ETV Bharat / bharat

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್​ ರಾಜೀನಾಮೆ - ಜೈವೀರ್​ ಶೆರ್ಗಿಲ್​​ ರಾಜೀನಾಮೆ

ಕೆಲವು ರಾಜ್ಯಗಳ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆ ಮುಂದಿರುವಾಗಲೇ ಕಾಂಗ್ರೆಸ್​ಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಿದೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ ಸಲ್ಲಿಸಿದ್ದಾರೆ.

Jaiveer Shergill Resigns
Jaiveer Shergill Resigns
author img

By

Published : Aug 24, 2022, 6:16 PM IST

ನವದೆಹಲಿ: ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ 39 ವರ್ಷದ ಜೈವೀರ್​ ಶೆರ್ಗಿಲ್​​ ರಾಜೀನಾಮೆ ನೀಡಿದ್ದಾರೆ. ಗಾಂಧಿ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ಮಾಡಿರುವ ಅವರು, ದೇಶದ ಹಿತಾಸಕ್ತಿಯ ದೃಷ್ಟಿಕೋನದಿಂದ ಪಕ್ಷ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಶೆರ್ಗಿಲ್​, ಪಕ್ಷ ತೆಗೆದುಕೊಳ್ಳುತ್ತಿರುವ ನಿರ್ಣಯಗಳು, ತಳೆದಿರುವ ಸಿದ್ಧಾಂತ ಈಗಿನ ಯುವ ಕಾರ್ಯಕರ್ತರು ಹಾಗೂ ಆಧುನಿಕ ಭಾರತದ ಆಕಾಂಕ್ಷೆಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ, ಮೂವರೂ ಗಾಂಧಿಗಳು ಕಳೆದ ಒಂದು ವರ್ಷದಿಂದ ನಮ್ಮನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಪಕ್ಷದೊಂದಿಗಿನ ಎಲ್ಲ ಸಂಬಂಧವನ್ನೂ ಕಡಿದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

  • In the past 8 yrs, I've not taken anything from Congress but only poured into the party. Today when I'm being pushed to bow down before people because they're close to the top leadership; this isn't acceptable to me: Jaiveer Shergill after resigning from all posts in Congress pic.twitter.com/ZCb0AoBHKi

    — ANI (@ANI) August 24, 2022 " class="align-text-top noRightClick twitterSection" data=" ">

ಕಾಂಗ್ರೆಸ್​ ನಿರ್ಧಾರಗಳಿಗೂ ವಾಸ್ತವಕ್ಕೂ ಹೊಂದಾಣಿಕೆಯೇ ಇಲ್ಲ. ಕಳೆದ ಒಂದು ವರ್ಷದಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲು ಸಮಯ ಕೇಳುತ್ತಿದ್ದೇನೆ. ಆದರೆ, ಅದಕ್ಕೆ ಅವಕಾಶವೇ ಸಿಕ್ಕಿಲ್ಲ. ದೇಶದ ಹಿತದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಲಾಗುತ್ತಿಲ್ಲ ಎಂಬುದು ತುಂಬ ನೋವುಂಟು ಮಾಡಿದೆ. ಇದರ ಬದಲು ವೈಯಕ್ತಿಕ ಹಿತಾಸಕ್ತಿಯ ಮನಸ್ಥಿತಿಯ ಕೆಲಸವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಕೆಲಸ ಮಾಡಲು, ಅದರೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: 'ಕೈ' ಬಿಟ್ಟ ಬೆನ್ನಲ್ಲೇ ಸುದ್ದಿಗೋಷ್ಠಿ​: ಕಾಂಗ್ರೆಸ್ ಟೀಕಿಸಿ, ಬಿಜೆಪಿ ಹೊಗಳಿದ ಹಾರ್ದಿಕ್ ಪಟೇಲ್​

ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಏನನ್ನೂ ತೆಗೆದುಕೊಂಡಿಲ್ಲ. ಪಕ್ಷಕ್ಕೆ ಎಲ್ಲ ಶಕ್ತಿ, ಸಾಮರ್ಥ್ಯ ಧಾರೆ ಎರೆದಿದ್ದೇನೆ. ಕಾಂಗ್ರೆಸ್ ಪಕ್ಷವನ್ನೀಗ ಗೆದ್ದಲು ಹುಳು ತಿನ್ನುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

ಜೈವೀರ್ ಶೆರ್ಗಿಲ್​ ವಕೀಲರು ಕೂಡಾ ಹೌದು. ಕಾಂಗ್ರೆಸ್​​ನ ಅತ್ಯಂತ ಕಿರಿಯ ಮತ್ತು ಪ್ರಮುಖ ವಕ್ತಾರರಲ್ಲಿ ಒಬ್ಬರು. ಈಗಾಗಲೇ ಗುಲಾಂ ನಬಿ ಆಜಾದ್​, ಆನಂದ್ ಶರ್ಮಾ ತಮ್ಮ ರಾಜ್ಯಗಳ ಪ್ರಮುಖ ಹುದ್ದೆಗಳನ್ನು ತ್ಯಜಿಸಿ ನೇರವಾಗಿ ಬೇಸರ ಹೊರಹಾಕಿದ್ದಾರೆ. ಇದೀಗ ಜೈವೀರ್ ಕೂಡಾ ಇದೇ ಹಾದಿಯಲ್ಲಿ ಸಾಗಿರುವುದು ಗಮನಾರ್ಹ.

ಕಳೆದ ಕೆಲ ತಿಂಗಳ ಹಿಂದೆ ಗುಜರಾತ್​ನಲ್ಲೂ ಪಾಟೀದಾರ್​ ಸಮುದಾಯದ ಪ್ರಮುಖ ಮುಖಂಡ ಹಾರ್ದಿಕ್​ ಪಟೇಲ್ ಕಾಂಗ್ರೆಸ್​ ಜೊತೆಗಿನ ಸಖ್ಯ ಮುರಿದುಕೊಂಡು ಹೊರಬಂದಿದ್ದರು. ಇದಕ್ಕೂ ಮೊದಲು ಮೋದಿ ಕ್ಯಾಬಿನೆಟ್​ನಲ್ಲಿ ಮಂತ್ರಿಯಾಗಿರುವ ಜ್ಯೋತಿರಾದಿತ್ಯ ಸಿಂದಿಯಾ ಕೂಡ ಇದೇ ಕಾಂಗ್ರೆಸ್​​ ತ್ಯಜಿಸಿ ಬಂದವರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.