ETV Bharat / bharat

ಇತರ ಧರ್ಮಗಳಂತೆ ಇಸ್ಲಾಂ ವಿಕಸನಗೊಳ್ಳಬೇಕಿದೆ: ತಸ್ಲೀಮಾ ನಸ್ರೀನ್

author img

By

Published : Jan 13, 2023, 2:06 PM IST

ಚಲನಚಿತ್ರ ನಟಿ ರಾಖಿ ಸಾವಂತ್ ತಾವು ಆದಿಲ್ ಖಾನ್ ಎಂಬಾತನ ಜೊತೆ ವಿವಾಹವಾಗಿರುವುದಾಗಿ ಇನ್​ಸ್ಟಾನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ತಾವಿಬ್ಬರೂ ಮದುವೆಯಾದ ಬಗ್ಗೆ ಮದುವೆ ಪ್ರಮಾಣಪತ್ರವನ್ನೂ ಶೇರ್ ಮಾಡಿದ್ದಾರೆ. ಈ ಪ್ರಮಾಣಪತ್ರದಲ್ಲಿ ರಾಖಿ ತನ್ನ ಹೆಸರನ್ನು ರಾಖಿ ಸಾವಂತ್ ಫಾತಿಮಾ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಇತರ ಧರ್ಮಗಳಂತೆ ಇಸ್ಲಾಂ ಧರ್ಮ ವಿಕಸನಗೊಳ್ಳಬೇಕಿದೆ: ತಸ್ಲೀಮಾ ನಸ್ರೀನ್
Islam has to evolve like other religions: Taslima Nasreen

ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಗೆಳೆಯ ಆದಿಲ್ ಖಾನ್ ಅವರನ್ನು ಮದುವೆಯಾದ ನಂತರ ತನ್ನ ಹೆಸರನ್ನು 'ರಾಖಿ ಸಾವಂತ್ ಫಾತಿಮಾ' ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಈ ಸುದ್ದಿಗೆ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ರಾಖಿ ಮತ್ತು ಆದಿಲ್ ಖಾನ್ ಅವರ ಮದುವೆಯ ಪ್ರಮಾಣಪತ್ರವು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ರಾಖಿ ಸಾವಂತ್ ಇಸ್ಲಾಮ್​ಗೆ ಮತಾಂತರವಾಗಿರುವ ಬಗ್ಗೆ ಊಹಾಪೋಹಗಳು ಹಬ್ಬಿವೆ.

ಇಸ್ಲಾಂ ಧರ್ಮದ ಬಗ್ಗೆ ಆಗಾಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ತಸ್ಲೀಮಾ ನಸ್ರೀನ್, ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರ ಮದುವೆಯ ಬಗ್ಗೆ ಟ್ವಿಟರ್​​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಸ್ಲಾಂ ಧರ್ಮವು ವಿಕಸನಗೊಳ್ಳಬೇಕಿದೆ ಮತ್ತು ಬೇರೊಂದು ನಂಬಿಕೆಯ ಸಂಬಂಧಗಳನ್ನು ಸ್ವೀಕರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ರಾಖಿ ತನ್ನ ಹೆಸರಿನೊಂದಿಗೆ ಫಾತಿಮಾ ಎಂದು ಸೇರಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ನಸ್ರೀನ್, ರಾಖಿ ಸಾವಂತ್ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಕಾರಣ ಇಸ್ಲಾಂಗೆ ಮತಾಂತರಗೊಳ್ಳಬೇಕಾಯಿತು. ಇತರ ಧರ್ಮಗಳಂತೆ ಇಸ್ಲಾಂ ಧರ್ಮವು ವಿಕಸನಗೊಳ್ಳಬೇಕು ಮತ್ತು ಅದು ಮುಸ್ಲಿಮರು ಮತ್ತು ಮುಸ್ಲಿಮೇತರರ ನಡುವಿನ ವಿವಾಹಗಳನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಇಸ್ಲಾಂ ವಿಕಸನಗೊಳ್ಳಬೇಕು ಮತ್ತು ವಿಮರ್ಶಾತ್ಮಕ ಪರಿಶೀಲನೆ, ವಾಕ್ ಸ್ವಾತಂತ್ರ್ಯ, ಪ್ರವಾದಿಗಳ ವ್ಯಂಗ್ಯಚಿತ್ರಗಳು, ಮಹಿಳಾ ಸಮಾನತೆ, ನಾಸ್ತಿಕತೆ, ಜಾತ್ಯತೀತತೆ, ವೈಚಾರಿಕತೆ, ಮುಸ್ಲಿಮೇತರ ಹಕ್ಕುಗಳು, ಮಾನವ ಹಕ್ಕುಗಳು, ನಾಗರಿಕತೆ ಇತ್ಯಾದಿಗಳನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ, ಆಧುನಿಕ ಸಮಾಜದಲ್ಲಿ ಅದಕ್ಕೆ ಸ್ಥಾನವಿಲ್ಲ ಎಂದು ನಸ್ರೀನ್ ಟ್ವೀಟ್​​ನಲ್ಲಿ ಬರೆದಿದ್ದಾರೆ. ಪ್ರವಾದಿಯ ಕುರಿತಾದ ಟ್ವೀಟ್​​ಗೆ ಬಂದ ಟ್ರೋಲ್​ ಗೆ ಕೂಡ ನಸ್ರೀನ್ ಕಮೆಂಟ್ ಮಾಡಿದ್ದು, ಅವರಿಗೆ 6 ವರ್ಷದ ಮಗು ಮತ್ತು ಅವರ ಸೊಸೆ ಸೇರಿದಂತೆ 13 ಹೆಂಡತಿಯರಿದ್ದರು. ನೀವು ಅವರ ತತ್ವಗಳನ್ನು ಅನುಸರಿಸಲು ಬಯಸುವಿರಾ? ಎಂದು ಪ್ರಶ್ನಿಸಿದ್ದಾರೆ.

