುತ್ತದೆ.

ಉತ್ಪಾದನಾ ಘಟಕಗಳು ಮತ್ತು ನಿರ್ಮಾಣ ತಾಣಗಳಲ್ಲಿ ಅನುಮತಿಸಲಾದ ಕಾರ್ಮಿಕರು ಮತ್ತು ನೌಕರರು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಯಿಂದ ಒಂದು ವಾರ ವಿಸ್ತರಿಸಲ್ಪಟ್ಟಿರುವ ಲಾಕ್‌ಡೌನ್ ಸಮಯದಲ್ಲಿ ಚಲನೆಗೆ ಇ ಪಾಸ್‌ಗಳನ್ನು ಪಡೆಯಬೇಕಾಗುತ್ತದೆ.

ಮಧ್ಯಪ್ರದೇಶದಲ್ಲಿ ಹೇಗಿದೆ ಸ್ಥಿತಿಗತಿ?

ಜೂನ್ 1 ರಿಂದ ಕೊರೊನಾ ಕರ್ಫ್ಯೂ ನಿರ್ಬಂಧಗಳನ್ನು ಹಂತವಾರು ಅನ್​ಲಾಕ್ ಮಾಡಲು ಮಧ್ಯಪ್ರದೇಶ ಸರ್ಕಾರ ಅನುಮತಿಸಿದ್ದರೂ, ವಾರಾಂತ್ಯದ ಲಾಕ್​ಡೌನ್ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ನಿರ್ಬಂಧ ಬಿಗಿ

ಆಂಧ್ರಪ್ರದೇಶದಲ್ಲಿ, ತಿರುಪತಿ ಮತ್ತು ಚಿತ್ತೂರು ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ಕೊರೊನಾ ನಿರ್ಬಂಧಗಳನ್ನು ಮತ್ತಷ್ಟು ಬಿಗಿ ಗೊಳಿಸಲಾಗುವುದು ಮತ್ತು ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜೂನ್ 1 ರಿಂದ ಜೂನ್ 15 ರವರೆಗೆ ಹದಿನೈದು ದಿನಗಳವರೆಗೆ ವಿಸ್ತರಿಸಲಾಗುವುದು.

ಹಿಮಾಚಲ ಪ್ರದೇಶದಲ್ಲೂ ವಿಸ್ತರಣೆ

ಹಿಮಾಚಲ ಪ್ರದೇಶ ಸರ್ಕಾರವು ಶುಕ್ರವಾರ ಕೊರೊನಾ ವೈರಸ್ ನಿರ್ಬಂಧವನ್ನು ಜೂನ್ 7 ರವರೆಗೆ ವಿಸ್ತರಿಸಿದೆ.

ಈಶಾನ್ಯ ರಾಜ್ಯಗಳಲ್ಲಿ ಕೋವಿಡ್‌ ತಡೆ ಕ್ರಮಗಳು

ಈಶಾನ್ಯ ರಾಜ್ಯಗಳು ನಿರ್ಬಂಧಗಳನ್ನು ವಿಸ್ತರಿಸಿದೆ. ನಾಗಾಲ್ಯಾಂಡ್ ಸರ್ಕಾರವು ರಾಜ್ಯದ ಲಾಕ್‌ಡೌನ್ ಅನ್ನು ಜೂನ್ 11 ರವರೆಗೆ ವಿಸ್ತರಿಸಿದೆ. ಅರುಣಾಚಲ ಪ್ರದೇಶವು ರಾಜ್ಯದ ಏಳು ಜಿಲ್ಲೆಗಳಲ್ಲಿ ಜೂನ್ 7 ರವರೆಗೆ ಲಾಕ್‌ಡೌನ್ ಮುಂದುವರಿಸುವುದಾದರೆ, ಮಣಿಪುರ ಸರ್ಕಾರ ಏಳು ಜಿಲ್ಲೆಗಳಲ್ಲಿ ಕರ್ಫ್ಯೂ ಜೂನ್ 11 ರವರೆಗೆ ವಿಸ್ತರಿಸಿದೆ.

ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಲ್ಲಿ ನಡೆಯುತ್ತಿರುವ ಲಾಕ್ ಡೌನ್ ಅನ್ನು ಜೂನ್ 6 ರ ಬೆಳಿಗ್ಗೆ 4 ಗಂಟೆಯವರೆಗೆ ಮಿಜೋರಾಂ ಸರ್ಕಾರ ಶನಿವಾರ ವಿಸ್ತರಿಸಿದೆ.

ಮೇಘಾಲಯ ಸರ್ಕಾರವು ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯ ಒಟ್ಟು ಲಾಕ್‌ಡೌನ್ ಅನ್ನು ಇನ್ನೊಂದು ವಾರ ವಿಸ್ತರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.