ETV Bharat / bharat

ವೈದಿಕ ಕಾಲದಿಂದಲೂ ಭಾರತದಲ್ಲಿ ಸಂಸ್ಕೃತದ ಪಾತ್ರ ಮಹತ್ವದ್ದು: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ - ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಭಾರತದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ವೈದಿಕ ಕಾಲದಿಂದಲೂ ಸಂಸ್ಕೃತ ಭಾಷೆ ಮಹತ್ವದ ಪಾತ್ರ ವಹಿಸಿದೆ ಎಂದು ಇಸ್ರೋ ಮುಖ್ಯಸ್ಥರು ಶ್ಲಾಘಿಸಿದ್ದಾರೆ.

ISRO chief S Somnath
ಎಸ್ ಸೋಮನಾಥ್
author img

By

Published : May 26, 2023, 12:26 PM IST

ಉಜ್ಜಯಿನಿ (ಮಧ್ಯ ಪ್ರದೇಶ) : ಭಾರತದಲ್ಲಿ ಗಣಿತ, ವೈದ್ಯಕೀಯ, ಆಧ್ಯಾತ್ಮಿಕತೆ, ಖಗೋಳ ಶಾಸ್ತ್ರ ಸೇರಿದಂತೆ ಇತ್ಯಾದಿ ವಿಷಯಗಳನ್ನು ಒಳಗೊಂಡ ಜ್ಞಾನ ಸಂಪತ್ತು ವೇದಗಳ ಕಾಲದಿಂದಲೂ ಇತ್ತು. ಈ ಕುರಿತಾದ ವಿಷಯಗಳನ್ನು ಅಂದೇ ಸಂಸ್ಕೃತದಲ್ಲಿ ಬರೆಯಲಾಗುತ್ತಿತ್ತು. ನಂತರದಲ್ಲಿ ಅರಬ್‌ ದೇಶಗಳ ಮೂಲಕ ನಮ್ಮ ವಿಚಾರಧಾರೆಗಳು ಯುರೋಪ್‌ಗೆ ಪ್ರಯಾಣಿಸಿದವು. ಇದಾಗಿ ಸಾವಿರ ವರ್ಷಗಳ ನಂತರ ಪಾಶ್ಚಿಮಾತ್ಯ ವಿಜ್ಞಾನಿಗಳ ಸಂಶೋಧನೆಗಳಿಂದ ಮರಳಿ ನಮ್ಮ ದೇಶಕ್ಕೆ ಬಂತು ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.

ಬುಧವಾರ ಮಹರ್ಷಿ ಪಾಣಿನಿ ಸಂಸ್ಕೃತ ಮತ್ತು ವೈದಿಕ ವಿಶ್ವವಿದ್ಯಾನಿಲಯದ ನಾಲ್ಕನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, "ಸಂಸ್ಕೃತವು ಕಾವ್ಯ, ತರ್ಕ, ವ್ಯಾಕರಣ, ತತ್ವಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇತರೆ ವಿಷಯಗಳನ್ನು ಒಳಗೊಂಡ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. 'ಸೂರ್ಯ ಸಿದ್ದಾಂತ', ಸಂಸ್ಕೃತದಲ್ಲಿ ನಾನು ಕಂಡ ಮೊದಲ ಪುಸ್ತಕವು ನಮಗೆ ಪರಿಚಿತವಾಗಿರುವ ಡೊಮೈನ್ ವ್ಯವಸ್ಥೆಯ ಕುರಿತು ತಿಳಿಸಿ ಕೊಡುತ್ತದೆ. ಈ ಪುಸ್ತಕವು ಸೌರವ್ಯೂಹದ ಬಗ್ಗೆ ನಿರ್ದಿಷ್ಟವಾಗಿ ಹೇಳುವುದು ಮಾತ್ರವಲ್ಲದೇ, ಸೂರ್ಯನ ಸುತ್ತ ಗ್ರಹಗಳು ಹೇಗೆ ಚಲಿಸುತ್ತವೆ, ಈ ಚಲನೆಯ ಆವರ್ತಕತೆ, ಕಾಲಮಾನಗಳು ಇತ್ಯಾದಿಗಳ ಕುರಿತಾದ ಮಾಹಿತಿ ಒಳಗೊಂಡಿದೆ" ಎಂದು ಹೇಳಿದರು.

