ಕೊಟ್ಟಾಯಂ(ಕೇರಳ): ದೇಶದಲ್ಲಿ ಸಾಕ್ಷರತೆ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುವ ಕೇರಳದಲ್ಲಿ ವೃದ್ಧೆಯೊಬ್ಬರು ಸಾಕ್ಷರತಾ ಪರೀಕ್ಷೆಯಲ್ಲಿ ನೂರಕ್ಕೆ 89 ಅಂಕಗಳನ್ನು ಪಡೆದು ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಆಯರಕುನ್ನಂ ಪಂಚಾಯತ್ ಆಯೋಜನೆ ಮಾಡಿದ್ದ ಕೇರಳ ರಾಜ್ಯ ಸಾಕ್ಷರತಾ ಮಿಷನ್(Kerala Literacy Mission Exam)ನ ಪರೀಕ್ಷೆಯಲ್ಲಿ 104 ವರ್ಷದ ಕುಟ್ಟಿಯಮ್ಮ ನೂರಕ್ಕೆ 89 ಅಂಕಗಳನ್ನು ಪಡೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ತಮ್ಮ ಮನೆಯಿಂದಲೇ ಸಾಕ್ಷರತಾ ಪರೀಕ್ಷೆಯಲ್ಲಿ ಭಾಗವಹಿಸಿರುವ ಅವರು ನಾಲ್ಕನೇ ತರಗತಿ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಂಡಿದ್ದಾರೆ. ಕುಟ್ಟಿಯಮ್ಮ ಅವರ ಪತಿ ಟಿ.ಕೆ. ಕೊಂಥಿ 2002ರಲ್ಲಿ ನಿಧನರಾಗಿದ್ದರು.
ಈ ಕುರಿತು ಸೋಮವಾರ ಎಎನ್ಐಗೆ ಪ್ರತಿಕ್ರಿಯೆ ನೀಡಿರುವ ಕುಟ್ಟಿಯಮ್ಮ ಶಿಕ್ಷಕಿ ರೆಹ್ನಾ ನನಗೆ ಮಲಯಾಳಂನಲ್ಲಿ ಹೇಗೆ ಅಕ್ಷರಗಳನ್ನು ಬರೆಯಬೇಕೆಂದು, ಹೇಗೆ ಓದಬೇಕು ಎಂದು ಕುಟ್ಟಿಯಮ್ಮ ಹೇಳಿಕೊಟ್ಟರು ಎಂದಿದ್ದಾರೆ.
ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ವಾಯುತ್ತ ಸಂಸ್ಥೆಯಾಗಿದ್ದು, ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಇದನ್ನೂ ಓದಿ: ನವದೆಹಲಿ: 1 ಕೋಟಿ ರೂ. ಮೌಲ್ಯದ 2.5 ಕೆ.ಜಿ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