ETV Bharat / bharat

ಜಿತಿನ್‌ ಪ್ರಸಾದ್‌ಗೆ ಎಲ್ಲಾ ಅಧಿಕಾರ ಕೊಟ್ರೂ ಪಕ್ಷ ಬಿಟ್ಹೋದ್ರು: ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನೆಡೆ ಎನ್ನಲಾಗುತ್ತಿರುವ ಜಿತಿನ್‌ ಪ್ರಸಾದ್‌ ಅವರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ರಾಜಕೀಯ ವಿರೋಧಿಗಳು ನೀಡುತ್ತಿರುವ ಹೇಳಿಕೆಗಳಿಗೆ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ತಿರುಗೇಟು ನೀಡಿದ್ದಾರೆ.

Jitin Prasada was traditional Congressman, we gave him respect, he wasn't ignored ; Congress MP Kharge
ಜಿತಿನ್‌ ಪ್ರಸಾದ್‌ಗೆ ಎಲ್ಲವನ್ನೂ ನೀಡಿದ್ರೂ ಪಕ್ಷ ಬಿಟ್ಹೋದ್ರು; ವಿರೋಧಿಗಳಿಗೆ ಖರ್ಗೆ ತಿರುಗೇಟು
author img

By

Published : Jun 10, 2021, 2:17 PM IST

ನವದೆಹಲಿ: ಕಾಂಗ್ರೆಸ್ ಹೈಕಮಾಂಡ್‌ ಹಾಗೂ ಉತ್ತರ ಪ್ರದೇಶ ಕೈ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿರುವ ಜಿತಿನ್‌ ಪ್ರಸಾದ್‌ ಅವರ ಬಿಜೆಪಿ ಸೇರ್ಪಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಒಂದು ಕುಟುಂಬದ ಪಕ್ಷವಾಗಿದೆ ಎಂದು ರೆಬಲ್‌ ಶಾಸಕಿ ಆದಿತಿ ಸಿಂಗ್‌ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕರು ಇದಕ್ಕೆ ತಿರುಗೇಟು ನೀಡಿದ್ದಾರೆ. ಜಿತಿನ್‌ ಪ್ರಸಾದ್‌ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ವ್ಯಕ್ತಿ. ಆತನಿಗೆ ಎಲ್ಲಾ ರೀತಿಯ ಗೌರವವನ್ನು ನೀಡಿದ್ದೇವೆ, ನಾವು ನಿರ್ಲಕ್ಷಿಸಿರಲಿಲ್ಲ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಕುರಿತು ಮಾತನಾಡುತ್ತಾ, ಜಿತಿನ್‌ ಪ್ರಸಾದ್‌ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದೇವೆ. ಪಶ್ಚಿಮ ಬಂಗಾಳದ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಪ್ರತಿ ಚುನಾವಣೆಯಲ್ಲೂ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಇಷ್ಟಾಗಿಯೂ ಪಕ್ಷಕ್ಕಾಗಿ ಪ್ರಸಾದ್‌ ಮತ್ತವರ ತಂದೆ ಕೆಲಸ ಮಾಡಿದ್ದರೂ ಕಾಂಗ್ರೆಸ್‌ ಹಾಗೂ ಅದರ ಸಿದ್ಧಾಂತಗಳ ಮೇಲೆ ಆರೋಪ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಆರ್ಥಿಕ ಬೆಳವಣಿಗೆ ಪುನರುಜ್ಜೀವನಕ್ಕೆ 24X7 ಲಸಿಕೆ ಅಭಿಯಾನ ಪ್ರಸ್ತಾಪಿಸಿದ ವಿತ್ತ ಸಚಿವಾಲಯ

ಉತ್ತರಪ್ರದೇಶದಲ್ಲಿ 2022ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಕಸರತ್ತು ಆರಂಭಿಸಿರುವ ಕಾಂಗ್ರೆಸ್‌, ಪ್ರಣಾಳಿಕೆ ಸಮಿತಿ, ಸದಸ್ಯತ್ವ ಸಮಿತಿ, ಕಾರ್ಯಕ್ರಮಗಳ ಜಾರಿ ಸಮಿತಿ, ತರಬೇತಿ ಸಮಿತಿ, ಪಂಚಾಯ್ತಿ ಚುನಾವಣೆ ಸಮಿತಿ ಹಾಗೂ ಮಾಧ್ಯಮ ಸಮಿತಿಗಳನ್ನು ರಚಿಸಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಚ್ಚರಿ ಎಂದರೆ ಜನಪ್ರಿಯ ನಾಯಕರಾದ ಜಿತಿನ್‌ ಪ್ರಸಾದ್‌ ಮತ್ತು ರಾಜ್‌ ಬಬ್ಬರ್‌ ಅವರನ್ನು ಈ ಸಮಿತಿಗಳಿಂದ ಕೈ ಬಿಡಲಾಗಿತ್ತು.

ಇದಾದ ಬಳಿಕ ಪಕ್ಷ ಚಟುವಟಿಕೆಗಳಿಂದ ದೂರವೇ ಉಳಿದ್ದ ಜಿತಿನ್‌ ಪ್ರಸಾದ್‌ ನಿನ್ನೆ ಕೇಸರಿ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಿನ್ನೆ ಬಿಜೆಪಿ ಸೇರಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಎಂತಲೇ ವಿಶ್ಲೇಷಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.