ETV Bharat / bharat

ನೈತಿಕ ಪೊಲೀಸ್​ಗಿರಿಗೆ ವಿದ್ಯಾರ್ಥಿಗಳ ತಕ್ಕ ಉತ್ತರ.. ಒಬ್ಬರ ಮೇಲೊಬ್ಬರು ಕುಳಿತು ಪ್ರತಿಭಟನೆ

author img

By

Published : Jul 22, 2022, 10:50 PM IST

ಕಾಲೇಜ್​ ಆವರಣದ ಹೊರಗಿರುವ ಬಸ್​ ತಂಗುದಾಣದಲ್ಲಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುತ್ತ ಕೂರುತ್ತಿದ್ದರು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ನೈತಿಕ ಪೊಲೀಸ್​​ಗಿರಿ ಮೆರೆದಿದ್ದರು.

Kerala engineering students
Kerala engineering students

ತಿರುವನಂತಪುರಂ(ಕೇರಳ): ನೈತಿಕ ಪೊಲೀಸ್​ಗಿರಿ ನಡೆಸಿದ ಸ್ಥಳೀಯರ ವಿರುದ್ಧ ಕೇರಳ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಈ ಮೂಲಕ ಅವರಿಗೆ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ಕಾಲೇಜ್​ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಸ್​​ ಸ್ಟ್ಯಾಂಡ್​ನಲ್ಲಿ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಇದರಿಂದ ಸ್ಥಳೀಯರು ಬಸ್​​ ತಂಗುದಾಣದ ಬೆಂಚ್​ ತುಂಡರಿಸಿ ಮೂರು ಭಾಗ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಬೆಂಚ್​ಗಳ ಮೇಲೆ ಒಬ್ಬರ ಮೇಲೆ ಒಬ್ಬರು ಕೂತು ವಿನೂತನವಾಗಿ ಪ್ರತಿಭಟಿಸಿದರು. ಈ ಮೂಲಕ ನೈತಿಕ ಪೊಲೀಸ್​ಗಿರಿಗೆ ತಕ್ಕ ಉತ್ತರ ನೀಡಿದ್ದಾರೆ.

ನೈತಿಕ ಪೊಲೀಸ್​ಗಿರಿಗೆ ವಿದ್ಯಾರ್ಥಿಗಳ ತಕ್ಕ ಉತ್ತರ... ಒಬ್ಬರ ಮೇಲೊಬ್ಬರು ಕುಳಿತು ಪ್ರತಿಭಟನೆ

ಕಾಲೇಜ್​ ಆವರಣದ ಹೊರಗಿರುವ ಬಸ್​ ತಂಗುದಾಣದಲ್ಲಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುತ್ತ ಕೂರುತ್ತಿದ್ದರು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಒಟ್ಟಿಗೆ ಕೂರಬಾರದು ಎಂಬ ಕಾರಣಕ್ಕೆ ತಂಗುದಾಣದ ಬೆಂಚ್​ ಕತ್ತರಿಸಿದ್ದರು. ರೆಸಿಡೆನ್ಶಿಯಲ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಚೆರುವಕ್ಕಲ್ ಜಯನ್ ನೇತೃತ್ವದ ಸದಸ್ಯರು ಈ ರೀತಿಯಾಗಿ ನಡೆದುಕೊಳ್ಳುವ ಮೂಲಕ ನೈತಿಕ ಪೊಲೀಸ್‌ಗಿರಿ ಮಾಡಿದ್ದರು. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಸಹ ಮಾಡಿದ್ದರು.

ಇದನ್ನ ವಿರೋಧಿಸಿ ಒಬ್ಬರು ಮತ್ತೊಬ್ಬರ ಮೇಲೆ ಕುಳಿತುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್​​ ಸ್ಟೇಟಸ್​​, ಫೇಸ್​ಬುಕ್​ಗಳಲ್ಲಿ ಹರಿದಾಡಿವೆ. ಘಟನೆಗೆ ಡಿವೈಎಫ್​ಐ, ಸಿಪಿಐ(ಎಂ) ಯುವ ಘಟಕ ತೀವ್ರವಾಗಿ ಖಂಡಿಸಿದ್ದು, ಇಂತಹ ಪೊಲೀಸ್​​ಗಿರಿಗೆ ಅವಕಾಶ ನೀಡಲ್ಲ ಎಂದಿದ್ದಾರೆ. ಘಟನಾ ಸ್ಥಳಕ್ಕೆ ತಿರುವನಂತಪುರಂ ಮೇಯರ್​ ಆರ್ಯ ರಾಜೇಂದ್ರನ್​ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿರಿ: ಟಿಎಂಸಿ ಸಚಿವರ ಆಪ್ತೆ ಮನೆಯಲ್ಲಿ ₹20 ಕೋಟಿ ನಗದು.. ಮುಂದುವರಿದ ಶೋಧಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.