ETV Bharat / bharat

ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ವಿವಾದ: ಸರ್ಕಾರದ ಮೂಲಕ ದೂರು ದಾಖಲಿಸಿ ಎಂದ ಹೈಕೋರ್ಟ್ - ಕರೀನಾ ಖಾನ್ ಪ್ರೆಗ್ನೆನ್ಸಿ ಬೈಬಲ್

ಈ ವಿವಾದಾತ್ಮಕ ಪುಸ್ತಕ "ಕರೀನಾ ಖಾನ್ ಪ್ರೆಗ್ನೆನ್ಸಿ ಬೈಬಲ್" ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.

Kareena Kapoor pregnancy book
"ಕರೀನಾ ಖಾನ್ ಪ್ರೆಗ್ನೆನ್ಸಿ ಬೈಬಲ್" ಪ್ರಕರಣ
author img

By

Published : Aug 6, 2022, 7:51 AM IST

ಜಬಲ್ಪುರ(ಮಧ್ಯಪ್ರದೇಶ): ಬಾಲಿವುಡ್ ನಟಿ ಕರೀನಾ ಕಪೂರ್, ಅದಿತಿ ಶಾ ಭೀಮ್ ಜ್ಞಾನಿ ಜೊತೆಯಾಗಿ ಬರೆದಿರುವ 'ಕರೀನಾ ಖಾನ್ ಪ್ರೆಗ್ನೆನ್ಸಿ ಬೈಬಲ್' ಪುಸ್ತಕದ ವಿಷಯ ಈಗ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದೆ. ಈ ವಿವಾದಾತ್ಮಕ ಪುಸ್ತಕ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.

ಪುಸ್ತಕದ ಶೀರ್ಷಿಕೆಗೆ ಕ್ರೈಸ್ತ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ಇದರಲ್ಲಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ಕೆ ಪಲಿವಾಲ್ ಅವರ ನ್ಯಾಯಪೀಠ ಆಲಿಸಿತು. ರಾಜ್ಯ ಸರ್ಕಾರವನ್ನು ಸಹ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಸೆ. 16 ರಂದು ನಡೆಯಲಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಕರೀನಾ ಕಪೂರ್ ಅವರ ವಿವಾದಾತ್ಮಕ ಪುಸ್ತಕದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ವಕೀಲ ಕ್ರಿಸ್ಟೋಫರ್ ಆಂಥೋನಿ, ಈ ಸಂಬಂಧ ಕ್ರಿಮಿನಲ್ ದಾಖಲಿಸಲು ಓಮಟಿ ಪೊಲೀಸ್ ಠಾಣೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ, ಕರೀನಾ ಮತ್ತು ಪ್ರಕಾಶಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದರು. ಇದಲ್ಲದೇ ಪುಸ್ತಕದ ಲೇಖಕಿ ಅದಿತಿ ಶಾ ಭೀಮ್‌ಜಿಯಾನಿ ಮತ್ತು ಪುಸ್ತಕವನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡುವ ಅಮೆಜಾನ್ ಆನ್‌ಲೈನ್ ವಿರುದ್ಧವೂ ಅರ್ಜಿ ಸಲ್ಲಿಸಲು ಕೋರಿದ್ದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ನಟಿ ವಿರುದ್ಧ ಎಫ್‌ಐಆರ್ ದಾಖಲಿಸಲು ಫೆಬ್ರವರಿ 26 ರಂದು ಸೆಷನ್ಸ್ ನ್ಯಾಯಾಲಯಕ್ಕೆ ಕ್ರಿಸ್ಟೋಫರ್ ಆಂಟೋನಿ ದೂರು ನೀಡಿದ್ದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಪೊಲೀಸರು ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರು ಹೈಕೋರ್ಟ್‌ಗೆ ಮೆಟ್ಟಿಲೇರಿದ್ದಾರೆ.

ಪುಸ್ತಕದ ಹೆಸರಿಗೆ ಬೈಬಲ್ ಸೇರ್ಪಡೆ: ಕರೀನಾ ಖಾನ್ ಅವರು ಪ್ರೆಗ್ನೆನ್ಸಿ ಬೈಬಲ್ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅವರ ಶೀರ್ಷಿಕೆಯಲ್ಲಿ ಕ್ರಿಶ್ಚಿಯನ್ ಧರ್ಮದ ಪವಿತ್ರ ಗ್ರಂಥ 'ಬೈಬಲ್' ಹೆಸರು ಸೇರಿಸಲಾಗಿದೆ. ಇದರಿಂದ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇರುವ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದ್ಧಾರೆ.

ಜು.9 ರಂದು ಪುಸ್ತಕ ಬಿಡುಗಡೆ: ಕರೀನಾ ಕಪೂರ್ ಖಾನ್ ಅವರು ತಮ್ಮ ಪುಸ್ತಕ 'ಕರೀನಾ ಖಾನ್ ಪ್ರೆಗ್ನೆನ್ಸಿ ಬೈಬಲ್' ಜು.9, 2021 ರಂದು ಬಿಡುಗಡೆ ಮಾಡಿದರು. ಫೆಬ್ರವರಿ 2021ರಲ್ಲಿ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ಕರೀನಾ, ಈ ಪುಸ್ತಕವನ್ನು ತಮ್ಮ 3ನೇ ಮಗು ಎಂದು ಪ್ರಚಾರ ಮಾಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್‌ಗಳನ್ನೂ ಮಾಡಿದ್ದಾರೆ. ಈ ಪುಸ್ತಕದಲ್ಲಿ ಅವರು ತಮ್ಮ ಗರ್ಭಾವಸ್ಥೆಯಲ್ಲಿ ತಮ್ಮ ದೈಹಿಕ ಮತ್ತು ಭಾವನಾತ್ಮಕ ಅನುಭವಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಈ ಪುಸ್ತಕದ ಶೀರ್ಷಿಕೆಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.

ಇದನ್ನೂ ಓದಿ: LaalSingh Chaddha ಸಿನಿಮಾಗೆ ಮತ್ತೆ ಸಂಕಷ್ಟ: ಅಭಿಯಾನ ಆರಂಭಿಸಿದ ನೆಟಿಜನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.