ETV Bharat / bharat

ಲಸಿಕೆ ಪಡೆದ ನಂತರವೂ ಅಪ್ಪಳಿಸುವ ಸೋಂಕು: ಎಚ್ಚರವಹಿಸುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ - ಪ್ರಗತಿ ಸೋಂಕಿನ ಬಗ್ಗೆ ಎಚ್ಚರ ವಹಿಸಿ; ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ

ದೇಶಾದ್ಯಂತ ಲಸಿಕೆ ಪಡೆದ ನಂತರವೂ ಕಾಣಿಸಿಕೊಳ್ಳುವ ಕೋವಿಡ್‌ ಸೋಂಕಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

Keep close watch over breakthrough infections: Centre to states
ಪ್ರಗತಿ ಸೋಂಕಿನ ಬಗ್ಗೆ ಎಚ್ಚರ ವಹಿಸಿ; ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ
author img

By

Published : Aug 17, 2021, 10:35 AM IST

ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಜೊತೆಗೆ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಟ್ಟೆಚ್ಚರ ವಹಿಸುವಂತೆ ತಿಳಿಸಿದೆ.

ವಿವಿಧ ರಾಜ್ಯಗಳಿಂದ ಸೋಂಕು ವರದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ವೈರಸ್ ರೂಪಾಂತರಗಳನ್ನು ಖಚಿತಪಡಿಸಲು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲಾಗುತ್ತಿದೆ ಎಂದು ಆರೋಗ್ಯ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಸಿಕೆ ಪಡೆದ ನಂತರವೂ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೋವಿಡ್ ವೈರಸ್ ಲಸಿಕೆ ಒದಗಿಸುವ ರಕ್ಷಣಾತ್ಮಕ ತಡೆಗೋಡೆಯನ್ನು ಭೇದಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಇಂಥ ಸೋಂಕುಗಳು ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಕಂಡು ಬರುತ್ತಿವೆ. ಡೆಲ್ಟಾ ರೂಪಾಂತರದ ಪ್ರಾಬಲ್ಯದಿಂದಾಗಿ ಹೆಚ್ಚಾಗುತ್ತಿರುವ ಅನುಮಾನವಿದೆ. ಆದರೆ ಲಸಿಕೆ ಹಾಕಿದ ಜನರಲ್ಲಿ ಸೋಂಕು ಪ್ರಮಾಣ ಬಹಳ ವಿರಳ ಮತ್ತು ಸಾಮಾನ್ಯವಾಗಿ ಸೌಮ್ಯ ಅಥವಾ ಯಾವುದೇ ರೋಗಲಕ್ಷಣಗಳನ್ನು ಉಂಟು ಮಾಡುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಎರಡೂ ಡೋಸ್‌ ಪಡೆದವರಲ್ಲೂ ಕೋವಿಡ್‌ ಡೆಲ್ಟಾ ರೂಪಾಂತರಿ ಅತಿ ಸುಲಭವಾಗಿ ಹರಡುತ್ತೆ.. ವರದಿ

ಈ ಸೋಂಕುಗಳು ಮುಖ್ಯವಾಗಿ ಕೆಲಸದ ಸ್ಥಳ, ಪಾರ್ಟಿ, ರೆಸ್ಟೋರೆಂಟ್ ಅಥವಾ ಕ್ರೀಡಾಂಗಣದಂತಹ ನಿಕಟ ಸಂಪರ್ಕದಿಂದ ಹರಡುತ್ತಿವೆ. ಸೋಂಕಿತ ರೋಗಿಗಳೊಂದಿಗೆ ಆಗಾಗ್ಗೆ ಸಂಪರ್ಕದಲ್ಲಿರುವ ಆರೋಗ್ಯ ಕಾರ್ಯಕರ್ತರಲ್ಲಿ ಈ ಮಾದರಿಯ ಸೋಂಕು ಹೆಚ್ಚಾಗಿ ಕಂಡುಬರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಡೆಲ್ಟಾ ವೇರಿಯೆಂಟ್ ಇರುವುದರಿಂದ ಹೆಚ್ಚಾಗಿ ಈ ಸ್ವರೂಪದ ಸೋಂಕು ಸಂಭವಿಸುತ್ತಿದೆ. ಜನರಿಗೆ ಎರಡು ಡೋಸ್ ಲಸಿಕೆ ಹಾಕಿದರೆ ಅಂತಹ ಪ್ರಕರಣಗಳು ತೀವ್ರವಾಗಿ ಕಾಣುವುದಿಲ್ಲ ಎಂಬುದು ಖಚಿತ ಎಂದು ಹಿರಿಯ ಆರೋಗ್ಯ ತಜ್ಞೆ ಡಾ. ಸುನೀಲಾ ಗಾರ್ಗ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.