ETV Bharat / bharat

ಕೇರಳದಲ್ಲಿ ಅಮೆರಿಕದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರು ಆರೋಪಿಗಳ ಬಂಧನ - ಅಮೆರಿಕದ ಮಹಿಳೆ

ಕೇರಳದ ಕೊಲ್ಲಂ ಜಿಲ್ಲೆಯ ವಲ್ಲಿಕಾವು ಅಮೃತಪುರಿಯಲ್ಲಿ ಅಮೆರಿಕದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಪೊಲೀಸ್​ ಕೇಸ್​ ದಾಖಲಾಗಿದೆ.

KERALA: American woman sexually assaulted in Kollam, two accused held
ಕೇರಳದಲ್ಲಿ ಅಮೆರಿಕದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರು ಆರೋಪಿಗಳ ಬಂಧನ
author img

By

Published : Aug 2, 2023, 8:13 PM IST

ಕೊಲ್ಲಂ (ಕೇರಳ): ಕೇರಳ ಪ್ರವಾಸ ಕೈಗೊಂಡಿದ್ದ ಅಮೆರಿಕದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೆರಿಝಿಕ್ಕಲ್ ಪನ್ನಿಸ್ಸೆರಿಲ್‌ನ ನಿಖಿಲ್ ಹಾಗೂ ಚೆರಿಝಿಕ್ಕಲ್ ಅರಯಸೆರಿಲ್‌ನ ಜಯನ್ ಎಂಬುವವರೇ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

44 ವರ್ಷದ ಅಮೆರಿಕದ ಮಹಿಳೆ ಜುಲೈ 22ರಂದು ಕೇರಳಕ್ಕೆ ಬಂದಿದ್ದರು. ಅಲ್ಲಿಂದ ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿ ಬಳಿಯ ಪ್ರಸಿದ್ಧ ಆಧ್ಯಾತ್ಮಿಕ ಗುರು ಮಾತಾ ಅಮೃತಾನಂದಮಯಿ ದೇವಿಯ ಆಶ್ರಮ ಇರುವ ವಲ್ಲಿಕಾವು ಅಮೃತಪುರಿಗೆ ಭೇಟಿ ನೀಡಿದ್ದರು. ಜುಲೈ 31ರಂದು ಈ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ.

ಅಮೃತಪುರಿ ಆಶ್ರಮದ ಬಳಿಯ ಕಡಲತೀರದಲ್ಲಿ ಕುಳಿತಿದ್ದಾಗ ಮಹಿಳೆ ಜೊತೆ ಸ್ನೇಹ ಬೆಳೆಸಿದ ಆರೋಪಿಗಳು ಮೊದಲು ಸಿಗರೇಟ್ ಬೇಕೇ ಎಂದು ಕೇಳಿದ್ದಾರೆ. ಅದನ್ನು ನಿರಾಕರಿಸಿದಾಗ ಮದ್ಯದ ಆಮಿಷವೊಡ್ಡಿ ಬೈಕ್​ನಲ್ಲಿ ಕರೆದುಕೊಂಡು ನಿರ್ಜನ ಪ್ರದೇಶದ ಮನೆಗೆ ಕರೆದೊಯ್ದು ಕಿರುಕುಳ ನೀಡಿದ್ದಾರೆ. ಅಲ್ಲದೇ, ಅಲ್ಲಿಯೇ ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದರಿಂದ ಸಂತ್ರಸ್ತೆ ಪ್ರಜ್ಞೆ ತಪ್ಪಿದ್ದರು ಎಂದು ವರದಿಯಾಗಿದೆ.

ನಂತರ ಸಂತ್ರಸ್ತೆ ಆಶ್ರಮವನ್ನು ತಲುಪಿ ಕಿರುಕುಳದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಶ್ರಮದ ಅಧಿಕಾರಿಗಳು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ದೂರು ದಾಖಲಿಸಿಕೊಂಡು ಕರುನಾಗಪಲ್ಲಿ ಪೊಲೀಸರು ತನಿಖೆ ನಡೆಸಿ ಮಂಗಳವಾರ ಆರೋಪಿಗಳಾದ ನಿಖಿಲ್ ಮತ್ತು ಜಯನ್​ನನ್ನು ಬಂಧಿಸಲಾಗಿದೆ. ಐಪಿಎಸ್​ ಸೆಕ್ಷನ್​ 376ಡಿ ಮತ್ತು 376(2)(ಎನ್​) ಅಡಿಯಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Harassment case: ಕಿರುಕುಳ ನೀಡಿದ್ದ ಆರೋಪಿ ಬಂಧನ: ರಾಜಸ್ಥಾನ ಪೊಲೀಸರಿಗೆ ಧನ್ಯವಾದ ತಿಳಿಸಿದ ವಿದೇಶಿ ಮಹಿಳೆ

ಕಳೆದ ಜುಲೈನಲ್ಲಿ ರಾಜಸ್ಥಾನದ ಜೈಪುರದಲ್ಲಿ ವಿದೇಶಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಈ ಮಹಿಳೆ ತನ್ನ ಹೋಟೆಲ್​ಗೆ ಹೋಗುವ ದಾರಿಯಲ್ಲಿ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿರುವ ವಿಡಿಯೋ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಬಿಕಾನೆರ್​ ಜಿಲ್ಲೆಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು.

ಮತ್ತೊಂದೆಡೆ, ಈ ಘಟನೆ ಸಂತ್ರಸ್ತ ಮಹಿಳೆಯನ್ನು ಸಂಪರ್ಕಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಆಕೆಯ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪೊಲೀಸರು ಸಂಪರ್ಕಿಸಿದ್ದರು. ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಕೆಗೆ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿದೇಶಿ ಮಹಿಳೆ ರಾಜಸ್ಥಾನ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ: 'ಲೋಕಲ್​ ಸಿನಿಮಾ' ಹೆಸರಲ್ಲಿ ಅತ್ಯಾಚಾರ​ ವಿಡಿಯೋ ಮಾರಾಟ ದಂಧೆ, ಇದಕ್ಕಿದೆ ಪೊಲೀಸರ ಕೃಪಾಕಟಾಕ್ಷ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.