ETV Bharat / bharat

Job Alert: ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ - ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ

ತಾತ್ಕಾಲಿಕ ಒಪ್ಪಂದದ ಅವಧಿ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಈ ಹುದ್ದೆ ಅರ್ಜಿ ಸಲ್ಲಿಕೆ, ನೇಮಕಾತಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Job Vacancy in Indian Institute of Information Technology, Raichur

author img

By ETV Bharat Karnataka Team

Published : Sep 9, 2023, 1:52 PM IST

ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ (IIIT) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಸ್ಪೋ್ರ್ಟ್​​ ಕೋಚ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಹೊಂದಿರುವ ಅಭ್ಯರ್ಥಿ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ತಾತ್ಕಾಲಿಕ ಒಪ್ಪಂದದ ಅವಧಿ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು. ಅರ್ಜಿ ಸಲ್ಲಿಕೆ, ನೇಮಕಾತಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯನ್ನು 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಬಿಪಿ.ಇಡಿ (BP. Ed)​​ ಪದವಿಯನ್ನು ಹೊಂದಿರಬೇಕು ಅಥವಾ ಎರಡು ವರ್ಷ ಪೂರ್ಣ ಅವಧಿ ಕೋಚಿಂಗ್​ ಅನುಭವವನ್ನು ಹೊಂದಿರಬೇಕು.

ವೇತನ: ಈ ಹುದ್ದೆಗೆ ಮಾಸಿಕವಾಗಿ 30 ಸಾವಿರ ರೂ. ವೇತನ ನಿಗದಿಸಲಾಗಿದೆ.

ವಯೋಮಿತಿ: ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅನುಸಾರವಾಗಿ ವಯೋಮಿತಿ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಸಾಮಾನ್ಯ ಫಿಟ್ನೆಸ್​ ಪರೀಕ್ಷೆ, ಮಲ್ಟಿ ಸ್ಪೋರ್ಟ್​ ಕೌಶಲ ಪರೀಕ್ಷೆ, ದೈಹಿಕ ಪರೀಕ್ಷೆ, ಸ್ಪೂರ್ಟ್​​ ಸ್ಪೆಸಿಫಿಕ್​ ಥಿಯರಿ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗಳನ್ನು ವಾಕ್​ ಇನ್​ ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಸೆಪ್ಟೆಂಬರ್​ 25ರಂದು ನೇರ ಸಂದರ್ಶನ ನಡೆಸಲಾಗುವುದು. ಬೆಳಗ್ಗೆ 9 ಗಂಟೆಯಿಂದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಸಲಾಗಿದ್ದು, ಸ್ಥಳದಲ್ಲಿಯೇ ದಾಖಲಾತಿ ನಡೆಸಿ, ಫಲಿತಾಂಶ ತಿಳಿಸಲಾಗುವುದು.

ನೇರ ಸಂದರ್ಶನದಲ್ಲಿ ಸಲ್ಲಿಸಬೇಕಾದ ದಾಖಲಾತಿ

ಇತ್ತೀಚಿನ ಅಪ್​ಡೇಟ್​ ರೆಸ್ಯೂಮ್​ ಜೊತೆಗೆ ಪದವಿ ಪ್ರಮಾಣ ಪತ್ರ, ಫಿಟ್ನೆಸ್​ ಪರೀಕ್ಷೆ ಸೇರಿದಂತೆ ದೈಹಿಕ ಶಿಕ್ಷಣ ಕುರಿತ ಪ್ರಮಾಣ ಪತ್ರದ ಒರಿಜಿನಲ್​ ಮತ್ತು ನಕಲು (ಝರಾಕ್ಸ್​) ದಾಖಲಾತಿಯನ್ನು ಸಲ್ಲಿಕೆ ಮಾಡಬೇಕು.

ನೇರ ಸಂದರ್ಶನ ನಡೆಯುವ ಸ್ಥಳ: ಐಐಐಟಿ ರಾಯಚೂರು ಕ್ಯಾಂಪಸ್​ ಜಿಇಸಿ ಕ್ಯಾಂಪಸ್​​, ಯರಮರಸ್​ ಕ್ಯಾಂಪ್, ರಾಯಚೂರು- 584135.

ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು iiitr.ac.in ಈ ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: UPSC Recruitment: ಇಂಜಿನಿಯರಿಂಗ್​ ಸೇವಾ ಪರೀಕ್ಷೆಗೆ ಅಧಿಸೂಚನೆ ಪ್ರಕಟ: 179 ಹುದ್ದೆಗಳಿಗೆ ನೇಮಕಾತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.