ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಔಡೋರಾ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಗ್ರಾಮಪಂಚಾಯಿತಿ ಅಧ್ಯಕ್ಷ (ಸರ್‌ಪಂಚ್)ನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ಶ್ರೀನಗರದ ಖಾನ್ಮೋಹ್‌ನಲ್ಲಿ ಭಯೋತ್ಪಾದಕರು ಸರ್‌ಪಂಚ್ ಒಬ್ಬರ ಮನೆಯೊಳಗೆ ನುಗ್ಗಿ ಗುಂಡಿಕ್ಕಿ ಕೊಂದಿರುವ ಕೆಲವೇ ದಿನಗಳ ನಂತರ ಈ ದಾಳಿ ನಡೆದಿದೆ.
ಪಂಚಾಯಿತಿ ಸರ್‌ಪಂಚ್‌ಗಳ ಮೇಲೆ ಈ ವರ್ಷ ನಡೆದ ಮೂರನೇ ದಾಳಿ ಇದಾಗಿದ್ದು, ಕುಲ್ಗಾಮ್‌ನಲ್ಲಿ ಎರಡನೇ ದಾಳಿಯಾಗಿದೆ.
ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು: ದೆಹಲಿಯಲ್ಲಿ ಭಿನ್ನಮತೀಯ ನಾಯಕರ ಸಭೆ
ಕುಲ್ಗಾಮ್‌ನಲ್ಲಿ ಪಂಚಾಯಿತಿ ಅಧ್ಯಕ್ಷರಾದ ಮೊಹಮ್ಮದ್ ಯಾಕುನ್ ದಾರ್ ಅವರನ್ನು ಫೆಬ್ರವರಿಯಲ್ಲಿ ಭಯೋತ್ಪಾದಕರು ಕೊಂದಿದ್ದರು. ಪಂಚಾಯಿತಿ ಜನಪ್ರತಿನಿಧಿಗಳನ್ನು ಕಾಪಾಡಲು ಜಮ್ಮು ಮತ್ತು ಕಾಶ್ಮೀರದ ಆಡಳಿತ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.