ETV Bharat / bharat

ತೆಲಂಗಾಣದಲ್ಲಿ ಬಿಜೆಪಿ ಬೆಳವಣಿಗೆ ನೋಡಿ ಕೆಸಿಆರ್​ ಭೀತಿಗೊಳಗಾಗಿದ್ದಾರೆ: ಡಿಕೆ ಅರುಣಾ ವಾಗ್ದಾಳಿ! - K Chandrashekar Rao Budget statement

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ನೀಡಿರುವ ಹೇಳಿಕೆಗಳು ಇದೀಗ ವಿವಾದದ ರೂಪ ಪಡೆದಿದೆ. ಕೆ ಚಂದ್ರಶೇಖರ್ ರಾವ್ ವಿರುದ್ಧ ಬಿಜೆಪಿ ಮುಖಂಡೆ ಡಿ ಕೆ ಅರುಣಾ ವಾಗ್ದಾಳಿ ನಡೆಸಿದ್ದಾರೆ.

BJP leader DK Aruna
ಬಿಜೆಪಿ ಮುಖಂಡೆ ಡಿಕೆ ಅರುಣಾ
author img

By

Published : Feb 3, 2022, 12:56 PM IST

ಹೈದರಾಬಾದ್ (ತೆಲಂಗಾಣ): 2022-23ರ ಕೇಂದ್ರ ಬಜೆಟ್‌ ವಿಚಾರವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಹೇಳಿಕೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ ಕೆ ಅರುಣಾ ವಾಗ್ದಾಳಿ ನಡೆಸಿದ್ದಾರೆ. ಕೆಸಿಆರ್ ಸರ್ಕಾರವು ಬಿಜೆಪಿಯ ಬೆಳವಣಿಗೆಯ ಕಂಡು ಆತಂಕ್ಕೊಳಗಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಮಂಗಳವಾರದಂದು ಸಿಎಂ ಕೆಸಿಆರ್ ಅವರು ಕೇಂದ್ರ ಬಜೆಟ್ 2022ರ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. ಬಿಜೆಪಿ ನೇತೃತ್ವದ ಕೇಂದ್ರವನ್ನು ತೆಗೆದು ಬಂಗಾಳ ಕೊಲ್ಲಿಯಲ್ಲಿ ಎಸೆಯುವ ಅಗತ್ಯವಿದೆ, ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಹೇಳಿಕೆ ನೀಡಿದ್ದರು. ದೇಶದ ಜನರ ನಿರೀಕ್ಷೆ ಪೂರೈಸಲು ಹಾಗೂ ಬದಲಾವಣೆ ತರಲು ಹೊಸ ಸಂವಿಧಾನ ಬರೆಯುವ ಅಗತ್ಯವಿದೆ ಎಂದು ಕೆಸಿಆರ್​ ನೀಡಿದ್ದ ಹೇಳಿಕೆ ಈಗ ವಿವಾದದ ರೂಪ ಪಡೆದಿದೆ.

ಇದನ್ನೂ ಓದಿ: 'ಭಾರತದಲ್ಲಿ ಬದಲಾವಣೆ ತರಲು ಹೊಸ ಸಂವಿಧಾನ ಬರೆಯಬೇಕು'.. ತೆಲಂಗಾಣ ಸಿಎಂ ಕೆಸಿಆರ್​ ವಿವಾದಿತ ಹೇಳಿಕೆ

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು, ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಅವಮಾನಕಾರಿಯಾಗಿ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಡಿಕೆ ಅರುಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿಯ ಉದಯದ ಬಗ್ಗೆ ಚಂದ್ರಶೇಖರ್ ರಾವ್ ಅವರು ಹತಾಶರಾಗಿದ್ದಾರೆ ಮತ್ತು ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಈ ಕೆಸಿಆರ್ ಸರ್ಕಾರ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ. ಮುಖ್ಯಮಂತ್ರಿಗಳು ದಲಿತರಿಗೆ ಮೂರು ಎಕರೆ ಭೂಮಿ ಭರವಸೆ ನೀಡಿದ್ದರು, ಆದರೆ ಅವರ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.