ಮೊಗಾ(ಪಂಜಾಬ್): ಎರಡು ದಿನಗಳ ಪಂಜಾಬ್ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Delhi CM Arvind Kejriwal) ಮೊಗಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ(AAP Govt) ಸರ್ಕಾರ ರಚನೆ ಮಾಡಿದ್ರೆ 18+ ಎಲ್ಲ ಯುವತಿಯರಿಗೂ ಪ್ರತಿ ತಿಂಗಳು 1 ಸಾವಿರ ರೂ. ಸಹಾಯಧನ ನೀಡುವುದಾಗಿ ಹೇಳಿದ್ದಾರೆ.
-
If we form govt in Punjab in 2022, then we will give every woman of the state, who is above 18 years of age, Rs 1000 per month. If a family has 3 female members then each will get Rs 1000. This'll be the world's biggest women empowerment program: Delhi CM Arvind Kejriwal in Moga pic.twitter.com/7hAwC4achY
— ANI (@ANI) November 22, 2021 " class="align-text-top noRightClick twitterSection" data="
">If we form govt in Punjab in 2022, then we will give every woman of the state, who is above 18 years of age, Rs 1000 per month. If a family has 3 female members then each will get Rs 1000. This'll be the world's biggest women empowerment program: Delhi CM Arvind Kejriwal in Moga pic.twitter.com/7hAwC4achY
— ANI (@ANI) November 22, 2021If we form govt in Punjab in 2022, then we will give every woman of the state, who is above 18 years of age, Rs 1000 per month. If a family has 3 female members then each will get Rs 1000. This'll be the world's biggest women empowerment program: Delhi CM Arvind Kejriwal in Moga pic.twitter.com/7hAwC4achY
— ANI (@ANI) November 22, 2021
ಪಂಜಾಬ್ನಲ್ಲಿ 2022ರ ಆರಂಭದಲ್ಲಿ ವಿಧಾನಸಭೆ ಚುನಾವಣೆ(punjab assembly election) ನಡೆಯಲಿದ್ದು, ಅದನ್ನ ಗಮನದಲ್ಲಿಟ್ಟುಕೊಂಡು ಕೇಜ್ರಿವಾಲ್ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪಂಜಾಬ್ ಚುನಾವಣೆಗೋಸ್ಕರ ಈಗಾಗಲೇ 10 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿರುವ ಕೇಜ್ರಿವಾಲ್, ಪಂಜಾಬ್ನಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದಾರೆ. ಈ ಹಿಂದೆ ಕೂಡ ಇಲ್ಲಿಗೆ ಭೇಟಿ ನೀಡಿದ್ದ ವೇಳೆ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಪಂಪ್ಸೆಟ್, ಮನೆಯ ವಿದ್ಯುತ್ ಬಿಲ್ ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ತಿಳಿಸಿದ್ದರು.
ಇದನ್ನೂ ಓದಿರಿ: ತಂದೆಯ ನಿರ್ಲಕ್ಷ್ಯಕ್ಕೆ ಕಾರಿನಡಿ ಸಿಲುಕಿ ದಾರುಣ ಅಂತ್ಯ ಕಂಡ ಪುಟಾಣಿ! ವಿಡಿಯೋ ನೋಡಿ
ಇದೀಗ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಕೇಜ್ರಿವಾಲ್ ಮಹಿಳೆಯರಿಗೋಸ್ಕರ ಈ ಯೋಜನೆ ಜಾರಿಗೆ ತರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಮನೆಯಲ್ಲಿ ಮೂವರು 18+ ಮಹಿಳೆಯರು ಇದ್ದರೆ ಎಲ್ಲರಿಗೂ ಪ್ರತಿ ತಿಂಗಳು ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.