ನವದೆಹಲಿ: ಎಂಜನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಬುಧವಾರ ತಡರಾತ್ರಿ ಪ್ರಕಟಗೊಂಡಿದ್ದು, ಕಾವ್ಯಾ ಚೋಪ್ರಾ ನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.
100ಕ್ಕೆ 100ರಷ್ಟು ಅಂಕ ಪಡೆದುಕೊಂಡಿರುವ ಜತೆಗೆ ಎಂಜನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 300ಕ್ಕೆ 300 ಅಂಕ ಗಳಿಕೆ ಮಾಡಿದ್ದಾಳೆ. ಈ ದಾಖಲೆ ನಿರ್ಮಾಣ ಮಾಡಿರುವ ಮೊದಲ ಅಭ್ಯರ್ಥಿ ಎಂಬ ಸಾಧನೆಗೈದಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಮೊದಲ ಹಂತದ ಪರೀಕ್ಷೆಯಲ್ಲಿ ಕಾವ್ಯಾ ಚೋಪ್ರಾ 99.97ರಷ್ಟು ಅಂಕ ಗಳಿಸಿದ್ದರು. ಈ ದಾಖಲೆ ಮುರಿಯುವ ಉದ್ದೇಶದಿಂದ ಮಾರ್ಚ್ನಲ್ಲಿ ನಡೆದ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದಳು. 10ನೇ ತರಗತಿಯಲ್ಲಿ ಶೇ.97.6ರಷ್ಟು ಅಂಕಗಳಿಕೆ ಮಾಡಿದ್ದ ಕಾವ್ಯಾ ಐಒಕ್ಯೂಪಿ, ಐಒಕ್ಯೂಸಿ ಮತ್ತು ಐಒಕ್ಯೂಎಂ ಅರ್ಹತೆ ಪಡೆದುಕೊಂಡಿದ್ದಾರೆ. ಕಾವ್ಯಾ ಅಧ್ಯಯನಕ್ಕಾಗಿ ಪ್ರತಿದಿನ ಸುಮಾರು 7ರಿಂದ 8 ಗಂಟೆಗಳ ಕಾಲ ಓದುವುದರಲ್ಲಿ ಕಳೆಯುತ್ತಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ!
ಏಪ್ರಿಲ್ ಹಾಗೂ ಮೇನಲ್ಲಿ ಇನ್ನೂ ಎರಡು ಹಂತದ ಪರೀಕ್ಷೆಗಳು ನಡೆಯಲಿದ್ದು, ಕೊನೆಯ ರ್‍ಯಾಂಕ್ ಪಟ್ಟಿ ಪ್ರಕಟವಾಗಲಿದೆ.