ETV Bharat / bharat

JEE Main 2021: ಕನ್ನಡ ಸೇರಿ 13 ಭಾಷೆಗಳಲ್ಲಿ 4 ಬಾರಿ ಪರೀಕ್ಷೆಗೆ ಅವಕಾಶ.. ಎಕ್ಸಾಮ್​ನಲ್ಲಿ ಏನೆಲ್ಲಾ ಬದ್ಲಾಯಿತು? - ಎನ್‌ಟಿಎ ಜೆಇಇ ಮೇನ್ಸ್​ 2021

ಪ್ರೀಮಿಯರ್ ಐಐಟಿ, ಎನ್‌ಐಟಿಗಳ ಪ್ರವೇಶ ಪರೀಕ್ಷೆ 2021ರ ಫೆಬ್ರವರಿ 23ರಿಂದ 26ರವರೆಗೆ ನಡೆಯಲಿವೆ. ಅಭ್ಯರ್ಥಿಗಳು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು jeemain.nta.nic.in.ಗೆ ಭೇಟಿ ನೀಡಬಹುದು. ಎಂಜಿನಿಯರಿಂಗ್ ಪ್ರವೇಶವು ಮುಂದಿನ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ಮಾಸಿಕದಂದು ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದರು.

JEE Main
ಜೆಇಇ
author img

By

Published : Dec 16, 2020, 7:50 PM IST

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಮೇನ್ಸ್​ 2021ರ ವೇಳಾಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಬಿಡುಗಡೆ ಮಾಡಿದ್ದಾರೆ.

ಪ್ರೀಮಿಯರ್ ಐಐಟಿ, ಎನ್‌ಐಟಿಗಳ ಪ್ರವೇಶ ಪರೀಕ್ಷೆ 2021ರ ಫೆಬ್ರವರಿ 23ರಿಂದ 26ರವರೆಗೆ ನಡೆಯಲಿವೆ. ಅಭ್ಯರ್ಥಿಗಳು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು jeemain.nta.nic.in.ಗೆ ಭೇಟಿ ನೀಡಬಹುದು. ಎಂಜಿನಿಯರಿಂಗ್ ಪ್ರವೇಶವು ಮುಂದಿನ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ಮಾಸಿಕದಂದು ನಡೆಯಲಿದೆ ಎಂದು ಸಚಿವರು ಹೇಳಿದರು.

ಜೆಇಇ ಮೇನ್ಸ್​ ಫೆಬ್ರವರಿ ಅವಧಿಯ ಫಲಿತಾಂಶವನ್ನು ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದು. ಮೊದಲ ಸೆಷನ್ ಪರೀಕ್ಷೆಯು ಫೆಬ್ರವರಿ 23 - 26ರವರೆಗೆ ನಡೆಯಲಿದೆ. ಪರೀಕ್ಷೆಗಳ ಕೊನೆಯ ದಿನಾಂಕದಿಂದ ಐದು ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪೋಖ್ರಿಯಾಲ್ ಹೇಳಿದ್ದಾರೆ.

ಜೆಇಇ ಮೇನ್ಸ್​ 2021: ಈ ವರ್ಷದ ಪ್ರಮುಖ ಬದಲಾವಣೆಗಳು ಹೀಗಿವೆ:

