ETV Bharat / bharat

Johnson & Johnson ಸಿಂಗಲ್​ ಡೋಸ್​ ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಭಾರತ - Union Health Minister Mansukh Mandaviya

ಜಾನ್ಸನ್ & ಜಾನ್ಸನ್​​ ಕಂಪನಿಯ ​​ ಸಿಂಗಲ್ ​ - ಡೋಸ್​ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಭಾರತ ಅನುಮೋದನೆ ನೀಡಿದೆ.

Johnson & Johnson
Johnson & Johnson
author img

By

Published : Aug 7, 2021, 2:14 PM IST

ನವದೆಹಲಿ: ಅಮೆರಿಕ ಮೂಲದ ಜಾಗತಿಕ ಔಷಧ ಕಂಪನಿ ಜಾನ್ಸನ್ & ಜಾನ್ಸನ್​​ ಸಿಂಗಲ್ ​ - ಡೋಸ್​ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಭಾರತ ಅನುಮೋದನೆ ನೀಡಿದೆ. ಈ ವಿಚಾರವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾರೆ.

"ಭಾರತ ತನ್ನ ಲಸಿಕೆಯ ಕಣಜವನ್ನು ವಿಸ್ತರಿಸುತ್ತಿದೆ. ಭಾರತದಲ್ಲಿ ಜಾನ್ಸನ್ & ಜಾನ್ಸನ್​​ ಕಂಪನಿಯ ಸಿಂಗಲ್ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಈಗ ದೇಶದಲ್ಲಿ ತುರ್ತು ಬಳಕೆಗೆ 5 ಕೊರೊನಾ ಲಸಿಕೆಗಳಿವೆ. ಇದು ನಮ್ಮ ರಾಷ್ಟ್ರದ ಕೋವಿಡ್​ ವಿರುದ್ಧದ ಸಾಮೂಹಿಕ ಹೋರಾಟವನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದು ಮನ್ಸುಖ್ ಮಾಂಡವಿಯಾ ಟ್ವೀಟ್​ ಮಾಡಿದ್ದಾರೆ.

  • India expands its vaccine basket!

    Johnson and Johnson’s single-dose COVID-19 vaccine is given approval for Emergency Use in India.

    Now India has 5 EUA vaccines.

    This will further boost our nation's collective fight against #COVID19

    — Mansukh Mandaviya (@mansukhmandviya) August 7, 2021 " class="align-text-top noRightClick twitterSection" data=" ">

ಆಗಸ್ಟ್ 5 ರಂದು ತಮ್ಮ ಒಂದೇ ಡೋಸ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ನಿನ್ನೆಯಷ್ಟೇ ಜಾನ್ಸನ್ & ಜಾನ್ಸನ್​ನ ಭಾರತದ ವಕ್ತಾರರು ತಿಳಿಸಿದ್ದರು. ತಮ್ಮ ಲಸಿಕೆಯು ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗದಲ್ಲಿ ಶೇ.85ರಷ್ಟು ಪರಿಣಾಮಕಾರಿ ಅನ್ನೋದನ್ನ ತೋರಿಸಿದೆ ಎಂದು ಕಂಪನಿ ಹೇಳಿಕೊಂಡಿತ್ತು.

ಇದೀಗ ಭಾರತದಲ್ಲಿ ಒಟ್ಟು ಐದು - ಕೋವಿಶೀಲ್ಡ್​, ಕೊವಾಕ್ಸಿನ್​, ಮಾಡೆರ್ನಾ, ಸ್ಪುಟ್ನಿಕ್​ V ಮತ್ತು ಜಾನ್ಸನ್ & ಜಾನ್ಸನ್ ಲಸಿಕೆಗಳು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಲಸಿಕೆಗಳಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.