ETV Bharat / bharat

ಉಗ್ರರ ಗುಂಡಿನ ದಾಳಿ: ಓರ್ವ ಕಾಶ್ಮೀರಿ ಪಂಡಿತನ ಸ್ಥಿತಿ ಗಂಭೀರ - ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ದಾಳಿ

ದಕ್ಷಿಣ ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಚೋಟೋಗಾಮ್​ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸೋನು ಕುಮಾರ್​ ಬಲ್ಜಿ ಎಂಬುವವರು ಗಾಯಗೊಂಡಿದ್ದಾರೆ. ಇವರು ಅಂಗಡಿಯೊಂದು ನಡೆಸುತ್ತಿದ್ದ ಈ ವೇಳೆ, ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Kashmiri Pandit shot by militants in J&K's Shopian
ಉಗ್ರರ ಗುಂಡಿನ ದಾಳಿ: ಓರ್ವ ಕಾಶ್ಮೀರಿ ಪಂಡಿತನ ಸ್ಥಿತಿ ಗಂಭೀರ
author img

By

Published : Apr 4, 2022, 10:35 PM IST

ಸೋಫಿಯಾನ (ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು- ಕಾಶ್ಮೀರದಲ್ಲಿ ಒಂದೇ ದಿನ ಎರಡು ಕಡೆ ಪ್ರತ್ಯೇಕ ಗುಂಡಿನ ದಾಳಿಗಳು ನಡೆದಿವೆ. ಸೋಮವಾರ ಸಂಜೆ ನಡೆದ ಉಗ್ರರ ದಾಳಿಯಲ್ಲಿ ಕಾಶ್ಮೀರಿ ಪಂಡಿತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಕ್ಷಿಣ ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಚೋಟೋಗಾಮ್​ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಾಳವನ್ನು ಸೋನು ಕುಮಾರ್​ ಬಲ್ಜಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಸೋನು ಅಂಗಡಿಯೊಂದು ನಡೆಸುತ್ತಿದ್ದ ಈ ವೇಳೆ, ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು, ಇವತ್ತೇ ಶ್ರೀನಗರದ ಮೈಸಿಮಾ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಯೋಧರ ಮೇಲೆ ಗುಂಡು ಹಾರಿಸಿದ್ದರು. ಇದರಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಅಸುನೀಗಿದರೆ, ಮತ್ತೋರ್ವ ಯೋಧ ಗಾಯಗೊಂಡಿದ್ದರು.

ಇದನ್ನೂ ಓದಿ: ಅಪರಿಚಿತರಿಂದ ಗುಂಡಿನ ದಾಳಿ, ಒಬ್ಬ ಯೋಧ ಸಾವು, ಇನ್ನೊಬ್ಬರಿಗೆ ಗಾಯ: ಇಡೀ ಪ್ರದೇಶ ಸುತ್ತುವರಿದ ಭದ್ರತಾ ಪಡೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.