ETV Bharat / bharat

ಕಂಗನಾ ಕಾರಿಗೆ ಮುತ್ತಿಗೆ ಹಾಕಿದರಂತೆ ಪಂಜಾಬ್​ ರೈತರು : ನಟಿಯಿಂದ ಕ್ಷಮಾಪಣೆಗೆ ಒತ್ತಾಯಿಸಿದರಂತೆ - Kangana attacked at Kiratpur Sahib

ಪಂಜಾಬ್‌ ಪ್ರವೇಶಿಸುತ್ತಿದ್ದಂತೆಯೇ ರೈತರು ನನ್ನ ಕಾರನ್ನು ಅಡ್ಡಗಟ್ಟಿದ್ದಾರೆ. ತಾವು ರೈತರೆನ್ನುತ್ತಾರೆ. ಆದರೆ, ನನಗೆ ಧಮ್ಕಿ ಹಾಕುತ್ತಿದ್ದಾರೆ. ಇಲ್ಲಿ ಪೊಲೀಸ್​ ಇಲ್ಲ ಅಂದಿದ್ರೆ ಮುಕ್ತವಾಗಿಯೇ ಗುಂಪುಹಲ್ಲೆ ನಡೆಯುತ್ತಿತ್ತು ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ..

attack on kangana ranaut car
ಕಂಗನಾ ಕಾರಿಗೆ ಮುತ್ತಿಗೆ ಹಾಕಿದ ಪಂಜಾಬ್​ ರೈತರು
author img

By

Published : Dec 3, 2021, 6:24 PM IST

ಕಿರಾತ್‌ಪುರ ಸಾಹಿಬ್ (ಪಂಜಾಬ್): ತಮ್ಮ ಕಾರಿಗೆ ಮುತ್ತಿಗೆ ಹಾಕಿದ ಪಂಜಾಬ್​​ನ ಪ್ರತಿಭಟನಾನಿರತ​​ ರೈತರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಿವುಡ್​ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ. ಜತೆಗೆ ಈ ಘಟನೆಯ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ.

ನಾನೇನು ರಾಜಕಾರಣಿನಾ?

"ವಿಮಾನ ರದ್ದಾಗಿರುವ ಕಾರಣ ಹಿಮಾಚಲ ಪ್ರದೇಶದಿಂದ ಕಾರಿನಲ್ಲಿ ಪಂಜಾಬ್‌ ಪ್ರವೇಶಿಸುತ್ತಿದ್ದಂತೆಯೇ ರೈತರು ಕಾರನ್ನು ಅಡ್ಡಗಟ್ಟಿದ್ದಾರೆ. ತಾವು ರೈತರೆನ್ನುತ್ತಾರೆ. ಆದರೆ, ನನಗೆ ಧಮ್ಕಿ ಹಾಕುತ್ತಿದ್ದಾರೆ.

ಒಂದು ವೇಳೆ ದೇಶದಲ್ಲಿ ಭದ್ರತೆ ಇಲ್ಲ ಅಂದಿದ್ರೆ ಏನಾಗಬಹುದು? ಇಲ್ಲಿ ಪೊಲೀಸ್​ ಇಲ್ಲ ಅಂದಿದ್ರೆ ಮುಕ್ತವಾಗಿಯೇ ಗುಂಪು ಹಲ್ಲೆ ನಡೆಯುತ್ತಿತ್ತು. ನಾನೇನು ರಾಜಕಾರಣಿನಾ? ನನ್ನ ಕಾರನ್ನು ಯಾಕೆ ತಡೆದಿದ್ದಾರೆ? ಈ ಪರಿಸ್ಥಿತಿಯನ್ನ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ನಟಿ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್​ ನಟಿ ಕಂಗನಾ ರಣಾವತ್ ಹಂಚಿಕೊಂಡಿರುವ ವಿಡಿಯೋ

ಇದನ್ನೂ ಓದಿ: ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ; ನಾನು 'ಪವರ್‌ಫುಲ್‌' ಮಹಿಳೆ ಎಂದ ನಟಿ

ಕೃಷಿ ಕಾನೂನುಗಳನ್ನು ರದ್ದು ಮಾಡಿದಾಗ ರೈತರ ವಿರೋಧವಾಗಿ ಹೇಳಿಕೆ ನೀಡಿದ್ದ ಕಂಗನಾಗೆ ಅನ್ನದಾತರು ಕ್ಷಮಾಪಣೆ ಕೇಳಲು ಒತ್ತಾಯಿಸಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ಕಂಗನಾ ವಿರುದ್ಧ ದೇಶದಾದ್ಯಂತ ನಾನಾ ಪೊಲೀಸ್​ ಠಾಣೆಗಳಲ್ಲಿ ಎಫ್​ಐಆರ್​ ದಾಖಲಾಗಿದೆ.

'ಮಾತಾಡೋ ಮೊದಲು ಯೋಚಿಸು'

ಮಾತನಾಡುವ ಮೊದಲು ಯೋಚಿಸು ಎಂದು ಪಂಜಾಬಿ ಭಾಷೆಯಲ್ಲಿ ಕಂಗನಾಗೆ ಮಹಿಳೆಯೊಬ್ಬರು ಹೇಳಿರುವುದು ಸಹ ಕಂಡು ಬಂದಿದೆ. ಆಗ ಆ ಮಹಿಳೆಗೆ ಕೈಕೊಟ್ಟು, ಅವರ ಮುಖ ಸವರಿ ಕಂಗನಾ ಸಮಾಧಾನದಿಂದ ಮಾತನಾಡಿದ್ದಾರೆ. "ಪ್ರೀತಿ ಎಲ್ಲವನ್ನು ಗೆಲ್ಲುತ್ತದೆ. ಎಲ್ಲರೂ ಅವರೊಂದಿಗೆ ಮಾತನಾಡದಂತೆ ನನಗೆ ಎಚ್ಚರಿಕೆ ನೀಡಿದರು. ಆದರೆ, ನಾನು ಮಾತನಾಡಿದೆ" ಎಂದು ಕಂಗನಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.