ETV Bharat / bharat

ದಲಿತರ ಮನೆಗೆ ನುಗ್ಗಿ ದಾಂಧಲೆ, ಹಲ್ಲೆ: ದೂರು ನೀಡಿದರೂ ಕ್ರಮಕೈಗೊಳ್ಳದ ಆರೋಪ

ದುಷ್ಕರ್ಮಿಗಳು ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

Etv Bharatದೂರು ನೀಡಿದರೂ ಕ್ರಮಕೈಗೊಳ್ಳದ ಆರೋಪ

author img

By

Published : Nov 5, 2022, 5:30 PM IST

ಕಾನ್ಪುರ (ಉತ್ತರಪ್ರದೇಶ): ದಲಿತರ ಮನೆಗೆ ನುಗ್ಗಿ ದುಷ್ಕರ್ಮಿಗಳು ದಾಂಧಲೆ ನಡೆಸಿರುವ ಘಟನೆ ಇಲ್ಲಿನ ಬಿಲಹೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ತಾಪುರ ಗ್ರಾಮದಲ್ಲಿ ನಡೆದಿದೆ. ಸುಮಾರು 12ಕ್ಕೂ ಹೆಚ್ಚು ದುಷ್ಕರ್ಮಿಗಳು ದಲಿತರಿಗೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಗಂಭೀರ ಗಾಯಗೊಂಡಿದ್ದಾರೆ.

ದಲಿತರ ಮನೆಗೆ ನುಗ್ಗಿ ದಾಂಧಲೆ, ಹಲ್ಲೆ : ದೂರು ನೀಡಿದರೂ ಕ್ರಮಕೈಗೊಳ್ಳದ ಪೊಲೀಸರು

ಪ್ರಕರಣ ಸಂಬಂಧ ಬಿಲಹೌರ್ ಪೊಲೀಸರ ವಿರುದ್ಧ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ದೂರಿನ ಪತ್ರವನ್ನು ಹಲವು ಬಾರಿ ಬದಲಾಯಿಸಲಾಗಿದೆ. ಠಾಣೆಯಲ್ಲಿ ಇನ್ನೊಂದು ಕಡೆಯ ವರದಿಯನ್ನು ಮಾತ್ರ ಬರೆಯಲಾಗಿದೆ. ಆದರೆ, ನಮಗೆ ಆಶ್ವಾಸನೆಯನ್ನು ಮಾತ್ರ ನೀಡಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಇನ್ನು ಗ್ರಾಮದ ವ್ಯಕ್ತಿಯೊಬ್ಬರ ಜಮೀನಿಗೆ ನಮ್ಮ ಜಾನುವಾರು ಹೋಗಿದ್ದು ವಾಗ್ವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಿಒ ಬಿಲಹಾರ್ ರಾಜೇಶ್ ಕುಮಾರ್ ಗಮನಕ್ಕೆ ತಂದಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಸಂತ್ರಸ್ತರು ಹೇಳಿದ್ದಾರೆ.

ಇದನ್ನೂ ಓದಿ : ಯುವಕನ ಅಪಹರಿಸಿ ಕಣ್ಣಿಗೆ ಆ್ಯಸಿಡ್ ಹಾಕಿ.. ಭಿಕ್ಷುಕರ ಮಾಫಿಯಾ ಗ್ಯಾಂಗ್​ಗೆ 70 ಸಾವಿರಕ್ಕೆ ಮಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.