ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಮೇನ್ಸ್ ದಿನಾಂಕ ಪ್ರಕಟಗೊಂಡಿದೆ. ಜುಲೈ 20ರಿಂದ 25ರವರೆಗೆ ಹಾಗೂ ಜುಲೈ 27ರಿಂದ ಆಗಸ್ಟ್ 2ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ಹೊರಹಾಕಿದೆ.
ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮುಖ್ಯ ಪರೀಕ್ಷೆ ಈ ಮೇಲಿನ ದಿನಾಂಕದಂದು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಕೇಂದ್ರ ಶಿಕ್ಷಣ ಸಚಿವರಾಗಿರುವ ರಮೇಶ್ ಪೋಖ್ರಿಯಾಲ್ ಮಾಹಿತಿ ಹಂಚಿಕೊಂಡಿದ್ದಾರೆ.
-
#JEEMains2021 to be conducted from July 20th to 25th and July 27th to August 2nd, 2021. pic.twitter.com/hjpBEqjFc9
— ANI (@ANI) July 6, 2021 " class="align-text-top noRightClick twitterSection" data="
">#JEEMains2021 to be conducted from July 20th to 25th and July 27th to August 2nd, 2021. pic.twitter.com/hjpBEqjFc9
— ANI (@ANI) July 6, 2021#JEEMains2021 to be conducted from July 20th to 25th and July 27th to August 2nd, 2021. pic.twitter.com/hjpBEqjFc9
— ANI (@ANI) July 6, 2021
ಅಭ್ಯರ್ಥಿಗಳು jeemain.nta.nic.in ವೆಬ್ಸೈಟ್ ಮೂಲಕ ಇಂದಿನಿಂದಲೇ ಅಪ್ಲಿಕೇಶನ್ ಭರ್ತಿ ಮಾಡಬಹುದಾಗಿದೆ. ಮೂರು ದಿನಗಳ ಕಾಲ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಅನೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಒಂದು ವೇಳೆ ಕೋವಿಡ್ನಿಂದ ಅವಕಾಶ ವಂಚಿತವಾಗಿರುವವರು ಇದೀಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಉಳಿದಂತೆ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ಅನುಮತಿ ನೀಡಲಾಗಿದೆ.
ಇದನ್ನೂ ಓದಿರಿ: ಪಂಚರಾಜ್ಯ ಚುನಾವಣೆ ಮೇಲೆ ಮೋದಿ ಕಣ್ಣು: ಸಿಂಧಿಯಾ ಸೇರಿ ಈ ಮುಖಗಳಿಗೆ ಕೇಂದ್ರ ಸಚಿವ ಸ್ಥಾನ ಸಾಧ್ಯತೆ
ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣ ಈ ಹಿಂದೆ ನಿಗದಿಗೊಂಡಿದ್ದ ಪರೀಕ್ಷೆ ಮುಂದೂಡಿಕೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿತ್ತು.