ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟಿ ಕಂಗನಾ ರಣಾವತ್ ಅಂಡಮಾನ್ ನಿಕೋಬಾರ್ನ ರಾಜಧಾನಿ ಪೋರ್ಟ್‌ಬ್ಲೇರ್‌ನಲ್ಲಿರುವ ವಿ.ಡಿ.ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಸೆಲ್ಯೂಲಾರ್ ಜೈಲಿಗೆ ಭೇಟಿ ನೀಡಿ, ಗೌರವ ಸಲ್ಲಿಸಿದರು. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡು, ಟಿಪ್ಪಣಿ ಬರೆದಿದ್ದಾರೆ.
'ಇಂದು ಅಂಡಮಾನ್ ದ್ವೀಪಕ್ಕೆ ಬಂದ ಮೇಲೆ ವೀರ್ ಸಾವರ್ಕರ್ ಇದ್ದ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದೆ. ಆ ಜೈಲನ್ನು ನೋಡಿ ಆಘಾತವಾಯಿತು. ಅಮಾನವೀಯತೆ ತಾಂಡವವಾಡುತ್ತಿದ್ದ ಸಮಯದಲ್ಲಿ ಸಾವರ್ಕರ್ ಜೀ ಅವರ ರೂಪದಲ್ಲಿ ಮಾನವೀಯತೆ ಉತ್ತುಂಗಕ್ಕೆ ಏರಿತ್ತು. ಎಲ್ಲಾ ಕ್ರೌರ್ಯವನ್ನು ಅವರು ನೋಡಿದ್ದಾರೆ ಮತ್ತು ದೃಢ ನಿಶ್ಚಯದಿಂದ ಎದುರಿಸಿದ್ದಾರೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
- " class="align-text-top noRightClick twitterSection" data="
">
ಇದರ ಜೊತೆಗೆ 'ಸಾವರ್ಕರ್ ಅವರನ್ನು ಸಮುದ್ರದ ಮಧ್ಯದಲ್ಲಿರುವ ಕಾಲಾಪಾನಿಯಲ್ಲಿ ಇರಿಸಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾಗಿತ್ತು. ಸಾವರ್ಕರ್ ಅವರನ್ನು ಸರಪಳಿಗಳಿಂದ ಕಟ್ಟಿಹಾಕಿದರು. ದಪ್ಪಗೋಡೆಯ ಜೈಲಿನಲ್ಲಿ ಆತನನ್ನು ಬಂಧಿಸಿಟ್ಟರು. ಸಾವರ್ಕರ್ ಸಣ್ಣ ರಂಧ್ರದಲ್ಲಿಯೂ ತಪ್ಪಿಸಿಕೊಳ್ಳುತ್ತಾರೆ ಎಂಬ ಭಯವೂ ಅವರಿತ್ತು, ಎಂಥ ಹೇಡಿಗಳು' ಎಂದು ಕಂಗನಾ ಪರೋಕ್ಷವಾಗಿ ಬ್ರಿಟೀಷರ ವಿರುದ್ಧ ಕಿಡಿಕಾರಿದ್ದಾರೆ.
ಈ ಜೈಲು ಸ್ವಾತಂತ್ರ್ಯದ ಸತ್ಯವಾಗಿದೆಯೇ ವಿನಃ ನಮಗೆ ಪಠ್ಯಪುಸ್ತಕಗಳು ಭೋದಿಸುವುದು ಸತ್ಯವಲ್ಲ. ನಾನು ಈ ಜೈಲಿನಲ್ಲಿ ಧ್ಯಾನ ಮಾಡಿದೆ. ಸಾವರ್ಕರ್ ಜೀ ಅವರನ್ನು ಸ್ಮರಿಸಿದ್ದೇನೆ. ಸ್ವಾತಂತ್ರ್ಯ ಸಂಗ್ರಾಮದ ನಿಜವಾದ ನಾಯಕನಿಗೆ ನನ್ನ ಕೋಟಿ ಕೋಟಿ ನಮನಗಳು, ಜೈ ಹಿಂದ್ ಎಂದಿದ್ದಾರೆ.
ಇದನ್ನೂ ಓದಿ: ಕ್ಯಾ.ಅಮರೀಂದರ್ ಸಿಂಗ್ ಹೊಸ ಪಕ್ಷ ಘೋಷಣೆ; ನವಜೋತ್ ಸಿಂಗ್ ಸಿಧು ಸೋಲಿಸಲು ಪಣ