ಇದನ್ನೂ ಓದಿ : ಜೀವ ವಿಕಸನ ಒಂದೇ ಬಾರಿ ನಡೆದಿಲ್ವಾ ; ಸಂಶೋಧಕರು ಹೇಳುವುದೇನು?

"ಖಗೋಳ ಶಾಸ್ತ್ರ, ವಾತಾವರಣ ವಿಜ್ಞಾನ, ಜೈವಿಕ ವಿಜ್ಞಾನ, ವೈದ್ಯಕೀಯ, ಭೌತ ಶಾಸ್ತ್ರ, ವೈಮಾನಿಕ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತೀಯ ಸಂಸ್ಕೃತಿಯ ಕೊಡುಗೆಯನ್ನು ನಾವು ಕಾಣಬಹುದು. ದುರಾದೃಷ್ಟವೆಂದರೆ, ಈ ಜ್ಞಾನವನ್ನು ಸಂಪೂರ್ಣವಾಗಿ ನಮ್ಮಲ್ಲಿ ಬಳಸಿಕೊಳ್ಳಲಾಗಿಲ್ಲ, ಸಂಶೋಧನೆ ಮಾಡಿಲ್ಲ. 'ಶೂನ್ಯ' (ಸೊನ್ನೆ) ಮತ್ತು ಅನಂತತೆಯಂತಹ ಪರಿಕಲ್ಪನೆಯನ್ನು ಪ್ರಾಚೀನ ಋಷಿಗಳು ಕಂಡುಹಿಡಿದರು. ಆದರೆ, ಬೀಜಗಣಿತ, ಪೈಥಾಗರಸ್ ಪ್ರಮೇಯವನ್ನು ನಿಖರವಾಗಿ ಮತ್ತು ಕಾವ್ಯಾತ್ಮಕ ಶೈಲಿಯಲ್ಲಿ (ಸಂಸ್ಕೃತದಲ್ಲಿ) ವ್ಯಕ್ತಪಡಿಸಲಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಯ್ತು ಹೊಸ ಜಾತಿಯ ಮರ ; ಹೆಚ್ಚಿದ ಕುತೂಹಲ

"ವಿಮಾನ, ವಾಸ್ತುಶಿಲ್ಪ, ಸಮಯದ ಪರಿಕಲ್ಪನೆ, ಬ್ರಹ್ಮಾಂಡದ ರಚನೆ, ಅದು ಹೇಗೆ ವಿಕಸನಗೊಂಡಿತು ಮತ್ತು ಬೆಳೆಯಿತು, ಲೋಹಶಾಸ್ತ್ರ, ರಾಸಾಯನಿಕ ತಂತ್ರಜ್ಞಾನಗಳು, ಔಷಧ ಚಿಕಿತ್ಸೆ, ಭಾಷೆಗಳು, ವ್ಯಾಕರಣದ ರಚನೆ, ನ್ಯಾಯ, ಸಂಗೀತ, ಆಧ್ಯಾತ್ಮಿಕತೆ, ಯೋಗ ಶಾಸ್ತ್ರಗಳಂತಹ ಅನೇಕ ಪರಿಕಲ್ಪನೆಗಳನ್ನು ಸಂಸ್ಕೃತದಲ್ಲಿ ಸುಂದರವಾಗಿ ಅಭಿವ್ಯಕ್ತಗೊಳಿಸಲಾಗಿದೆ" ಎಂದರು.

"ಇನ್ನು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಂಸ್ಕೃತವನ್ನು ಹೆಚ್ಚು ಪ್ರೀತಿಸುತ್ತಾರೆ ಮತ್ತು ಅದನ್ನು ಕಂಪ್ಯೂಟಿಂಗ್ ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆಗಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡಲು ಸಾಕಷ್ಟು ಸಂಶೋಧನೆ ನಡೆಯುತ್ತಿದೆ" ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದರು.

ಇದನ್ನೂ ಓದಿ : ಜೀವಿಗಳ ಅಸ್ತಿತ್ವಕ್ಕೇ ಕುತ್ತು ತರಲಿದೆ ಹವಾಮಾನ ಬದಲಾವಣೆ : ಅಧ್ಯಯನ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.