ETV Bharat / bharat

ಗಾಂಧೀಜಿ ಸಹಕಾರದಲ್ಲಿ ಹುಟ್ಟಿಕೊಂಡ ಜಾಮಿಯಾ ಸಂಸ್ಥೆ, ಸ್ವಾತಂತ್ರ್ಯ ಸೇನಾನಿಗಳಿಗೆ ನೆರವಾಗಿದ್ದ ಡಾ.ಅನ್ಸಾರಿ - Jamia Millia Islamia university

ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಈ ಇತಿಹಾಸ ಸೃಷ್ಟಿಸಿದವರ ನೆನೆಯುವುದು ನಮ್ಮ ಕರ್ತವ್ಯ. ಜಾಮಿಯಾದ ಸಂಸ್ಥಾಪಕ ಸದಸ್ಯರಾದ ಡಾ ಮುಖ್ತಾರ್ ಅಹ್ಮದ್ ಅನ್ಸಾರಿ (ಎಂಎ ಅನ್ಸಾರಿ) ಮತ್ತು ಹಕೀಮ್ ಅಜ್ಮಲ್ ಖಾನ್ ಅವರಿಗೆ ಗೌರವ ಸಲ್ಲಿಸುವುದು ಮುಖ್ಯವಾಗಿದೆ..

Jamia Millia Islamia university
ತಂತ್ರ್ಯ ಸೇನಾನಿಗಳಿಗೆ ನೆರವಾಗಿದ್ದ ಡಾ.ಅನ್ಸಾರಿ
author img

By

Published : Oct 31, 2021, 6:14 AM IST

ಜಾಮಿಯಾ ಮಿಲಿಯಾ ಇಸ್ಲಾಮಿಯಾ.. ಭಾರತದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಬ್ರಿಟಿಷರನ್ನು ವಿರೋಧಿಸಲು ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿಯ ಕರೆಯಿಂದಲೇ ಈ ವಿಶ್ವವಿದ್ಯಾಲಯ ಹುಟ್ಟಿಕೊಂಡಿತು. ಅಕ್ಟೋಬರ್ 29, 1920ರಂದು ಸ್ಥಾಪಿಸಲಾದ ವಿಶ್ವವಿದ್ಯಾನಿಲಯವು ಒಂದು ಶತಮಾನ ದಾಟಿದೆ.

ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಈ ಇತಿಹಾಸ ಸೃಷ್ಟಿಸಿದವರ ನೆನೆಯುವುದು ನಮ್ಮ ಕರ್ತವ್ಯ. ಜಾಮಿಯಾದ ಸಂಸ್ಥಾಪಕ ಸದಸ್ಯರಾದ ಡಾ ಮುಖ್ತಾರ್ ಅಹ್ಮದ್ ಅನ್ಸಾರಿ (ಎಂಎ ಅನ್ಸಾರಿ) ಮತ್ತು ಹಕೀಮ್ ಅಜ್ಮಲ್ ಖಾನ್ ಅವರಿಗೆ ಗೌರವ ಸಲ್ಲಿಸುವುದು ಮುಖ್ಯವಾಗಿದೆ.

ತಂತ್ರ್ಯ ಸೇನಾನಿಗಳಿಗೆ ನೆರವಾಗಿದ್ದ ಡಾ.ಅನ್ಸಾರಿ

ಅವರು JMU ಸ್ಥಾಪನೆಯ ಮುಂದಾಳತ್ವವನ್ನು ಮಾತ್ರವಲ್ಲದೆ ಚಳವಳಿಗಾರರು ಮತ್ತು ಕ್ರಾಂತಿಕಾರಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ನಿರಂತರ ಬೆಂಬಲ ನೀಡಿದರು. ಡಾ. ಅನ್ಸಾರಿ ಅವರು 1928 ರಿಂದ 1936ರವರೆಗೆ JMUನ ಉಪಕುಲಪತಿಯಾಗಿ ಸೇವೆ ಸಲ್ಲಿಸಿದರು.