  • ಮೊದಲು ಜೆಇಇ ಮೇನ್ಸ್​ ಅನ್ನು ಜನವರಿ ಮತ್ತು ಏಪ್ರಿಲ್ ನಡೆಸಲಾಗುತ್ತಿತ್ತು. ಈ ವರ್ಷದ ಕೋವಿಡ್​ ಮತ್ತು ಬೋರ್ಡ್ ಪರೀಕ್ಷೆಗಳ ದೀರ್ಘಾವಧಿಯಿಂದಾಗಿ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ, 2021ರ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ನಿರ್ಧರಿಸಿದೆ.
  • ಹಿಂದಿನ ನಿಯಮಗಳಂತೆ ವಿದ್ಯಾರ್ಥಿಯು ಒಂದು ಅಥವಾ ಎಲ್ಲಾ ನಾಲ್ಕು ಜೆಇಇ ಮೇನ್ಸ್​ ಪರೀಕ್ಷೆಗಳಿಗೆ ಹಾಜರಾಗಬಹುದು. 2021ರ ಜೆಇಇ ಮೇನ್ಸ್ ಶ್ರೇಣಿ ಲೆಕ್ಕಹಾಕಲು ಅಭ್ಯರ್ಥಿಯ ಅತ್ಯುತ್ತಮ ಎನ್‌ಟಿಎ ಸ್ಕೋರ್ ಮಾತ್ರ ಪರಿಗಣಿಸಲಾಗುತ್ತದೆ. ಇದನ್ನು 2021ರ ಜೆಇಇ ಮೇನ್ಸ್​ ಏಪ್ರಿಲ್ ಪರೀಕ್ಷೆ ಫಲಿತಾಂಶದ ನಂತರ ಘೋಷಿಸಲಾಗುತ್ತದೆ.
  • 2021ರ ಜೆಇಇ ಮೇನ್ಸ್ ಅನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆ. ನೀಟ್ ಪರೀಕ್ಷೆಯಂತೆ ಇಂಗ್ಲಿಷ್, ಹಿಂದಿ, ಉರ್ದು, ಅಸ್ಸಾಮೀಸ್, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ಮಲಯಾಳಂ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಸೇರಿದಂತೆ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು.
  • ನೀಟ್‌ನಂತೆ ಪ್ರಾದೇಶಿಕ ಭಾಷೆಯ ಆಯ್ಕೆಗಳು ಅಭ್ಯರ್ಥಿಗಳು ಮಾತನಾಡುವ ಆಯಾ ರಾಜ್ಯಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಭಾರತದಾದ್ಯಂತದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಉರ್ದು ಆಯ್ಕೆ ಮಾತ್ರ ಇರುತ್ತದೆ.
  • ಕೋವಿಡ್​ ಕಾರಣ ಅನೇಕ ಬೋರ್ಡ್​ಗಳು ಪಠ್ಯಕ್ರಮ ತಗ್ಗಿಸಿವೆ. ಇದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು ಎಂಬ ಕಾರಣದಿಂದ ಜೆಟಿಇಯ ಪೇಪರ್​ ಮಾದರಿಯನ್ನು ಪರಿಷ್ಕರಿಸಲು ಮತ್ತು ಆಯ್ಕೆಗಳನ್ನು ಪರಿಚಯಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿರ್ಧರಿಸಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಪ್ರಯತ್ನಿಸಬೇಕಾದ ಒಟ್ಟು ಪ್ರಶ್ನೆಗಳ ಸಂಖ್ಯೆ ತಲಾ 25ರಷ್ಟಿವೆ.
  • ಬಿಇ, ಬಿಟೆಕ್​ನ ಪರೀಕ್ಷೆಯ ಅಭ್ಯರ್ಥಿಗಳು 20 ಬಹು ಆಯ್ಕೆಯ ಪ್ರಶ್ನೆಗಳನ್ನು ಬರೆಯಬೇಕು. ತಪ್ಪು ಉತ್ತರಗಳಿಗೆ ನೆಗೆಟಿವ್ ಸ್ಕೋರ್​​​​​ ಇರುತ್ತವೆ. ವಿಭಾಗ 'ಬಿ'ಯಲ್ಲಿ ವಿದ್ಯಾರ್ಥಿಗಳು 10ರಲ್ಲಿ 5 ಪ್ರಶ್ನೆಗಳಿಗೆ ಪ್ರಯತ್ನಿಸಬೇಕು. ಈ ವಿಭಾಗಕ್ಕೆ ಯಾವುದೇ ನೆಗಿಟಿವ್ ಸ್ಕೋರ್ ಇರುವುದಿಲ್ಲ. ಬಿ.ಆರ್ಕಿಟೆಕ್ಚರ್ ಮತ್ತು ಬಿ.ಪ್ಲಾನಿಂಗ್ ವಿದ್ಯಾರ್ಥಿಗಳು ಸಂಖ್ಯಾತ್ಮಕ ಪ್ರಶ್ನೆ ವಿಭಾಗದಲ್ಲಿ ಆಯ್ಕೆ ಪಡೆಯುತ್ತಾರೆ. ಇಲ್ಲಿ ಅವರು 10ರಲ್ಲಿ 5 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಬೇಕಾಗುತ್ತದೆ.

ಎಲ್ಲಾ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿಯ ನಮೂನೆಗಳನ್ನು ಭರ್ತಿ ಮಾಡುವ ಮೊದಲು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಬೇಕು. Jeemain.nta.nic.inನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.