ತಿರುವನಂತಪುರಂ: ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ದೆಹಲಿಯಿಂದ ಕರೆ ತರಲು ಕೇರಳ ಸರ್ಕಾರ 3 ಚಾರ್ಟರ್ಡ್ ವಿಮಾನಗಳ ವ್ಯವಸ್ಥೆ ಮಾಡಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಬೆಳಗ್ಗೆ 9.30ಕ್ಕೆ, ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 6.30ಕ್ಕೆ ದೆಹಲಿಯಿಂದ ಹೊರಡಲಿರುವ ಚಾರ್ಟರ್ಡ್ ವಿಮಾನಗಳು ಕೊಚ್ಚಿಗೆ ಬರಲಿವೆ. ಬಳಿಕ ಅಲ್ಲಿಂದ ತಿರುವನಂತಪುರಂ ಹಾಗೂ ಕಾಸರಗೋಡಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
-
Today GoK has arranged 3 chartered flights for our students repatriated from #Ukraine. The flights to Kochi will depart from Delhi at 0930,1530 & 1830. Buses have been arranged to Trivandrum and Kasargod. NORKA teams, including women officials are all set to receive the students.
— Pinarayi Vijayan (@vijayanpinarayi) March 3, 2022 " class="align-text-top noRightClick twitterSection" data="
">Today GoK has arranged 3 chartered flights for our students repatriated from #Ukraine. The flights to Kochi will depart from Delhi at 0930,1530 & 1830. Buses have been arranged to Trivandrum and Kasargod. NORKA teams, including women officials are all set to receive the students.
— Pinarayi Vijayan (@vijayanpinarayi) March 3, 2022Today GoK has arranged 3 chartered flights for our students repatriated from #Ukraine. The flights to Kochi will depart from Delhi at 0930,1530 & 1830. Buses have been arranged to Trivandrum and Kasargod. NORKA teams, including women officials are all set to receive the students.
— Pinarayi Vijayan (@vijayanpinarayi) March 3, 2022
ಉಕ್ರೇನ್‌ನಿಂದ ಹಿಂದಿರುಗಿದವರಿಗೆ ಸಹಾಯ ಮಾಡಲು ಮಹಿಳಾ ಅಧಿಕಾರಿಗಳು ಸೇರಿದಂತೆ ಅನಿವಾಸಿ ಕೇರಳೀಯರ ವ್ಯವಹಾರಗಳ (ನಾರ್ಕಾ) ತಂಡಗಳನ್ನು ರಾಜ್ಯದ ಎಲ್ಲಾ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ. 'ಆಪರೇಷನ್ ಗಂಗಾ' ಅಡಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಿಶೇಷ ವಿಮಾನಗಳ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು.
ಹಂಗೇರಿ, ರೊಮೇನಿಯಾ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ ವಿದ್ಯಾರ್ಥಿಗಳನ್ನು ಹೊತ್ತ 9 ವಿಮಾನಗಳು ಟೇಕ್‌ಆಫ್ ಆಗಿವೆ. ಇದರಲ್ಲಿ ಭಾರತೀಯ ವಾಯು ಸೇನೆಯ ವಿಮಾನಗಳೂ ಸೇರಿವೆ. ಇನ್ನೂ 6 ವಿಮಾನಗಳು ಶೀಘ್ರದಲ್ಲೇ ಹೊರಡುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, 3000ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲಾಗಿದೆ ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಉಳಿದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ 'ಆಪರೇಷನ್ ಗಂಗಾ' ಅಡಿ ವಿಮಾನಗಳನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರೋ ಭಾರತದ ವಿದ್ಯಾರ್ಥಿಗಳನ್ನ ನೋಡಿದ್ರೆ ಬೇಸರ ಎನಿಸುತ್ತೆ - ಸುಪ್ರೀಂಕೋರ್ಟ್