ಬೆಂಗಳೂರು / ನವದೆಹಲಿ: ಹೆಲಿಕಾಪ್ಟರ್ ಮೂಲಕ ಉಡ್ಡಯನ ಮಾಡುವ ಸಾಮರ್ಥ್ಯದ ಹೆಲಿನಾ(ಭೂ ಪಡೆ) ಹಾಗೂ ಧ್ರುವಸ್ತ್ರ (ವಾಯುಪಡೆ) ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
ಈ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಧ್ರುವಾಸ್ತ್ರವು ಹೆಲಿಕಾಪ್ಟರ್‌ನಿಂದ ಪ್ರಯೋಗಿಸುವ ‘ಹೆಲಿನಾ’ ಕ್ಷಿಪಣಿ ಸರಣಿಯ ಉನ್ನತೀಕರಿಸಿದ ಕ್ಷಿಪಣಿಯಾಗಿದ್ದು, ಇದು ಶತ್ರು ಪಡೆಯ ಬಂಕರ್, ವಾಹನಗಳು, ಟ್ಯಾಂಕ್‌ಗಳನ್ನು ನಾಶಗೊಳಿಸುತ್ತದೆ ಎಂದು ಡಿಆರ್‌ಡಿಒ ಹೇಳಿದೆ.
ಕ್ಷಿಪಣಿ ಸಾಮರ್ಥ್ಯಗಳನ್ನು ಪರೀಕ್ಷಿಸಲು ಐದು ಬಾರಿ ಪ್ರಯೋಗ ಕೈಗೊಳ್ಳಲಾಗಿದೆ. ಹೆಲಿಕಾಪ್ಟರ್ನಲ್ಲಿ ಹಾರಾಟದ ವೇಳೆ ಹಾಗೂ ಗಾಳಿಯಲ್ಲಿ ಸ್ಥಿರವಾಗಿ ನಿಂತು ಕ್ಪಿಪಣಿಯನ್ನು ಪ್ರಯೋಗಿಸಲಾಗಿದ್ದು, ಚಲಿಸುವ ಹೆಲಿಕಾಪ್ಟರ್‌ನಿಂದ ಅದರ ಗುರಿಯ ವಿರುದ್ಧದ ದಿಕ್ಕಿಗೆ ಮಿಷನ್ ಪ್ರಯೋಗಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.