ETV Bharat / bharat

ಹರಿದ್ವಾರ ಕುಂಭಮೇಳ ಮೊಟಕು: ನಮೋ ಕರೆಗೆ ಸ್ಪಂದಿಸಿದ ಅವಧೇಶಾನಂದ ಸ್ವಾಮೀಜಿ!

Mahakumbh
Mahakumbh
author img

By

Published : Apr 17, 2021, 6:44 PM IST

Updated : Apr 17, 2021, 7:14 PM IST

18:40 April 17

ಹರಿದ್ವಾರ ಕುಂಭಮೇಳ ಮೊಟಕುಗೊಳಿಸಿ ಮಹತ್ವದ ಆದೇಶ

ಹರಿದ್ವಾರ: ಮಹಾಮಾರಿ ಕೊರೊನಾ ವೈರಸ್​ ಹಾವಳಿ ನಡುವೆ ಕೂಡ ಅದ್ಧೂರಿಯಾಗಿ ನಡೆಯುತ್ತಿದ್ದು, ಉತ್ತರಾಖಂಡ್​ದ ಹರಿದ್ವಾರ ಕುಂಭಮೇಳ ಇದೀಗ ಮೊಟಕುಗೊಳಿಸಿ ಮಹತ್ವದ ಆದೇಶ ಹೊರಡಿಸಲಾಗಿದೆ.  

ಕುಂಭಮೇಳದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಅದರಲ್ಲಿನ ಅನೇಕರಿಗೆ ಕೊರೊನಾ ವೈರಸ್​ ಕಾಣಿಸಿಕೊಂಡಿತ್ತು. ಹೀಗಾಗಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕೊರೊನಾದ ವೇಳೆ ಕುಂಭಮೇಳ ಸಾಂಕೇತಿಕವಾಗಿರಬೇಕು ಎಂದು ನಮೋ ಮನವಿ ಮಾಡಿದ್ದರು.  

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವದೇಶಾನಂದ ಸ್ವಾಮೀಜಿ ಇದೀಗ ಕುಂಭಮೇಳ ಮೊಟಕುಗೊಳಿಸಿ ಮಹತ್ವದ ಆದೇಶ ಹೊರಹಾಕಿದ್ದಾರೆ.  

ಇದನ್ನೂ ಓದಿ: ಕೊರೊನಾ ಉಲ್ಬಣ ಹಿನ್ನೆಲೆ ಸಾಂಕೇತಿಕ ಕುಂಭಮೇಳ ನಡೆಸಲು ಮೋದಿ ಮನವಿ.. ಜುನಾ ಅಖಾರದಿಂದ ಸ್ವಾಗತ

ನಮೋ ಮಾತುಕತೆ  

ಹಿಂದೂ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದ ನಮೋ, ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳಿಂದಾಗಿ ಕುಂಭಮೇಳವನ್ನು ಸಾಂಕೇತಿಕವಾಗಿರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವಧೇಶಾನಂದ ಗಿರಿ ಪ್ರಧಾನಮಂತ್ರಿ ಅವರ ಮನವಿಯನ್ನು ನಾವು ಗೌರವಿಸುತ್ತೇವೆ. ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಶಾಹಿ ಸ್ನಾನಕ್ಕೆ ಬರದಂತೆ ನಾನು ವಿನಂತಿಸುತ್ತೇನೆ. ಎಲ್ಲಾ ಕೊರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ವಿನಂತಿಸುತ್ತೇನೆ." ಎಂದು ಟ್ವೀಟ್​ ಮಾಡಿದ್ದರು.  

ಕುಂಭಮೇಳ ಮೊಟಕುಗೊಳಿಸಿ ಆದೇಶ

ಪ್ರಧಾನಿ ಮೋದಿ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸ್ವಾಮಿ ಅವಧೇಶಾನಂದ, ಭಾರತದ ಜನರು ಮತ್ತು ಅವರ ಉಳಿವು ನಮ್ಮ ಮೊದಲ ಆದ್ಯತೆಯಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಏರುತ್ತಿರುವ ಹಿನ್ನೆಲೆಯಲ್ಲಿ ನಾವು ಕುಂಭಮೇಳ ಮೊಟಕುಗೊಳಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. 

Last Updated : Apr 17, 2021, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.