ನಸ್ರೀನ್ 1994 ರಲ್ಲಿ ಬಾಂಗ್ಲಾದೇಶ ತೊರೆದರು. ಇಸ್ಲಾಂ ವಿರೋಧಿ ದೃಷ್ಟಿಕೋನಗಳಿಗಾಗಿ ಮೂಲಭೂತವಾದಿ ಸಂಘಟನೆಗಳಿಂದ ಅವರಿಗೆ ಕೊಲೆ ಬೆದರಿಕೆ ಬಂದಿದ್ದವು. ಬಾಂಗ್ಲಾದೇಶ ತೊರೆಯುವವರೆಗೂ ಅವರು ಅಜ್ಞಾತವಾಗಿ ಬದುಕಿದ್ದರು.

ರಾಖಿ ಸಾವಂತ್​ ವಿಚಾರಕ್ಕೆ ಬರುವುದಾದರೆ, ತಾನು 2022ರಲ್ಲಿ ಆದಿಲ್ ಖಾನ್​ರನ್ನು ವಿವಾಹವಾಗಿರುವುದಾಗಿ ರಾಖಿ ಬುಧವಾರ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಮದುವೆ ಪ್ರಮಾಣಪತ್ರದ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಇದರ ಪ್ರಕಾರ ಕಳೆದ ವರ್ಷ ಮೇ 29 ರಂದು ಮದುವೆ ನಡೆದಿದೆ. ಅಂತಿಮವಾಗಿ, ನಾನು ತುಂಬಾ ಉತ್ಸುಕಳಾಗಿದ್ದೇನೆ ಮತ್ತು ಮದುವೆಯಾಗಿದ್ದೇನೆ. ನನ್ನ ಪ್ರೀತಿಯು ಆದಿಲ್ ನಿನಗಾಗಿ ಯಾವಾಗಲೂ ಬೇಷರತ್ತಾದ ಪ್ರೀತಿಯಾಗಿದೆ ಎಂದು 44 ವರ್ಷದ ರಾಖಿ ಸಾವಂತ್​ ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ರಾಖಿ ಸಾವಂತ್ ಇದಕ್ಕೂ ಮುನ್ನ ರಿತೇಶ್ ರಾಜ್ ಎಂಬಾತರನ್ನು ಮದುವೆಯಾಗಿದ್ದರು. ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 15 ರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಾಖಿ ತನ್ನ ಗೆಳೆಯ ಅಭಿಷೇಕ್ ಅವಸ್ಥಿಯಿಂದ ಬಹಳ ಹಿಂದೆಯೇ ಬೇರೆಯಾಗಿದ್ದರು ಮತ್ತು ಇವರಿಬ್ಬರ ಸಂಬಂಧ ಬ್ರೇಕ್​​ ಅಪ್​ನಲ್ಲಿ ಕೊನೆಗೊಂಡಿತ್ತು.

ಇದನ್ನೂ ಓದಿ: ನಾನು ಫ್ಲವರ್ ಅಲ್ಲ ಫೈಯರ್.. ರಾಖಿ ಸಾವಂತ್ ಮಾತಿನ ಬಾಂಬ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.