ETV Bharat / bharat

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌ವಿ ರಮಣ ಇಂದು ಪದಗ್ರಹಣ

author img

By

Published : Apr 24, 2021, 12:46 AM IST

Updated : Apr 24, 2021, 5:50 AM IST

ನ್ಯಾಯಮೂರ್ತಿ ಎನ್‌ವಿ ರಮಣ ಅವರು ಇಂದು ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಿಜೆಐಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

justice nv ramana taking oath as chief justice of india today
ಸುಪ್ರೀಂ ಕೋರ್ಟ್‌ನ 48ನೇ ಮುಖ್ಯನಾಯಮೂರ್ತಿಯಾಗಿ ಎನ್‌ವಿ ರಮಣ ಇಂದು ಪದಗ್ರಹಣ

ಹೈದಾರಾಬಾದ್‌: ತೆಲುಗು ಭಾಷಿಕರೊಬ್ಬರು ಮತ್ತೊಮ್ಮೆ ದೇಶದ ಅತ್ಯುನ್ನತ ನ್ಯಾಯ ಪೀಠದಲ್ಲಿ ಕೂರಲಿದ್ದಾರೆ. ನ್ಯಾಯಮೂರ್ತಿ ಎನ್‌ವಿ ರಮಣ ಅವರು ಇಂದು ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಿಜೆಐಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ಅಧಿಕಾರದ ಅವಧಿ ನಿನ್ನೆಗೆ ಮುಕ್ತಾಯವಾಗಿದೆ. ಹೀಗಾಗಿ ಸಿಜೆಐ ಆಗಿ ರಮಣ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ. ಇವರು ದೇಶದ ಅತ್ಯುನ್ನತ ನ್ಯಾಯಪೀಠ ಸುಪ್ರೀಂಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿ ಆಗುತ್ತಿರುವ ಆಂಧ್ರ ಪ್ರದೇಶದ ಎರಡನೇ ವ್ಯಕ್ತಿಯಾಗಿದ್ದಾರೆ. ನ್ಯಾಯಮೂರ್ತಿ ಸುಬ್ಬರಾವ್‌ ಅವರು ಭಾರತದ 9ನೇ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು.

ಏಪ್ರಿಲ್‌ 6 ರಂದೇ ಉತ್ತರಾಧಿಕಾರಿ ಘೋಷಣೆ

ಸಂಪ್ರದಾಯದ ಪ್ರಕಾರ ಹಾಲಿ ಸಿಜೆಐ ತಮ್ಮ ಅಧಿಕಾರದ ಅವಧಿ ಇನ್ನೂ 1 ತಿಂಗಳು ಇವರು ಮೊದಲೇ ಮುಂದಿನ ಸಿಜೆಐ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡುತ್ತಾರೆ. ಅದರಂತೆ ಸಿಜೆಐ ಎಸ್‌ಎ ಬೊಬ್ಡೆ ಅವರು ಮಾರ್ಚ್‌ 24 ರಂದು ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಎನ್‌ವಿ ರಮಣ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು.

ಇದನ್ನೂ ಓದಿ: ತಿರುಮಲ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದ ನಿಯೋಜಿತ ಸಿಜೆಐ ಎನ್.ವಿ.ರಮಣ

ಹಾಲಿ ಸಿಜೆಐ ಅವರ ಶಿಫಾರಸ್ಸನ್ನು ಕೇಂದ್ರ ಸರ್ಕಾರದ ನ್ಯಾಯಾಲಯ ವಿಭಾಗ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸ್ಸನ್ನು ಪತ್ರವನ್ನು ಕಳುಹಿಸಿಕೊಟ್ಟಿತ್ತು. ಅಲ್ಲಿ ಪರಿಶೀಲನೆ ನಂತರ ರಮಣ ಅವರ ಹೆಸರನ್ನು ರಾಷ್ಟ್ರಪತಿ ಕಾರ್ಯಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಹಿ ಮಾಡುವ ಮೂಲಕ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಏಪ್ರಿಲ್‌ 6 ರಂದು 63 ವರ್ಷದ ಎನ್ಎ ರಮಣ ಅವರನ್ನು ಸುಪ್ರೀಂಕೋರ್ಟ್‌ಗೆ ಮುಂದಿನ ಮುಖ್ಯ ನ್ಯಾಯಮೂರ್ತಿ ಎಂದು ಘೋಷಿಸಲಾಗಿತ್ತು. ನ್ಯಾ.ರಮಣ ಅವರ 2022ರ ಆಗಸ್ಟ್‌ 26ರ ವರೆಗೆ ಸಿಜೆಐಗೆ ಸೇವೆ ಸಲ್ಲಿಸಲಿದ್ದಾರೆ.

Last Updated : Apr 24, 2021, 5:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.