ETV Bharat / bharat

ಅಗೋಚರ ಬಾಬಾ ಜೊತೆ ಸಂಪರ್ಕ: ಎನ್‌ಎಸ್‌ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ಆಸ್ತಿ ಪಾಸ್ತಿ ಮೇಲೆ ಐಟಿ ದಾಳಿ

ಎನ್‌ಎಸ್‌ಇ ಮತ್ತು ಅದರ ಉನ್ನತ ಅಧಿಕಾರಿಗಳು ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಸಲಹೆಗಾರರಾಗಿ ನೇಮಕ ಮಾಡಲು ಸಂಬಂಧಿಸಿದ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ (ಎನ್​ಎಸ್​ಇ) ಕಂಡು ಹಿಡಿದಿದೆ. ಹಾಗೆ ಸೆಬಿ ಇವರಿಗೆ ಕಳೆದ ವಾರ ದಂಡ ಕೂಡ ವಿಧಿಸಿತ್ತು.

ಅಗೋಚರ ಬಾಬಾಜೊತೆ ಚಿತ್ರಾ ರಾಮಕೃಷ್ಣನ್ ಸಂಪರ್ಕ
ಅಗೋಚರ ಬಾಬಾಜೊತೆ ಚಿತ್ರಾ ರಾಮಕೃಷ್ಣನ್ ಸಂಪರ್ಕ
author img

By

Published : Feb 17, 2022, 3:46 PM IST

ಮುಂಬೈ (ಮಹಾರಾಷ್ಟ್ರ): ಅಧ್ಯಾತ್ಮಿಕ ಗುರುಗಳೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪ ಹೊತ್ತಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಚಿತ್ರಾ ರಾಮಕೃಷ್ಣ ಅವರಿಗೆ ಸಂಬಂಧಿಸಿದ ನಿವೇಶನಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ನಡೆಸಿದೆ.

ಆಕೆಯ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈ ಮತ್ತು ಚೆನ್ನೈನಲ್ಲಿ ಅವರಿಗೆ ಸಂಬಂಧಿಸಿದ ಕಚೇರಿ, ಮನೆಗಳ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್ 2013 ರಿಂದ ಡಿಸೆಂಬರ್ 2016 ರವರೆಗೆ ಎನ್​ಎಸ್​ಇ ಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD & CEO) ಆಗಿದ್ದರು.

ಎನ್‌ಎಸ್‌ಇ ಮತ್ತು ಅದರ ಉನ್ನತ ಅಧಿಕಾರಿಗಳು ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಸಲಹೆಗಾರರಾಗಿ ನೇಮಕ ಮಾಡಲು ಸಂಬಂಧಿಸಿದ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ (ಎನ್​ಎಸ್​ಇ) ಕಂಡು ಹಿಡಿದಿದೆ. ಹಾಗೆ ಸೆಬಿ ಇವರಿಗೆ ಕಳೆದ ವಾರ ದಂಡ ಕೂಡ ವಿಧಿಸಿತ್ತು.

'ಆಧ್ಯಾತ್ಮಿಕ ಗುರು' ಅವರ ಹೇರ್‌ಸ್ಟೈಲ್‌ನಲ್ಲಿ ಆಸಕ್ತಿ ವಹಿಸಿ, ಅವರೊಂದಿಗೆ ಹಾಡುಗಳನ್ನು ಸಹ ಹಂಚಿಕೊಂಡಿದ್ದರಂತೆ. ಸೆಬಿ(SEBI) ಮಾಹಿತಿ ಪ್ರಕಾರ ಸಮಯ ಕಳೆಯಲು ಸೆಶೆಲ್ಸ್‌ಗೆ ವಿಹಾರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ ಪ್ರಕರಣ: ಪ್ರಿಯಕರನ ಜತೆ ಸೇರಿ ಮಗಳನ್ನೇ ಕೊಂದ ಮಾಯಾಂಗಿನಿ

ಎನ್‌ಎಸ್‌ಇಯ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರು ತಮ್ಮ ಗುರುಗಳ ಬಗ್ಗೆ ಮಾತನಾಡಿದ್ದು, ಮಾರುಕಟ್ಟೆ ನಿಯಂತ್ರಕ ಸೆಬಿಗೆ ನೀಡಿದ ರಾಮಕೃಷ್ಣ ಅವರ ಹೇಳಿಕೆಗೆ ಇದು ವಿರೋಧಾಭಾಸವಾಗಿದೆ. ತನ್ನ ಅಧ್ಯಾತ್ಮಿಕ ಗುರು 'ಸಿದ್ಧ - ಪುರುಷ ಅಥವಾ 'ಪರಮಹಂಸ' ಅವರು ಭೌತಿಕ ವ್ಯಕ್ತಿತ್ವವನ್ನು ಹೊಂದಿಲ್ಲ ಮತ್ತು ಅವರ ಇಚ್ಛೆಯಂತೆ ಕಾರ್ಯರೂಪಕ್ಕೆ ಬರಬಹುದು ಎಂದು ಹೇಳಿದ್ದಾರೆ.

ಗುರುಗಳು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ವಾಸಿಸುತ್ತಿದ್ದಾರೆಂದು ಹೇಳಿರುವ ಅವರು, 20 ವರ್ಷಗಳ ಕಾಲ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಆಕೆಗೆ ಮಾರ್ಗದರ್ಶನ ನೀಡಿದ್ದಾರಂತೆ. ಇವರಿಬ್ಬರ ನಡುವೆ ಪತ್ರ ವ್ಯವಹಾರ ನಡೆದಿದ್ದು, ಆ ಅಪರಿಚಿತ ವ್ಯಕ್ತಿ ಯಾರೆಂದು ರಾಮಕೃಷ್ಣ ಅವರು ತಿಳಿಸಲು ಹಾಗೂ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.