ಹೈದರಾಬಾದ್ : ಜುಲೈ 29 ಭಾರತೀಯ ಉದ್ಯಮ ವಯಲದ ಬೆಳವಣಿಗೆಯ ಹರಿಕಾರ ಮತ್ತು ವಾಯುಯಾನದ ಪಿತಾಮಹ ಜೆಹಂಗೀರ್ ರತನ್ ಜೀ ದಾದಾಭಾಯ್ ಟಾಟಾ (ಜೆಆರ್ಡಿ ಟಾಟಾ) ಅವರ 117 ನೇ ಜನ್ಮ ದಿನವಾಗಿದೆ.
ರತನ್ ಜೀ ದಾದಾಭಾಯ್ ಟಾಟಾ ಮತ್ತು ಸುಝನ್ನೇ ಆರ್.ಡಿ ಟಾಟಾ ಅವರ ಮಗನಾಗಿ ಜುಲೈ 29, 1904 ರಂದು ಪ್ಯಾರಿಸ್ನಲ್ಲಿ ಜೆಆರ್ಡಿ ಟಾಟಾ ಜನಿಸಿದರು. ಫ್ರಾನ್ಸ್ನಲ್ಲಿ ಮತ್ತು ಜಪಾನ್ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಜೆಆರ್ಡಿ ಟಾಟಾ, ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ವಿದ್ಯಾಭ್ಯಾಸ ಬಳಿಕ ಭಾರತಕ್ಕೆ ಬರುವ ಮೊದಲು ಫ್ರೆಂಚ್ ಸೇನೆಯಲ್ಲಿ ಟಾಟಾ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಅವರ ತಂದೆಯ ಮರಣದ ನಂತರ 1926 ರಲ್ಲಿ ತಮ್ಮ 22 ನೇ ವಯಸ್ಸಿಗೆ ಟಾಟಾ ಸನ್ಸ್ ನಿರ್ದೇಶಕರಾಗಿ ಆಯ್ಕೆಯಾದ ಜೆಆರ್ಡಿ ಟಾಟಾ, ನಂತರ ಸುಮಾರು 12 ವರ್ಷಗಳ ಕಾಲ (1993 ಅವರ ಮರಣದವರೆಗೆ) ಸಂಸ್ಥೆಯ ಅಧ್ಯಕ್ಷರಾಗಿದ್ದರು.
ಓದಿ : 2022 ರ ಅಂತ್ಯದ ವೇಳೆಗೆ ಚಂದ್ರಯಾನ-3 ಉಡಾವಣೆ ಸಾಧ್ಯತೆ: ಜಿತೇಂದ್ರ ಸಿಂಗ್
ಜೆಆರ್ಡಿ ಟಾಟಾ ಅವರು ಭಾರತೀಯತೆಯ ಕಲ್ಪನೆಯನ್ನು ಅನುಸರಿಸಿಕೊಂಡು ಜೀವನ, ಉದ್ಯಮ ನಡೆಸಿದವರು. ದೇಶದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಕೈಗಾರಿಕಾ ಗ್ರೂಪ್ನ ನಾಯಕನಾಗಿ, ರಾಷ್ಟ್ರದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅಗಾಧ ಕೊಡುಗೆ ನೀಡಿದವರು.
ಅಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಟಾಟಾ ಗ್ರೂಪ್ ಕೈ ಹಾಕದ ಉದ್ಯಮಗಳಿಲ್ಲ. ಕೈಗಾರಿಕೆ, ಆರೋಗ್ಯ ವಿಜ್ಞಾನ, ಶಿಕ್ಷಣ, ಸೇವಾ ವಲಯ, ಮಾಹಿತಿ ಸಂಪರ್ಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಟಾಟಾ ಗ್ರೂಪ್ ಇಂದು ತನ್ನದೇ ಛಾಪು ಮೂಡಿಸಿದೆ.
ಜೆಆರ್ಡಿ ಟಾಟಾ ಅವರು ಉದ್ಯಮ ವಲಯದಲ್ಲಿ ಸೃಷ್ಟಿಸಿದ ಕ್ರಾಂತಿಯನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.