ಡಾ.ಎಂ.ಎ.ಅನ್ಸಾರಿ ಅವರು ಹೋರಾಟಗಾರರಿಗೆ ಸೇವೆ ಸಲ್ಲಿಸಿದ್ದಾರೆ ಎಂದು ಇತಿಹಾಸಕಾರ ಸೊಹೈಲ್ ಹಶ್ಮಿ ಹೇಳುತ್ತಾರೆ. ಆ ದಿನಗಳಲ್ಲಿ ಮೂರು ಮಹಾನ್ ಶಸ್ತ್ರಚಿಕಿತ್ಸಕರು ಭಾರತದಲ್ಲಿ ಪ್ರಸಿದ್ಧರಾಗಿದ್ದರು ಮತ್ತು ಅವರು ಕೋಲ್ಕತ್ತಾದ ಡಾ. ಬಿಧನ್ ಚಂದ್ರ ರೈ, ಮುಂಬೈನ ಮಿರಾಜ್ಕರ್ ಮತ್ತು ದೆಹಲಿಯ ಡಾ ಮುಖ್ತಾರ್ ಅಹ್ಮದ್ ಅನ್ಸಾರಿ. ದೆಹಲಿಯ ದರ್ಯಾಗಂಜ್‌ನಲ್ಲಿ ಡಾ.ಎಂ.ಎ.ಅನ್ಸಾರಿ ಅವರ ದೊಡ್ಡ ಮನೆ ಇತ್ತು, ಅಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ ಪ್ರಮುಖ ಪ್ರತಿನಿಧಿಗಳು ಬಂದು ತಂಗುತ್ತಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಯಗೊಂಡ ಹೋರಾಟಗಾರರಿಗೆ ಮನೆಯಲ್ಲಿಯೇ ಆಶ್ರಯ ನೀಡಿ ಅವರ ಆರೈಕೆ ಮಾಡುತ್ತಿದ್ದ ವೈದ್ಯ ಅನ್ಸಾರಿ ಅವರನ್ನ ಈ 75ನೇ ಸ್ವಾತಂತ್ರ್ಯೋತ್ಸವದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಅದೆಷ್ಟೋ ಮಂದಿಗೆ ಅವರು ಮರುಜೀವ ನೀಡಿದ್ದರು ಎಂದು ಇತಿಹಾಸಕಾರ ಹಶ್ಮಿ ಈಗಲೂ ನೆನೆಯುತ್ತಾರೆ.

ಕಾಂಗ್ರೆಸ್, ಸಮಾಜವಾದಿ, ಕಮ್ಯುನಿಸ್ಟ್ ಹೀಗೆ ಯಾವುದೇ ಸಿದ್ಧಾಂತದ ಅನುಯಾಯಿಯಾದರು ಅವರನ್ನು ಅನ್ಸಾರಿ ಆಧರಿಸಿದ್ದರು. ಅಗತ್ಯವಿದ್ದಾಗಲೆಲ್ಲಾ ಅನ್ಸಾರಿ ನಿವಾಸದಲ್ಲಿ ಆಶ್ರಯಪಡೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರು ದೆಹಲಿಗೆ ಬಂದಾಗ ಅವರಿಗೆ ಯಾರು ನೆರವಾಗುತ್ತಿದ್ದರು ಎಂದು ಗಾಂಧೀಜಿ ಕೇಳಿದಾಗ ಜನತೆ ಅನ್ಸಾರಿ ಅವರ ಹೆಸರು ಹೇಳುತ್ತಿದ್ದರು ಎಂಬ ಕುತೂಹಲಕಾರಿ ವಿಚಾರವನ್ನ ಹಂಚಿಕೊಂಡಿದ್ದಾರೆ.

1868ರಲ್ಲಿ ಜನಿಸಿದ ಹಕೀಮ್ ಅಜ್ಮಲ್ ಖಾನ್ ಅವರು ಖಿಲಾಫತ್ ಚಳವಳಿ ಮತ್ತು ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು, ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿದರು.

