ತಿರುವನಂತಪುರಂ(ಕೇರಳ): ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿರುವ ಕೇರಳ ಇದೀಗ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಕೋವಿಡ್ ಸಮಯದಲ್ಲಿ ಬರೋಬ್ಬರಿ 6 ಸಾವಿರ ಆನ್ಲೈನ್ ತರಗತಿ ನಡೆಸಿದೆ.
ಕೋವಿಡ್ ಸಮಯದಲ್ಲಿ ದೇಶಾದ್ಯಂತ ಶಾಲಾ - ತರಗತಿ ಬಂದ್ ಮಾಡಲಾಗಿತ್ತು. ಈ ವೇಳೆ, ಆನ್ಲೈನ್ ತರಗತಿ ನಡೆಸಲು ಅನುಮತಿ ನೀಡಿತ್ತು. ಇದರ ಪ್ರಯೋಜನ ಪಡೆದುಕೊಂಡಿರುವ ಕೇರಳ ಬರೋಬ್ಬರಿ 43 ಲಕ್ಷ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ತೆಗೆದುಕೊಂಡಿದೆ.
ಇದನ್ನೂ ಓದಿ: ಈಗಲೂ ಕೃಷಿ ಕಾಯ್ದೆಗಳನ್ನ ಅಮಾನತಿನಲ್ಲಿಡಲು ನಾವು ಬದ್ಧ: ಪ್ರಧಾನಿ ಮೋದಿ
ಫಸ್ಟ್ ಬೆಲ್ ಎಂಬ ಶೀರ್ಷಿಕೆಯಡಿ ಡಿಜಿಟಲ್ ತರಗತಿ ಆರಂಭಿಸಲಾಗಿದ್ದು, ಸರ್ಕಾರಿ ಸ್ವಾಮ್ಯದ KITE VICTERS ಶೈಕ್ಷಣಿಕ ಚಾನೆಲ್ ಮೂಲಕ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಮೊದಲ ಭಾಗವಾಗಿ 6,200 ಕ್ಲಾಸ್ ತೆಗೆದುಕೊಳ್ಳಲಾಗಿದೆ. ಈ ಎಲ್ಲ ವಿಡಿಯೋಗಳು ಆನ್ಲೈನ್ನಲ್ಲೂ ಲಭ್ಯ ಇವೆ. ಕೇರಳ ಈಗಾಗಲೇ 10 ಹಾಗೂ 12ನೇ ತರಗತಿಗಳಿಗಾಗಿ ವಾರ್ಷಿಕ ಪರೀಕ್ಷೆ ಘೊಷಣೆ ಮಾಡಿದ್ದು, ಮಾರ್ಚ್ 17ರಿಂದ ಈ ಪರೀಕ್ಷೆಗಳು ನಡೆಯಲಿವೆ.