ಕುಪ್ವಾರ: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಟ್ಮುಲ್ಲಾ ಪ್ರದೇಶದಲ್ಲಿ ಕಾರು ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ ಕಾರಿನ ಚಾಲಕ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
![jammu-and-kashmir-driver-dies-several-injured-in-kupwar](https://etvbharatimages.akamaized.net/etvbharat/prod-images/img-20201106-wa0014_0611newsroom_1604647556_186.jpg)
ಮೃತನನ್ನು ಕುಪ್ವಾರಾ ನಿವಾಸಿ ಸೈಫುಲ್ಲಾ ದಿನ್ ದೀದಾಡ್ ಎಂಬುವರ ಮಗ ಶಬೀರ್ ಅಹ್ಮದ್ ದೀದಾಡ್ ಎಂದು ಗುರುತಿಸಲಾಗಿದೆ.
![jammu-and-kashmir-driver-dies-several-injured-in-kupwar](https://etvbharatimages.akamaized.net/etvbharat/prod-images/img-20201106-wa0011_0611newsroom_1604647556_1029.jpg)
ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಘಟನೆಯ ತನಿಖೆ ನಡೆಸುತ್ತಿದೆ. ಹಟ್ಮುಲ್ಲಾ ಪ್ರದೇಶದಲ್ಲಿ ವೇಗದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.