ETV Bharat / bharat

ವರನಿಗೆ ಕೊರೊನಾ: ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಯಲ್ಲೇ ತಾಳಿ ಕಟ್ಟಿಸಿಕೊಂಡಳು ವಧು..! - ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಯಲ್ಲೇ ತಾಳಿ ಕಟ್ಟಿಸಿಕೊಂಡ ವಧು

ಕೇರಳದ ಆಸ್ಪತ್ರೆಯಲ್ಲೇ ಜೋಡಿವೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವೇಳೆ ವಧು ಪಿಪಿಇ ಕಿಟ್​ ಧರಿಸಿ ತಾಳಿ ಕಟ್ಟಿಸಿಕೊಂಡಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

kerala
kerala
author img

By

Published : Apr 25, 2021, 8:06 PM IST

Updated : Apr 25, 2021, 9:06 PM IST

ತಿರುವನಂತಪುರಂ(ಕೇರಳ): ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಮಧ್ಯೆ ದೇಶದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ಸಹ ಬೆಳಕಿಗೆ ಬರುತ್ತಿವೆ.

ಡೆಡ್ಲಿ ವೈರಸ್​ ಕಾರಣ ರಾಜಸ್ಥಾನದ ಪೊಲೀಸ್ ಪೇದೆಯೋರ್ವಳಿಗೆ ರಜೆ ಸಿಗದ ಕಾರಣ ಪೊಲೀಸ್ ಠಾಣೆಯಲ್ಲೇ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನಡೆಸಲಾಗಿತ್ತು. ಇದೀಗ ಕೇರಳದ ಅಲಪ್ಪುಜಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೋಡಿವೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವಿಶೇಷವೆಂದರೆ ಮದುಮಗನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆತನ ಎದುರು ಪಿಪಿಇ ಕಿಟ್​ ಧರಿಸಿಕೊಂಡು ವಧು ತಾಳೆ ಕಟ್ಟಿಸಿಕೊಂಡಿದ್ದಾಳೆ.

ಪಿಪಿಇ ಕಿಟ್​ ಧರಿಸಿ ತಾಳಿ ಕಟ್ಟಿಸಿಕೊಂಡ ಯುವತಿ

ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಈ ಮದುವೆ ಆಸ್ಪತ್ರೆಯಲ್ಲಿ ನಡೆದಿದ್ದು, ಇದರ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೇರಳದಲ್ಲಿ ಪ್ರತಿದಿನ ಸಾವಿರಾರು ಕೋವಿಡ್​ ಪ್ರಕರಣಗಳು ದಾಖಲಾಗುತ್ತಿಚೆ. ಶನಿವಾರ 26,685 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, 73 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 1.98 ಲಕ್ಷ ಸಕ್ರಿಯ ಪ್ರಕರಣಗಳಿವೆ.

Kerala couple
ಆಸ್ಪತ್ರೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
Last Updated : Apr 25, 2021, 9:06 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.