ETV Bharat / bharat

ಎಂಟು ತಿಂಗಳ ತುಂಬು ಗರ್ಭಿಣಿ ಪತ್ನಿಗೆ ಹೊಡೆದು ಕೊಂದ ಪೊಲೀಸ್​: ಹೊಟ್ಟೆಯಲ್ಲೇ ಶಿಶು ಕೂಡ ಸಾವು - ಕೌಟುಂಬಿಕ ವಿಚಾರವಾಗಿ ಪತಿ ಮತ್ತು ಪತ್ನಿ ಮಧ್ಯೆ ಗಲಾಟೆ

ಎಂಟು ತಿಂಗಳ ತುಂಬು ಗರ್ಭಿಣಿ ಪತ್ನಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್​ ಅಧಿಕಾರಿ ಹೊಡೆದು ಕೊಲೆ ಮಾಡಿದ್ದು, ಹೊಟ್ಟೆಯಲ್ಲೇ ಮಗು ಕೂಡ ಸಾವನ್ನಪ್ಪಿರುವ ದಾರುಣ ಘಟನೆ ಜರುಗಿದೆ.

jammu-and-kashmir-policeman-kills-pregnant-wife-in-kathua
ಎಂಟು ತಿಂಗಳ ತುಂಬು ಗರ್ಭಿಣಿ ಪತ್ನಿಗೆ ಹೊಡೆದು ಕೊಂದ ಪೊಲೀಸ್​: ಹೊಟ್ಟೆಯಲ್ಲೇ ಶಿಶು ಕೂಡ ಸಾವು
author img

By

Published : Aug 23, 2022, 10:56 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ)ಯೋರ್ವ ತನ್ನ ಗರ್ಭಿಣಿ ಪತ್ನಿಯನ್ನು ಹೊಡೆದು ಕೊಂದಿರುವ ಘಟನೆ ನಡೆದಿದ್ದು, ಸದ್ಯ ಆರೋಪಿ ಪೊಲೀಸ್​ ತಲೆ ಮರೆಸಿಕೊಂಡಿದ್ದಾರೆ.

ಮೋಹನ್ ಲಾಲ್ ಎಂಬುವವರೇ ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದು, ಪತ್ನಿ ಆಶಾದೇವಿ (32) ಎಂಬುವವರೇ ಪತಿಯಿಂದ ಕೊಲೆಯಾದ ನತದೃಷ್ಟೆ. ಇಲ್ಲಿನ ಬಿಲ್ಲವರ್ ಪ್ರದೇಶದ ಧರಾಲ್ಟಾ ಗ್ರಾಮದಲ್ಲಿ ನಿವಾಸಿಗಳಾಗಿದ್ದು, ಈ ದಂಪತಿಗೆ ಈಗಾಗಲೇ ಇಬ್ಬರು ಪುತ್ರಿಯರು ಇದ್ದಾರೆ. ಸದ್ಯ ಆಶಾದೇವಿ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಶಿಶು ಸಹ ಆಕೆಯ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಥುವಾ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಾಲ್ ಕಳೆದ ಮೂರು ದಿನಗಳಿಂದ ರಜೆಯ ಮೇಲಿದ್ದರು. ಮಂಗಳವಾರ ಕೌಟುಂಬಿಕ ವಿಚಾರವಾಗಿ ಪತಿ ಮತ್ತು ಪತ್ನಿ ಮಧ್ಯೆ ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿ ಆಶಾದೇವಿಯನ್ನು ಕೊಲೆ ಮಾಡಿದ್ದಾರೆ. ಈ ವಿಷಯ ತಿಳಿದು ನೆರೆಹೊರೆಯವರು ಬರುವರಷ್ಟೇ ಆರೋಪಿ ಸ್ಥಳದಿಂದ ಓಡಿ ಹೋಗಿದ್ದರು.

ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತರುವಷ್ಟರಲ್ಲಿ ಕೆಲವು ಉದ್ರಿಕ್ತ ಜನರು ಮನೆಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಮೇಶ್ ಚಂದರ್ ಕೋತ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಸಲು ನಿರಾಕರಿಸಿದ ಯುವತಿ: ಉದ್ಯಮಿ ಮಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.