ಹೈದರಾಬಾದ್: ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹತೆ ಒದಗಿಸುವ ಜೆಇಇ ಮುಖ್ಯ ಪರೀಕ್ಷೆಯ ಸೆಷನ್ 1 ರ ಫಲಿತಾಂಶ ಪ್ರಕಟಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೆಇಇ ಮುಖ್ಯ ಪರೀಕ್ಷೆಯು ಜನವರಿ 24ರಿಂದ ಫೆಬ್ರವರಿ 1ರವರೆಗೆ ನಡೆದಿತ್ತು. ಎನ್ಐಟಿ, ಐಐಐಟಿ ಮತ್ತು ಇತರೆ ಸೆಂಟ್ರಲಿ ಫಂಡೆಡ್ ಟೆಕ್ನಿಕಲ್ ಇನ್ಸುಟಿಟ್ಯೂಶನ್ (ಸಿಎಫ್ಟಿಐ) ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಡಿಗಳಲ್ಲಿ ಬರುವ ಇಂಜಿನಿಯರಿಂಗ್ ಪದವಿಗಳಿಗೆ ಈ ಜೆಇಇ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ಫಲಿತಾಂಶವನ್ನು ವೀಕ್ಷಿಸಲು jeemain.nta.nic.in ಅಥವಾ ntaresults.nic.in. ವೆಬ್ಸೈಟ್ಗೆ ಭೇಟಿ ನೀಡಬಹುದು.
ಫಲಿತಾಂಶ ಹೀಗೆ ಪರಿಶೀಲಿಸಿ: ಅಭ್ಯರ್ಥಿಗಳು ಮೇಲ್ಕಂಡ ವೆಬ್ಸೈಟ್ಗೆ ಲಾಗಿನ್ ಆಗಬೇಕು. ಇದಾದ ಬಳಿಕ ಹೋಮ್ ಪೇಜ್ನಲ್ಲಿ ಜೆಇಇ ಮೇನ್ಸ್ ಸೆಷನ್ 1ರ ಫಲಿತಾಂಶ ಲಿಂಕ್ ಕಾಣುತ್ತದೆ. ಈ ಲಿಂಕ್ಗೆ ಕ್ಲಿಕ್ ಮಾಡಿ ಅರ್ಜಿ ಸಂಖ್ಯೆ ಸೇರಿದಂತೆ ಇನ್ನಿತರ ಅಗತ್ಯ ದಾಖಲೆ ನಮೂದಿಸಿ, ಬಳಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಅದರ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಸೆಷನ್2 ನ ದಾಖಲಾತಿ ಇಂದಿನಿಂದ(ಫೆಬ್ರವರಿ 7ರಿಂದ) ಆರಂಭವಾಗಲಿದೆ.
ಇನ್ನು ಇಂದು ಪ್ರಕಟವಾದ ಫಲಿತಾಂಶದಲ್ಲಿ ಟಾಪ್ ಬಂದ 2.5 ಲಕ್ಷ ಅಭ್ಯರ್ಥಿಗಳು ಅಡ್ವಾನ್ಸ್ ಪರೀಕ್ಷೆ ಎದುರಿಸಲು ಅರ್ಹರಾಗುತ್ತಾರೆ. ಸೆಷನ್ 1ರ ಬಳಿಕ ಮುಂದಿನ ಹಂತದ ಪರೀಕ್ಷೆ ನಡೆಯಲಿದ್ದು, ಅದರಲ್ಲೂ ಆಯ್ಕೆಯಾದ ಅಭ್ಯರ್ಥಿಗಳು ಅಂತಿಮವಾಗಿ ತಮ್ಮ ತಾಂತ್ರಿಕ ಶಿಕ್ಷಣ ಪ್ರಾರಂಭ ಮಾಡಬಹುದಾಗಿದೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಎರಡು ಪೇಪರ್‌ಗಳು ಇರುತ್ತವೆ. ಪೇಪರ್ 1 ಪರೀಕ್ಷೆಯನ್ನು ಎನ್ಐಟಿ, ಐಐಐಟಿ ಮತ್ತು ಸಿಎಫ್ಟಿಐ ಹಾಗೂ ರಾಜ್ಯ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬಿಇ, ಬಿಟೆಕ್ ಕೋರ್ಸ್‌ಗೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.
ಎನ್ಟಿಎ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 9 ಲಕ್ಷ ಅಭ್ಯರ್ಥಿಗಳು ಜೆಇಇ ಸೆಷನ್ 1ಕ್ಕೆ ದಾಖಲಾಗಿದ್ದು, ಅದರಲ್ಲಿ ಬಿಇ/ಬಿಟೆಕ್ ಮೊದಲ ಪೇಪರ್ಗೆ 8.6 ಲಕ್ಷ ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು. ಬಿ. ಆರ್ಕ್/ಬಿ ಪ್ಲಾನಿಂಗ್ನ ಪೇಪರ್ 2 ಗೆ 0.46 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಜನವರಿಯಲ್ಲಿ ನಡೆದ ಜೆಇಇ ಪರೀಕ್ಷೆಗೆ ಶೇ 95.8ರಷ್ಟು ಹಾಜರಾತಿಯೊಂದಿಗೆ ಪರೀಕ್ಷೆ ಬರೆಯಲಾಗಿತ್ತು. ಎನ್ಟಿಎ ಜೆಇಇ ಪರೀಕ್ಷೆ ಆರಂಭವಾದಗಿನಿಂದ ದಾಖಲೆಮಟ್ಟದ ಹಾಜರಾತಿ ಕಂಡು ಬಂದಿದೆ.
ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳು- ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸಲು ಈ ಪರೀಕ್ಷೆ ನಡೆಸಲಾಗಿದೆ. ದೇಶದ ಪ್ರಮುಖ ತಾಂತ್ರಿಕ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಪ್ರವೇಶಕ್ಕಾಗಿ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಜೆಇಇ ಮೇನ್ ಅರ್ಹತಾ ಪರೀಕ್ಷೆಯಾಗಿದೆ. ಜೆಇಇ ಮುಖ್ಯ ಫಲಿತಾಂಶದ ಕಟ್-ಆಫ್ ಮಾರ್ಕ್ ಅನ್ನು ಆಧರಿಸಿ, ವಿದ್ಯಾರ್ಥಿಗಳಿಗೆ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.
ಓದಿ: ಪ್ರಬಲ ಭೂಕಂಪನಕ್ಕೆ ತತ್ತರಿಸಿದ ಸಿರಿಯಾ, ಟರ್ಕಿ.. 3500ಕ್ಕೂ ಹೆಚ್ಚು ಜನರು ಸಜೀವ ಸಮಾಧಿ