ETV Bharat / bharat

100 ಮೀಟರ್‌ ಹರ್ಡಲ್ಸ್‌ನಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದ ಜ್ಯೋತಿ ಯರ್ರಾಜಿ

author img

By

Published : May 23, 2022, 9:19 AM IST

ಆಂಧ್ರಪ್ರದೇಶದ ಅಥ್ಲೀಟ್ ಜ್ಯೋತಿ ಯರ್ರಾಜಿ ಅವರು ಭಾನುವಾರ ಇಂಗ್ಲೆಂಡ್​​ನಲ್ಲಿ ನಡೆದ ಇಂಟರ್‌ನ್ಯಾಶನಲ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ +0.3 ಮೀ/ಸೆ ವೇಗದಲ್ಲಿ ಚಿನ್ನ ಗೆದ್ದರು.

athlete Jyothi Yarraji
ಅಥ್ಲೀಟ್ ಜ್ಯೋತಿ ಯರ್ರಾಜಿ

ನವದೆಹಲಿ: ಭಾನುವಾರ ಇಂಗ್ಲೆಂಡ್​​ನಲ್ಲಿ ನಡೆದ 'ಲೌಬರೋ ಇಂಟರ್‌ನ್ಯಾಶನಲ್ ಅಥ್ಲೆಟಿಕ್ಸ್ ಮೀಟ್‌'ನಲ್ಲಿ ಜ್ಯೋತಿ ಯರ್ರಾಜಿ ಅವರು ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಮಹಿಳೆಯರ 100 ಮೀಟರ್ ಹರ್ಡಲ್ಸ್ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. 22 ವರ್ಷದ ಆಂಧ್ರದ ಅಥ್ಲೀಟ್, ಮೇ 10ರಂದು ಲಿಮಾಸೋಲ್‌ನಲ್ಲಿ ನಡೆದ ಸೈಪ್ರಸ್ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ 13.23 ಸೆಕೆಂಡ್‌ಗಳಲ್ಲಿ ಜಯಗಳಿಸಿ ಹೊಸ ಮೈಲುಗಲ್ಲು ತಲುಪಿದ್ದರು. ಈಗ ಅವರು ಗಳಿಸಿದ್ದ 13.23ರ ರಾಷ್ಟ್ರೀಯ ದಾಖಲೆಯನ್ನು ಮತ್ತೆ ಮುರಿದು 13.11 ಸೆಕೆಂಡ್‌ಗಳಲ್ಲಿ ಓಡಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ.

ಯರ್ರಾಜಿ ಅವರು ಭುವನೇಶ್ವರದಲ್ಲಿರುವ ರಿಲಯನ್ಸ್ ಫೌಂಡೇಶನ್ ಒಡಿಶಾ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಜೋಸೆಫ್ ಹಿಲಿಯರ್ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಕೋಝಿಕ್ಕೋಡ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಅವರು 13.09 ಸೆಕೆಂಡ್​​ ಗಳಿಸಿದ್ದರು. ಆದರೆ ಗಾಳಿಯ ವೇಗ +2.1 ಮೀ/ಸೆಕೆಂಡಿಗೆ ಅನುಮತಿಸಲಾದ +2.0 ಮೀ/ಸೆಕೆಂಡ್‌ಗಿಂತ ಹೆಚ್ಚಾಗಿದ್ದರಿಂದ ಅದನ್ನು ರಾಷ್ಟ್ರೀಯ ದಾಖಲೆಯಾಗಿ ಪರಿಗಣಿಸಲಾಗಿಲ್ಲ.

2020ರಲ್ಲಿ, ಕರ್ನಾಟಕದ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ 13.03 ಸೆಕೆಂಡುಗಳಲ್ಲಿ ಬಿಸ್ವಾಲ್ ಅವರ ರಾಷ್ಟ್ರೀಯ ದಾಖಲೆಯ ಸಮಯವನ್ನು ಮುರಿದ್ದರು. ಆದರೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯು ಆಕೆಯನ್ನು ಕೂಟದಲ್ಲಿ ಪರೀಕ್ಷಿಸದ ಕಾರಣ ಮತ್ತು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಯಾವುದೇ ತಾಂತ್ರಿಕ ಪ್ರತಿನಿಧಿ ಇರಲಿಲ್ಲವಾದ್ದರಿಂದ ಅದನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಲಾಗಿರಲಿಲ್ಲ.

ರಿಲಯನ್ಸ್ ಫೌಂಡೇಶನ್‌ನ ಅಥ್ಲೀಟ್ ಗ್ರೇಸೆಸನ್ ಅಮಲ್ದಾಸ್, ಮಾಜಿ ರಾಷ್ಟ್ರೀಯ ಈಜುಗಾರ ತಂಜಾವೂರಿನ ಹರ್ಡಲರ್ ಆಗಿದ್ದು, ಲೌಬರೋ ಇಂಟರ್‌ನ್ಯಾಶನಲ್ ಮೀಟ್‌ನ ಜೂನಿಯರ್ ಪುರುಷರ 110 ಮೀ ಹರ್ಡಲ್ಸ್ ಅತಿಥಿ ಓಟವನ್ನು 13.91 ಸೆ.ಗಳಲ್ಲಿ ಗೆದ್ದರು. ತಮಿಳುನಾಡಿನ ತಂಜಾವೂರಿನ ರಾಷ್ಟ್ರೀಯ ಈಜುಗಾರ-ಹರ್ಡಲರ್ ಗ್ರೇಸನ್ ಅಮಲ್ದಾಸ್ ಜೂನಿಯರ್ ಪುರುಷರ 110 ಮೀ ಹರ್ಡಲ್ಸ್ ಅತಿಥಿ ಓಟವನ್ನು 13.91 ಸೆಕೆಂಡ್​​ಗಳಲ್ಲಿ ಗೆದ್ದರು.

ಇದನ್ನೂ ಓದಿ: ಹೈದರಾಬಾದ್ ಮಣಿಸಿದ ಪಂಜಾಬ್‌ಗೆ ಪಾಯಿಂಟ್‌ ಪಟ್ಟಿಯಲ್ಲಿ 6ನೇ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.