ETV Bharat / bharat

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ಜೂನಿಯರ್ ಆರ್ಟಿಸ್ಟ್ ಸಾವು - ರೈಲು ಹರಿದು ಜ್ಯೂನಿಯರ್ ಆರ್ಟಿಸ್ಟ್ ಸಾವು

ಶಾದ್​ನಗರ ರೈಲ್ವೆ ಸ್ಟೇಷನ್​ ಬಳಿ ರೈಲು ನಿಂತಿತ್ತು. ಇದನ್ನೇ ಕಾಚಿಗುಡ ಎಂದು ಭಾವಿಸಿದ ಜ್ಯೋತಿ, ರೈಲಿನಿಂದ ಕೆಳಗೆ ಇಳಿದಿದ್ದಳು.ಸ್ವಲ್ಪ ಸಮಯದ ನಂತರ ಅದು ಕಾಚಿಗುಡ ಅಲ್ಲವೆಂದು ತಿಳಿದಿದ್ದು, ಮತ್ತೆ ಅದೇ ರೈಲನ್ನು ಹತ್ತಲು ಮುಂದಾಗಿದ್ದಾರೆ. ರೈಲು ಚಲಿಸುತ್ತಿದ್ದ ಕಾರಣ ಆಯ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು..

junior-artist-dies-after-falling-under-moving-train
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದು, ಜ್ಯೂನಿಯರ್ ಆರ್ಟಿಸ್ಟ್ ಸಾವು
author img

By

Published : Jan 19, 2022, 2:21 PM IST

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜ್ಯೂನಿಯರ್ ಆರ್ಟಿಸ್ಟ್​​ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಶಾದ್‌ನಗರ ರೈಲು ನಿಲ್ದಾಣದಲ್ಲಿ ನಡೆದಿದೆ. ಮೃತಳನ್ನು ಆಂಧ್ರಪ್ರದೇಶದ ಕಡಪ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ.

ಜ್ಯೋತಿರೆಡ್ಡಿ(28) ಎಂಬುವರು ಮೃತಪಟ್ಟ ಯುವತಿ. ಹೈದರಾಬಾದ್​ನ ಹೆಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಲೇ ಜ್ಯೋತಿ ಚಿತ್ರರಂಗದಲ್ಲೂ ಜೂನಿಯರ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದರು ಎಂದು ಹೆಚ್​ಡಿಎಫ್​ಸಿ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಡಪ ನಗರದ ಸಿನಿಮಾ ಸ್ಟ್ರೀಟ್ ಎಂಬ ಪ್ರದೇಶದವರಾದ ಅವರು ಹೈದರಾಬಾದ್​​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಕ್ರಾಂತಿ ಹಬ್ಬಕ್ಕಾಗಿ ಸ್ವಂತ ಊರಿಗೆ ತೆರಳಿದ್ದ ಆಕೆ, ರೈಲಿನಲ್ಲಿ ಹೈದರಾಬಾದ್​ನ ಕಾಚಿಗುಡ ರೈಲ್ವೆ ಸ್ಟೇಷನ್​ಗೆ ಪ್ರಯಾಣ ಮಾಡುತ್ತಿದ್ದರು. ಶಾದ್​ನಗರ ರೈಲ್ವೆ ಸ್ಟೇಷನ್​ ಬಳಿ ರೈಲು ನಿಂತಿತ್ತು. ಇದನ್ನೇ ಕಾಚಿಗುಡ ಎಂದು ಭಾವಿಸಿದ ಜ್ಯೋತಿ, ರೈಲಿನಿಂದ ಕೆಳಗೆ ಇಳಿದಿದ್ದಳು.

ಸ್ವಲ್ಪ ಸಮಯದ ನಂತರ ಅದು ಕಾಚಿಗುಡ ಅಲ್ಲವೆಂದು ತಿಳಿದಿದ್ದು, ಮತ್ತೆ ಅದೇ ರೈಲನ್ನು ಹತ್ತಲು ಮುಂದಾಗಿದ್ದಾರೆ. ರೈಲು ಚಲಿಸುತ್ತಿದ್ದ ಕಾರಣ ಆಯ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿ ಮೃತಪಟ್ಟಿದ್ದು, ರೈಲ್ವೆ ಇಲಾಖೆಯ ನಿರ್ಲಕ್ಷ್ಯವೇ ಆಕೆಯ ಸಾವಿಗೆ ಕಾರಣದ ಎಂದು ಕೆಲವು ಜೂನಿಯರ್​ ಆರ್ಟಿಸ್ಟ್​​ಗಳು ಆಸ್ಪತ್ರೆ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಹಾರದಲ್ಲಿ ದೋಣಿ ಮುಳುಗಿ 21 ಮಂದಿ ಕಣ್ಮರೆ, ಮೂವರ ಶವ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.