ಅಸಹಕಾರ ಚಳವಳಿಯು 1920ರಲ್ಲಿ ಪ್ರಾರಂಭವಾಯಿತು ಮತ್ತು ಗಾಂಧಿಯವರೊಂದಿಗೆ ಶೌಕತ್ ಅಲಿ, ಮೊಹಮ್ಮದ್ ಅಲಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೇರಿದಂತೆ ಪ್ರಮುಖ ನಾಯಕರು ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ವಿರುದ್ಧ ದಂಗೆ ಎದ್ದರು. ಬ್ರಿಟಿಷರು ಬೆಂಬಲಿಸಿದ ಅಥವಾ ನಡೆಸುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಹಿಷ್ಕರಿಸುವ ಕರೆಗೆ ಪ್ರತಿಕ್ರಿಯೆಯಾಗಿ, ರಾಷ್ಟ್ರೀಯವಾದಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗುಂಪು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಹೊರ ನಡೆದರು.

ಆರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ತರಗತಿಗಳನ್ನ ಆರಂಭಿಸಿದರು. ಕೆಲವು ವರ್ಷಗಳ ಬಳಿಕ ಹಕೀಮ್ ಅಜ್ಮಲ್ ಖಾನ್, ಡಾ. ಮುಖ್ತಾರ್ ಅಹ್ಮದ್ ಅನ್ಸಾರಿ ಮತ್ತು ಅಬ್ದುಲ್ ಅಜೀದ್​ ಖ್ವಾಜಾ ಅವರು ಗಾಂಧೀಜಿಯವರ ಸಹಕಾರದಿಂದ ಜಾಮಿಯಾವನ್ನ ಅಲಿಗಢದಿಂದ ದೆಹಲಿಗೆ ಸ್ಥಳಾಂತರಿಸಿದರು. ಜಾಮೀಯಾ ಎಂದಿಗೂ ನಡೆಯುತ್ತರಬೇಕು ,ಅದೇನಾದರೂ ಹಣಕಾಸಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದರೆ ನಾನು ಭಿಕ್ಷೆ ಪಾತ್ರೆ ಹಿಡಿದು ಜನರ ಬಳಿ ತೆರಳುತ್ತೇನೆ ಎಂದು ಗಾಂಧೀಜಿ ಹೇಳಿದ್ದರು.

ಅಜ್ಮಲ್ ಖಾನ್ ಅವರ ತಂದೆ ಬಲ್ಲಿಮಾರನ್‌ನ ಶರೀಫ್ ಮಂಜಿಲ್‌ನಲ್ಲಿ ಆಸ್ಪತ್ರೆ ನಿರ್ಮಿಸಿದ್ದರು. ಆದರೆ, ಕ್ರಮೇಣ ಷರೀಫ್ ಮಂಜಿಲ್ ಕಾಂಗ್ರೆಸ್ ಕಚೇರಿಯಾಗಿ ಮಾರ್ಪಟ್ಟಿತು ಮತ್ತು ದೆಹಲಿಯ ಪ್ರತಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗಳು ಅಲ್ಲಿಯೇ ನಡೆಯುತ್ತಿದ್ದವು.

ಜಾಮಿಯಾ ಪ್ರೆಸ್, ಗ್ರಂಥಾಲಯವನ್ನು ಹೊರತುಪಡಿಸಿ ಜಾಮಿಯಾದ ಎಲ್ಲಾ ಸಂಸ್ಥೆಗಳನ್ನು ನಂತರ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಯಿತು. 1927ರಲ್ಲಿ, ಅಜ್ಮಲ್ ಖಾನ್ ನಿಧನರಾದರು ಮತ್ತು ಜಾಮಿಯಾ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿತ್ತು. 1934ರಲ್ಲಿ ಡಾ.ಅನ್ಸಾರಿ ನಿಧನರಾದರು ಮತ್ತು ಜಾಮಿಯಾ ಭೂಮಿಯಲ್ಲಿ ಅವರಿಬ್ಬರ ಅಂತ್ಯಕ್ರಿಯೆ ನೆರವೇರಿತು. ಈಗ ಜಾಮೀಯ ಭೂಮಿಯಿಂದ ದೇಶ ಸೇವೆಗೆಂದು ಹೊರ ಬರುವ ಪ್ರತಿ ನಾಗರಿಕರ ಹಿಂದೆ ಅನ್ಸಾರಿ ಅವರ ಕೊಡುಗೆ ಬಹುದೊಡ್ಡದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.