ETV Bharat / bharat

Jammu-Kashmir: ಕಾನೂನು ಆದೇಶಗಳ ರೂಪಾಂತರದಲ್ಲಿ 64 ದೋಷ ಸರಿಪಡಿಸಲು MH ಸೂಚನೆ - ಸೆಕ್ಷನ್ 96

ಕಣಿವೆ ರಾಜ್ಯದ ಶಾಸಕಾಂಗವು ಜಾರಿಗೆ ತಂದಿರುವ ಕಾನೂನುಗಳಲ್ಲಿರುವ ದೋಷ ಸರಿಪಡಿಸುವಂತೆ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

MHA
MHA
author img

By

Published : Jul 4, 2021, 11:24 AM IST

ಶ್ರೀನಗರ (ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರ ಶಾಸಕಾಂಗವು ಜಾರಿಗೆ ತಂದಿರುವ ಕಾನೂನುಗಳಲ್ಲಿ 64 ದೋಷಗಳನ್ನು ಸರಿಪಡಿಸಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯಲ್ಲಿ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯ ಸೆಕ್ಷನ್ 96 ರ ಅಡಿಯಲ್ಲಿ ಹೊರಡಿಸಲಾದ ನಾಲ್ಕು ಆದೇಶಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಗೃಹಸಚಿವಾಲಯ ಸೂಚಿಸಿದೆ. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ಗೆ ಅನ್ವಯವಾಗುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಅಥವಾ ರದ್ದುಗೊಳಿಸಲು ಅಧಿಕಾರ ನೀಡಿದೆ.

ಸೆಕ್ಷನ್ 96 ರ ಅಡಿಯಲ್ಲಿ, ಮರುಸಂಘಟನೆ ಕಾಯ್ದೆಯ ಮೂಲಕ ಜಮ್ಮುಕಾಶ್ಮೀರಕ್ಕೆ ಅನ್ವಯವಾಗುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಹಾಗೂ ರದ್ದು ಪಡಿಸಲು ಕೇಂದ್ರಕ್ಕೆ ಅಧಿಕಾರ ನೀಡಲಾಯಿತು.

2020 ರಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆಯಲ್ಲಿ (ರಾಜ್ಯ ಕಾನೂನುಗಳ ಆದೇಶದ ರೂಪಾಂತರ) 11 ತಪ್ಪುಗಳನ್ನು ಸರಿಪಡಿಸಲಾಗಿದೆ ಮತ್ತು 21 ರಾಜ್ಯ ಕಾನೂನುಗಳನ್ನು ಅಳವಡಿಸಿಕೊಳ್ಳಲಾಗಿದೆ. 2020 ರಲ್ಲಿ ಐದು ದೋಷಗಳನ್ನು ಸರಿಪಡಿಸಲಾಗಿದೆ. 2019 ರ ಸೆಪ್ಟೆಂಬರ್‌ನಲ್ಲಿ ಕೇಂದ್ರವು 52 ದೋಷಗಳನ್ನು ಸರಿಪಡಿಸಿತ್ತು.

ಇದನ್ನೂ ಓದಿ:Jammu Kashmir Politics : ಮೋದಿ ಭೇಟಿ ಬೆನ್ನಲ್ಲೇ PAGD ಯಲ್ಲಿ ಬಿರುಕು?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.