ಕೇರಳ: ಅತಿ ಹಿರಿಯ ಕಥಕ್ಕಳಿ ಡ್ಯಾನ್ಸರ್ ಎಂಬ ಹೆಗ್ಗಳಿಕೆ ಹೊಂದಿದ್ದ ಕೇರಳದ ಚೆಮ್ಮಂಚೇರಿ ಕುನ್ಹಿರಾಮನ್ ನಾಯರ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಚೆಮ್ಮಂಚೇರಿ ಕುನ್ಹಿರಾಮನ್ ನಾಯರ್ (105) ಇಂದು ಚೆಲಿಯಾದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೇರಳದ ಅತ್ಯಂತ ಗೌರವಾನ್ವಿತ ಕಥಕ್ಕಳಿ ನರ್ತಕಿ ಪಿ.ಕೆ.ರಾಧಾಕೃಷ್ಣನ್ ಅವರ 'ಮುಖಂ ಮೂಡಿಕಲ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
1945 ರಲ್ಲಿ ಭರತನಾಟ್ಯಂನಿಂದ ಆರಂಭವಾದ ಅವರ ಪಯಣ ಕಲ್ಲು-ಮುಳ್ಳಿನ ಹಾದಿಯಾಗಿತ್ತು. 1948ರಲ್ಲಿ ಫೇರಿ ಸರ್ಕಸ್ ಕಂಪನಿ ಸೇರಿದ ಅವರು ಕೃಷ್ಣ-ಗೋಪಿಕಾ ನೃತ್ಯದ ಮೂಲಕ ಜನರನ್ನು ರಂಜಿಸುತ್ತಿದ್ದರು. ಮೊದಲು ಸ್ತ್ರೀಪಾತ್ರಗಳಲ್ಲಿ ಮಿಂಚುತ್ತಿದ್ದ ಚೆಮ್ಮಂಚೇರಿ ನಾಯರ್, ತಮ್ಮ ಗುರುವಿನ ಸಲಹೆಯಂತೆ ಕೃಷ್ಣಾವತಾರದಲ್ಲಿ ಕಥಕ್ಕಳಿ ನೃತ್ಯ ಮಾಡಲಾರಂಭಿಸಿದ್ರು. ಕೇರಳ ಸಂಗೀತ ನಾಟಕ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.