ETV Bharat / bharat

ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮ ಕುಸಿದು ಇಬ್ಬರು ವಿದೇಶಿಗರು ಸಾವು, 21 ಜನರ ರಕ್ಷಣೆ

ಸ್ಕೀಯಿಂಗ್​ನಲ್ಲಿ ತೊಡಗಿದ್ದಾಗ ಹಿಮ ಕುಸಿದು ಇಬ್ಬರು ವಿದೇಶಿಗರು ಸಾವಿಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದಿದೆ.

author img

By

Published : Feb 1, 2023, 8:26 PM IST

j-and-k-two-foreigners-die-as-massive-avalanche-hits-gulmarg-21-others-rescued
ಸ್ಕೀಯಿಂಗ್: ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮ ಕುಸಿದು ಇಬ್ಬರು ವಿದೇಶಿಗರ ಸಾವು, 21 ಜನರ ರಕ್ಷಣೆ

ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಮುಂದುವರೆದಿದೆ. ಇಲ್ಲಿನ ಗುಲ್ಮಾರ್ಗ್‌ನಲ್ಲಿಂದು ಸ್ಕೀಯಿಂಗ್​ನಲ್ಲಿ ತೊಡಗಿದ್ದಾಗ ಇಬ್ಬರು ವಿದೇಶಿಗರು ಭಾರಿ ಹಿಮ ಕುಸಿತವಾಗಿ ಮೃತಪಟ್ಟಿದ್ದಾರೆ. ಇದೇ ವೇಳೆ ಇತರೆ 19 ವಿದೇಶಿ ಪ್ರಜೆಗಳು ಮತ್ತು ಇಬ್ಬರು ಸ್ಥಳೀಯ ಗೈಡ್​ಗಳು ಸೇರಿ 21 ಜನರನ್ನು ರಕ್ಷಿಸಲಾಗಿದೆ.

ಬೆಳಗ್ಗೆ ರಷ್ಯಾ ಮತ್ತು ಪೋಲೆಂಡ್‌ ಮೂಲದ 21 ವಿದೇಶಿಗರು ಮತ್ತು ಇಬ್ಬರು ಸ್ಥಳೀಯ ಗೈಡ್‌ಗಳನ್ನು ಒಳಗೊಂಡ ಮೂರು ತಂಡಗಳು ಸ್ಕೀಯಿಂಗ್‌ಗಾಗಿ ಗುಲ್ಮಾರ್ಗ್‌ಗೆ ತೆರಳಿದ್ದವು. ಮಧ್ಯಾಹ್ನ 12.30ರ ಸುಮಾರಿಗೆ ಹಪತ್‌ಖುಡ್ ಕಾಂಗ್ಡೋರಿ ಎಂಬಲ್ಲಿ ದಿಢೀರ್ ಹಿಮಕುಸಿತ ಸಂಭವಿಸಿದೆ. ದಟ್ಟ ಹಿಮದಲ್ಲಿ ಸ್ಕೀಯಿಂಗ್ ತಂಡಗಳು ಸಿಲುಕಿಕೊಂಡಿದ್ದವು. ಈ ಕುರಿತು ಮಾಹಿತಿ ಪಡೆದ ತಕ್ಷಣವೇ ಬಾರಾಮುಲ್ಲಾ ಪೊಲೀಸರು ಮತ್ತು ಪ್ರವಾಸೋದ್ಯಮ ಇಲಾಖೆಯ ಜಂಟಿ ರಕ್ಷಣಾ ತಂಡಗಳು ಹಿಮಪಾತದ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.

