ETV Bharat / bharat

ಡ್ಯಾಂನಲ್ಲಿ 22 ವರ್ಷದ ವಿದ್ಯಾರ್ಥಿನಿ ಮೃತದೇಹ ಪತ್ತೆ... ಅತ್ಯಾಚಾರವೆಸಗಿ ಕೊಲೆ ಶಂಕೆ!

ಮೆಡಿಕಲ್ ಕಾಲೇಜ್​ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಅಣೆಕಟ್ಟೆಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Jharkhand medical student
Jharkhand medical student
author img

By

Published : Jan 13, 2021, 7:56 PM IST

ರಾಮಗಢ(ಜಾರ್ಖಂಡ್​): 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಕೈ-ಕಾಲು ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಜಾರಿಬಾಗ್​ ಪೊಲೀಸರು ತನಿಖೆಗೋಸ್ಕರ ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ.

ಜಾರ್ಜಂಡ್​ನ ರಾಮಗಢ ಜಿಲ್ಲೆಯ ಪತ್ರಾತು ಅಣೆಕಟ್ಟೆಯಲ್ಲಿ ಮಂಗಳವಾರ ಸ್ಥಳೀಯರು ವಿದ್ಯಾರ್ಥಿನಿಯ ಮೃತದೇಹ ಹೊರತೆಗೆದಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಸಾಧ್ಯತೆ ಸೇರಿದಂತೆ ಎಲ್ಲಾ ದೃಷ್ಟಿಯಿಂದ ತನಿಖೆ ನಡೆಸಲು ಪೊಲೀಸ್​ ಅಧಿಕಾರಿಗಳು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ವಿದ್ಯಾರ್ಥಿನಿ ಹಜಾರಿಬಾಗ್​ ಮೆಡಿಕಲ್​ ಕಾಲೇಜ್​ನಲ್ಲಿ ವ್ಯಾಸಂಗ ಮಾಡ್ತಿದ್ದಳು ಎಂದು ತಿಳಿದು ಬಂದಿದೆ.

ಪತ್ರಾತು ಅಣೆಕಟ್ಟು ಪ್ರವಾಸಿ ತಾಣವಾಗಿರುವ ಕಾರಣ ವಿದ್ಯಾರ್ಥಿನಿ ತನ್ನ ಸ್ನೇಹಿತರೊಂದಿಗೆ ಇದರ ಪಕ್ಕದಲ್ಲಿರುವ ರೆಸಾರ್ಟ್​ಗೆ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸ್​ ಇನ್ಸ್​ಪೆಕ್ಟರ್​ ಎ.ವಿ.ಹೋಂಕರ್ ಶಂಕೆ ವ್ಯಕ್ತಪಡಿಸಿದ್ದಾರೆ. ಅವರ ಕಾಲು ಹಾಗೂ ಕೈ ಹಗ್ಗಗಳಿಂದ ಕಟ್ಟಿ ಅಣೆಕಟ್ಟೆಗೆ ಎಸೆಯಲಾಗಿದ್ದು, ಅಲ್ಲಿ ಒಂದು ಚೀಲವೂ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.