ETV Bharat / bharat

ಬಿಜೆಪಿಯ ಪಿತೂರಿಯಿಂದಲೇ ನಮ್ಮ ಸರ್ಕಾರ ಪತನ; ಮಾಜಿ ಸಿಎಂ ನಾರಾಯಣಸ್ವಾಮಿ

ಜೂನ್ 2016ರಲ್ಲಿ ನನ್ನ ಸರ್ಕಾರ ರಚನೆಯಾಗುವ ಮೊದಲೇ ಕೇಂದ್ರವು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಆ ವರ್ಷದ ಮೇ ತಿಂಗಳಲ್ಲಿ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿತ್ತು. ಇದು ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಎಂಬುದು ಸ್ಪಷ್ಟವಾಗಿದೆ ಎಂದು ಮಾಜಿ ಸಿಎಂ ನಾರಾಯಣಸ್ವಾಮಿ ಹೇಳಿದ್ದಾರೆ.

author img

By

Published : Feb 24, 2021, 5:23 PM IST

narayanasamy
ಮಾಜಿ ಸಿಎಂ ನಾರಾಯಣಸ್ವಾಮಿ

ಪುದುಚೇರಿ: ಪುದುಚೇರಿಯ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಕುರಿತು ಬಿಜೆಪಿ ಹಾಗೂ ಅದರ ಮಿತ್ರಪಕ್ಷದ ವಿರುದ್ಧ ಮಾಜಿ ಸಿಎಂ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಎಐಎನ್​​​​​ಆರ್​ಸಿ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಮತ ನೀಡಬೇಡಿ, ಈ ಪಕ್ಷಗಳಿಗೆ ಪುದುಚೇರಿಯನ್ನು ತಮಿಳುನಾಡಿನೊಂದಿಗೆ ಸೇರಿಸುವ ಯಾವುದೇ ಧ್ಯೇಯವಿಲ್ಲ ಎಂದಿದ್ದಾರೆ.

ಪುದುಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಾರಾಯಣಸ್ವಾಮಿ, ಎಐಎಡಿಎಂಕೆ, ಎಐಎನ್​ಆರ್​ಸಿ ಜೊತೆ ಕೈಜೋಡಿಸಿದ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿ ಅನ್ಯಮಾರ್ಗದ ಮೂಲಕ ಪಿತೂರಿಯಿಂದ ಸರ್ಕಾರ ಉರುಳಿಸಿದೆ. ಪ್ರಜಾಸತ್ತಾತ್ಮಕವಾಗಿ ಜನರಿಂದ ಆಯ್ಕೆಯಾಗಿದ್ದ ಸರ್ಕಾರವನ್ನು ಆಮಿಷದ ಮೂಲಕ ತತ್ವರಹಿತವಾಗಿ ಉರುಳಿಸಿ ಪ್ರಜಾಪ್ರಭುತ್ವದ ಹತ್ಯೆ ಮಾಡಿದೆ ಎಂದಿದ್ದಾರೆ.

ಜೂನ್ 2016ರಲ್ಲಿ ನನ್ನ ಸರ್ಕಾರ ರಚನೆಯಾಗುವ ಮೊದಲೇ ಕೇಂದ್ರವು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಆ ವರ್ಷದ ಮೇ ತಿಂಗಳಲ್ಲಿ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿತ್ತು. ಇದು ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಶಾಸಕರು ರಾಜೀನಾಮೆ ನೀಡಿ ಸರ್ಕಾರ ಅಲ್ಪಮತಕ್ಕೆ ಕುಸಿತ ಕಂಡ ಪರಿಣಾಮ ಸೋಮವಾರ ಬಹುಮತ ಸಾಬೀತುಪಡಿಸಲು ದಿನಾಂಕ ನಿಗದಿಯಾಗಿತ್ತು. ಆದರೆ ಇದಕ್ಕೂ ಮೊದಲೇ ಸಿಎಂ ನಾರಾಯಣಸ್ವಾಮಿ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.