ಈ ಮೂಲಕ ಒಟ್ಟಾರೆ 23 ಜನರ ಪೈಕಿ 19 ಜನರನ್ನು ರಕ್ಷಣೆ ಮಾಡುವಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಯಶಸ್ವಿಯಾದರು. ಆದರೆ, ಉಳಿದ ಇಬ್ಬರು ವಿದೇಶಿಗರು ಹಿಮದಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡರು. ಮೃತರನ್ನು ಕ್ರಿಸ್​ಲ್ಟೋಫ್ (43) ಮತ್ತು ಆಡಮ್ ಗ್ರ್ಜೆಕ್ (45) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಕೂಡ ಪೋಲೆಂಡ್‌ ದೇಶದವರಾಗಿದ್ದು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಕೀಯಿಂಗ್‌ ತಂಡದಲ್ಲಿ ಪೋಲೆಂಡ್​ನ ವಿದೇಶಿ ಗೈಡ್‌ ಬಾರ್ಟೋಸ್ ಮತ್ತು ಸ್ಥಳೀಯ ಗೈಡ್​ಗಳಾದ ಫಯಾಜ್ ಅಹ್ಮದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಮಿರ್ ಸಹ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಮಪಾತಕ್ಕೆ ಬಾಲಕಿ ಸೇರಿ ಇಬ್ಬರು ಬಲಿ : ವಿದೇಶಿ ಪ್ರವಾಸಿಗನ ರಕ್ಷಣೆ

ಸತತ ಅವಘಡ: ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಜನವರಿ 13ರಿಂದ ಈ ವರ್ಷದ ಮೊದಲ ಋತುವಿನ ಹಿಮಪಾತ ಆರಂಭವಾಗಿದೆ. ಹಿಮದ ಸವಿ ಸವಿಯಲು ಮತ್ತು ಅದರ ಆನಂದ ಅನುಭವಿಸಲು ದೇಶ, ವಿದೇಶದ ಪ್ರವಾಸಿಗರು ಕಣಿವೆ ನಾಡುಗಳತ್ತ ಲಗ್ಗೆ ಇಡುತ್ತಿದ್ದಾರೆ. ಅದರಲ್ಲೂ, ಹಿಮದಲ್ಲಿ ಸ್ಕೀಯಿಂಗ್ ಸೇರಿ ಇತರ ಆಟೋಟಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಮೂರು ದಿನಗಳ ಹಿಂದಷ್ಟೇ ಇದೇ ರೀತಿ ಸ್ಕೀಯಿಂಗ್​ನಲ್ಲಿ ತೊಡಗಿದ್ದ ನಾರ್ವೆ ಪ್ರಜೆಯೊಬ್ಬರು ಹಿಮದಲ್ಲಿ ಸಿಲುಕಿದ್ದರು. ತಡರಾತ್ರಿಯವರೆಗೆ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ, ಆತನನ್ನು ರಕ್ಷಣೆ ಮಾಡಿದ್ದವು.

ಜನವರಿ 29ರಂದು ಸಹ ಕಾರ್ಗಿಲ್​ನಲ್ಲಿ ಸ್ಥಳೀಯ 11 ವರ್ಷದ ಬಾಲಕಿ ಮತ್ತು 23 ವರ್ಷದ ಯುವತಿ ಹಿಮಪಾತಕ್ಕೆ ಬಲಿಯಾಗಿದ್ದರು. ಇದಕ್ಕೂ ಮುನ್ನ ಕಾರ್ಮಿಕರು ಸಹ ಹಿಮಕುಸಿತದಿಂದ ಮೃತಪಟ್ಟಿದ್ದರು. ಮಂಗಳವಾರಷ್ಟೇ ಅನಂತ್​ನಾಗ್​, ಬಂಡಿಪೋರಾ, ಬಾರಾಮುಲ್ಲಾ, ಗಂದರ್​ಬಲ್​, ಕುಲ್ಗಾಮ್​, ಕುಪ್ವಾರ್​ ಮತ್ತು ಕಿಶ್ತ್ವಾರ್​ ಜಿಲ್ಲೆಗಳಲ್ಲಿ ಭಾರಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರಿ ಎಚ್ಚರಿಸಿತ್ತು.

ಇದನ್ನೂ ಓದಿ: ಹಿಮಪಾತಕ್ಕೆ ಅಂಜದೆ ಶಾಲೆಗೆ ತೆರಳುತ್ತಿರುವ ಮಕ್ಕಳು.. ವಿದ್ಯಾರ್ಥಿನಿಯರ ಶಿಕ್ಷಣದ ಆಸ್ತೆಗೆ ನೆಟ್ಟಿಗರ ಸಲಾಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.