ETV Bharat / bharat

ಕಂಗನಾ vs ಬಿಎಂಸಿ: ಫ್ಲ್ಯಾಟ್​ ವಿಲೀನ ವೇಳೆ ರಣಾವತ್ ನಿಯಮ ಉಲ್ಲಂಘಿಸಿದ್ದಾರೆ ಎಂದ ಕೋರ್ಟ್ - ನಟಿ ಕಂಗನಾ ರಣಾವತ್ ಲೇಟೆಸ್ಟ್ ನ್ಯೂಸ್

ಮುಂಬೈನ ಖಾರ್ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನ ನೆಲಸಮಗೊಳಿಸುವುದಾಗಿ ಬಿಎಂಸಿ ನೋಟಿಸ್ ನೀಡಿದ್ದು, ಇದಕ್ಕೆ ತಡೆ ಕೋರಿ ಕಂಗನಾ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Kangana Ranaut
ಕಂಗನಾ ರಣಾವತ್
author img

By

Published : Jan 2, 2021, 9:48 AM IST

ಮುಂಬೈ: ನಟಿ ಕಂಗನಾ ರಣಾವತ್ ತಮ್ಮ ಮೂರು ಫ್ಲ್ಯಾಟ್‌ಗಳನ್ನು ವಿಲೀನಗೊಳಿಸುವಾಗ ಮಂಜೂರಾದ ಪರವಾನಗಿಯಲ್ಲಿ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದಿರುವ ಕೋರ್ಟ್, ಅನಧಿಕೃತ ನಿರ್ಮಾಣವನ್ನು ಕೆಡವಲು ಮುಂದಾಗಿರುವ ಬಿಎಂಸಿಗೆ ತಡೆ ನೀಡುವಂತೆ ಕೋರಿ ಕಂಗನಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರ ಉಪನಗರ ದಿಂಡೋಶಿಯ ನ್ಯಾಯಾಲಯ ವಜಾಗೊಳಿಸಿದ್ದು, ವಿವರವಾದ ಆದೇಶ ಗುರುವಾರ ಲಭ್ಯವಾಗಿದೆ.

ನಗರದ ಖಾರ್ ಪ್ರದೇಶದಲ್ಲಿ 16 ಅಂತಸ್ತಿನ ಕಟ್ಟಡದ ಐದನೇ ಮಹಡಿಯಲ್ಲಿ ಮೂರು ಫ್ಲ್ಯಾಟ್‌ಗಳನ್ನು ಹೊಂದಿರುವ ರಣಾವತ್, ಅವನ್ನು ಒಂದೇ ಆಗಿ ವಿಲೀನಗೊಳಿಸಿದ್ದಾರೆ ಎಂದು ನ್ಯಾಯಾಧೀಶ ಎಲ್ ಎಸ್ ಚವ್ಹಾಣ್​ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆ ಮಾಡುವಾಗ, ಸಂಕ್ ಏರಿಯಾ, ಡಕ್ ಏರಿಯಾ, ಕಾಮನ್ ಪ್ಯಾಸೇಜ್​ ಅನ್ನು ವಾಸಯೋಗ್ಯ ಪ್ರದೇಶವಾಗಿ ಪರಿವರ್ತಿಸಿದ್ದಾರೆ. "ಇವು ಮಂಜೂರಾದ ಯೋಜನೆಯ ಗಂಭೀರ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ಸಮರ್ಥ ಪ್ರಾಧಿಕಾರದ ಅನುಮತಿ ಅಗತ್ಯ" ಎಂದು ನ್ಯಾಯಾಲಯ ಹೇಳಿದೆ.

ಬೃಹನ್​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಖಾರ್ ಪ್ರದೇಶದಲ್ಲಿನ ಪ್ಲ್ಯಾಟ್​ನ "ಅನಧಿಕೃತ ನಿರ್ಮಾಣಗಳಿಗಾಗಿ" ಮಾರ್ಚ್ 2018 ರಲ್ಲಿ ನೋಟಿಸ್ ನೀಡಿತ್ತು. ಮತ್ತೊಂದು ನೋಟಿಸ್ ಮೂಲ ಯೋಜನೆಯ ಪ್ರಕಾರ ರಚನೆಯನ್ನು ಅದರ ಮೂಲ ಸ್ಥಾನಕ್ಕೆ ಪುನಃಸ್ಥಾಪಿಸಲು ಕೇಳಿದೆ, ಇಲ್ಲದಿದ್ದರೆ ಅನಧಿಕೃತ ಭಾಗವನ್ನು ಕೆಡವಲಾಗುತ್ತದೆ ಎಂದು ಎಚ್ಚರಿಸಿತ್ತು.

ಈ ನೋಟಿಸ್​ಗಳನ್ನು ಪ್ರಶ್ನಿಸಿ ರಣಾವತ್ ಬಿಎಂಸಿ ಕ್ರಮವನ್ನು ತಡೆಯುವಂತೆ ನ್ಯಾಯಾಲಯವನ್ನು ಕೋರಿದ್ದರು. ಆಗ ನ್ಯಾಯಾಲಯವು ಯಥಾಸ್ಥಿತಿಗೆ ಆದೇಶಿಸಿತ್ತು. ಡಿಸೆಂಬರ್ 23 ರಂದು ಇತ್ತೀಚಿನ ಆದೇಶದಲ್ಲಿ ನ್ಯಾಯಾಧೀಶ ಚವ್ಹಾಣ್​ ಅವರು ನಟಿಯ ಅರ್ಜಿಯನ್ನು ತಿರಸ್ಕರಿಸಿದ್ದು, "ಈ ನ್ಯಾಯಾಲಯದ ಹಸ್ತಕ್ಷೇಪ ಅಗತ್ಯವಿಲ್ಲ" ಎಂದು ಹೇಳಿದ್ದಾರೆ. ಆದರೆ, ಈ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಲು ನ್ಯಾಯಾಲಯ ಆರು ವಾರಗಳ ಕಾಲಾವಕಾಶ ನೀಡಿದೆ.

ಸೆಪ್ಟೆಂಬರ್ 9 ರಂದು, "ಅನಧಿಕೃತ" ನಿರ್ಮಾಣದ ಆರೋಪದ ಮೇಲೆ ಬಿಎಂಸಿ ಪಾಲಿ ಹಿಲ್ ಪ್ರದೇಶದಲ್ಲಿನ ಅವರ ಬಂಗಲೆಯ ಭಾಗಗಳನ್ನು ನೆಲಸಮ ಮಾಡಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಬಿಎಂಸಿಯ ಕ್ರಮವನ್ನು ಕಾನೂನುಬಾಹಿರ ಮತ್ತು ದುರುದ್ದೇಶಪೂರಿತ ಎಂದು ಹೇಳಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.