ಗುರುದಾಸ್‌ಪುರ (ಪಂಜಾಬ್) : ಪಂಜಾಬ್‌ನ ಖ್ಯಾತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಮನ್‌ಪ್ರೀತ್ ಮನ್ನು ಮಸನ್ ಸಿಂಗ್ ಇಂದು (ಗುರುವಾರ) ಸಾವಿಗೀಡಾಗಿದ್ದಾರೆ. ಅಮೃತಸರದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಟೂರ್ನಿಯಲ್ಲಿ ಅವರು ಪಾಲ್ಗೊಂಡಿದ್ದರು. ಆಟದ ನಡುವೆ ಮನ್‌ಪ್ರೀತ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಕೆಲ ಹೊತ್ತಲ್ಲೇ ಮೃತಪಟ್ಟರು.
ಸಂಪೂರ್ಣ ವಿವರ: ಅಮೃತಸರ ಜಿಲ್ಲೆಯ ತೋಹಿಯೆ ಕಲಾನ್ ಮತ್ತು ಬಾಬಾ ಬಹದ್ದೂರ್ ಸಿಂಗ್ ದೇಗುಲದ ಎದುರು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಆಟ ಆಡುತ್ತಿದ್ದಾಗಲೇ ಮನ್‌ಪ್ರೀತ್ ತಲೆಗೆ ಪೆಟ್ಟು ಬಿದ್ದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುವುದಕ್ಕೂ ಮುನ್ನವೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಇದನ್ನೂ ಓದಿ: Spandana funeral: ಪಂಚಭೂತಗಳಲ್ಲಿ ಸ್ಪಂದನಾ ಲೀನ; ಕಣ್ಣೀರಿನ ವಿದಾಯ ಹೇಳಿಕ ಪತಿ ವಿಜಯ್ ರಾಘವೇಂದ್ರ
ತಿಂಗಳ ಹಿಂದೆ ತಂದೆ ಸಾವು: ಮನ್‌ಪ್ರೀತ್ ಅವರ ತಂದೆ ಮೋಹನ್ ಸಿಂಗ್ ಕಳೆದ ತಿಂಗಳು ನಿಧನರಾಗಿದ್ದರು. ಇತ್ತೀಚೆಗೆ ಕಬಡ್ಡಿ ಟೂರ್ನಿ ಮುಗಿಸಿ ನ್ಯೂಜಿಲೆಂಡ್‌ನಿಂದ ಮನ್‌ಪ್ರೀತ್ ವಾಪಸಾಗಿದ್ದರು. ಮನ್‌ಪ್ರೀತ್ ಅವರು ಪತ್ನಿ, ಮಗು ಹಾಗು ಕಿರಿ ಸಹೋದರ ಪ್ರಭ್ಜೋತ್ ಸಿಂಗ್ ಅವರನ್ನು ಅಗಲಿದ್ದಾರೆ.
"ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ಕ್ಷೇತ್ರಕ್ಕೆ ಸೇರಿದ ಮಸಾನ ಗ್ರಾಮದವರಾದ ಮನ್‌ಪ್ರೀತ್, ಕಬಡ್ಡಿ ಆಟಗಾರರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದರು. ಹಲವರಿಗೆ ಮಾರ್ಗದರ್ಶಕರೂ ಆಗಿದ್ದರು. ಪ್ರತಿಭಾವಂತ ಯುವಕನ ಸಾವು ಕ್ರೀಡಾ ಲೋಕಕ್ಕೆ ತುಂಬಲಾರದ ನಷ್ಟ" ಎಂದು ಗ್ರಾಮದ ಸರಪಂಚ್ ಬಿಕ್ರಮ್‌ಜಿತ್ ಸಿಂಗ್ ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ಘಟನೆ: ಇತ್ತೀಚೆಗೆ ಜಲಂಧರ್‌ನಲ್ಲಿ ನಡೆದ ಪಂದ್ಯದಲ್ಲಿ ಖ್ಯಾತ ಕಬಡ್ಡಿ ಆಟಗಾರ ಅಮರ್ ಘಾಸ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ: ODI World Cup: ಭಾರತ-ಪಾಕ್ ಸೇರಿ 8 ಪಂದ್ಯಗಳ ದಿನ ಬದಲು; ಇದೇ 15ರಿಂದ ಟಿಕೆಟ್ ಬುಕ್ಕಿಂಗ್ ಶುರು