ETV Bharat / bharat

ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಭಾರತ ಪ್ರವಾಸ: ಭದ್ರತೆ, ಉಗ್ರರ ನಿಗ್ರಹದ ಬಗ್ಗೆ ಜೈಶಂಕರ್‌ ಜತೆ ಬ್ಲಿಂಕೆನ್‌ ಚರ್ಚೆ - ದೆಹಲಿ

ಭಾರತ ಪ್ರವಾಸದಲ್ಲಿ ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವ ಆ್ಯಂಟನಿ ಬ್ಲಿಂಕೆನ್‌, ಮುಂದಿನ ದಿನಗಳಲ್ಲಿ ಭಾರತ, ಅಮೆರಿಕ ಒಟ್ಟಾಗಿ ಮತ್ತಷ್ಟು ಕೆಲಸಗಳನ್ನು ಮಾಡಲಿವೆ ಎಂದು ಹೇಳಿದ್ದಾರೆ. ಯುಎಸ್, ಭಾರತ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧತೆಯನ್ನು ಹಂಚಿಕೊಳ್ಳುತ್ತವೆ. ಇದು ನಮ್ಮ ಸಂಬಂಧದ ತಳಹದಿಯಾಗಿದೆ ಎಂದಿದ್ದಾರೆ.

Jaishankar, Blinken discuss strengthening Quad, countering terrorism
ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಭಾರತ ಪ್ರವಾಸ; ಭದ್ರತೆ, ಉಗ್ರರ ನಿಗ್ರಹದ ಬಗ್ಗೆ ಜೈಶಂಕರ್‌ ಜತೆ ಬ್ಲಿಂಕೆನ್‌ ಚರ್ಚೆ
author img

By

Published : Jul 28, 2021, 6:09 PM IST

ನವದೆಹಲಿ: ಭಾರತ ಮತ್ತು ಅಮೆರಿಕ ಒಟ್ಟಾಗಿ ಮಾಡಲು ಸಾಧ್ಯವಿರುವ ಕೆಲಸಗಳನ್ನು ಪ್ರಶಂಸಿಸುತ್ತೇವೆ. ಮುಂಬರುವ ದಿನಗಳಲ್ಲೂ ಉಭಯ ದೇಶಗಳು ಮತ್ತಷ್ಟು ಕೆಲಸ ಮಾಡಲಿ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.

ದೆಹಲಿಯಲ್ಲಿಂದು ಮಾತನಾಡಿದ ಅವರು, ಭಾರತದಿಂದ ಮತ್ತಷ್ಟು ಸಹಕಾರವನ್ನು ನಿರೀಕ್ಷಿಸುತ್ತಿರುವ ಬ್ಲಿಂಕೆನ್, ನಮ್ಮ ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುವ ಸವಾಲು ಇಲ್ಲ, ಅದು COVID ಆಗಿರಲಿ ಅಥವಾ ನಮ್ಮಲ್ಲಿ ಯಾರೊಬ್ಬರೂ ಏಕಾಂಗಿಯಾಗಿ ವರ್ತಿಸುವುದರಿಂದ ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮ ಬೀರುತ್ತದೆ ಎಂದರು.

ಇದಕ್ಕೂ ಮುನ್ನ, ಬ್ಲಿಂಕೆನ್ ರಾಷ್ಟ್ರ ರಾಜಧಾನಿಯಲ್ಲಿ ಕೆಲ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಅವರು, ನಾನು ಇಂದು ನಾಗರಿಕ ಸಮಾಜದ ಮುಖಂಡರನ್ನು ಭೇಟಿಯಾಗಿ ಸಂತೋಷಪಟ್ಟಿದ್ದೇನೆ ಎಂದು ತಿಳಿಸಿದರು.

ಯುಎಸ್ ಮತ್ತು ಭಾರತ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧತೆಯನ್ನು ಹಂಚಿಕೊಳ್ಳುತ್ತವೆ. ಇದು ನಮ್ಮ ಸಂಬಂಧದ ತಳಹದಿಯಾಗಿದೆ. ಭಾರತದ ಬಹುತ್ವ ಸಮಾಜ ಮತ್ತು ಸಾಮರಸ್ಯದ ಇತಿಹಾಸದ ಪ್ರತಿಫಲನವಾಗಿದೆ. ನಾಗರಿಕ ಸಮಾಜವು ಈ ಮೌಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಬ್ಲಿಂಕೆನ್‌ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: 2 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ಲಿಂಕೆನ್​.. ಈ ವಿಷಯಗಳ ಕುರಿತು ಚರ್ಚೆ!

ಹಿಂದೆಂದಿಗಿಂತಲೂ ದೇಶಗಳ ನಡುವೆ ಸಹಕಾರದ ಮೇಲೆ ಹೆಚ್ಚಿನ ಅವಶ್ಯಕತೆಯಿದೆ. ಭಾರತ ಮತ್ತು ಯುಎಸ್ ನಡುವಿನ ಸಂಬಂಧವನ್ನು ಬಲವಾಗಿ ಮುಂದುವರಿಸಲು ಬೈಡನ್‌ ಅವರು ನಿಶ್ಚಯಿಸಿರುವುದಾಗಿ ಅವರು ಹೇಳಿದರು. ಜಾಗತಿಕ ವಿಷಯಗಳ ಬಗ್ಗೆ ಬ್ಲಿಂಕೆನ್ ಅವರೊಂದಿಗಿನ ಅವರ ಸಂಭಾಷಣೆ ರಾಷ್ಟ್ರೀಯ ಅನುಭವಗಳ ನೈಜ ವಿನಿಮಯದಿಂದ ಖಂಡಿತವಾಗಿಯೂ ಉತ್ಕೃಷ್ಟವಾಗಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.

ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಸ್ಥಿರತೆ ಕಾಪಾಡಲು, ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿ ಎರಡೂ ದೇಶಗಳಿಗೆ ಮುಖ್ಯವಾಗಿದೆ. ಪರಸ್ಪರ ಹಿತಾಸಕ್ತಿಗಾಗಿ ಕ್ವಾಡ್ ಸಹಕಾರಿ ವೇದಿಕೆಯಾಗಿದೆ. ಭಯೋತ್ಪಾದನೆಯಂತಹ ಪ್ರಮುಖ ಸಮಕಾಲೀನ ಸವಾಲುಗಳ ಬಗ್ಗೆ ಉಭಯ ದೇಶಗಳು ಇನ್ನಷ್ಟು ನಿಕಟವಾಗಿ ಕೆಲಸ ಮಾಡಬೇಕು ಎಂದು ಜೈಶಂಕರ್‌ ಹೇಳಿದರು.

ಸಚಿವ ಜೈಶಂಕರ್ ಮತ್ತು ಬ್ಲಿಂಕೆನ್ ಅವರು ಮಧ್ಯಾಹ್ನ ಜಂಟಿ ಮಾಧ್ಯಮಗೋಷ್ಟಿ ನಡೆಸಿದರು. ಬ್ಲಿಂಕೆನ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.